ಮೈಸೂರು, ಮಾ.1(ಪಿಎಂ)- ವಿಜ್ಞಾನ ಬರಹದಲ್ಲಿ ತರ್ಕಬದ್ಧಗೊಳಿಸಲು, ಕಲ್ಪನಾ ಶಕ್ತಿ ಅಳವಡಿಸಲು ಅವಕಾಶವಿಲ್ಲ. ಹಾಗೆ ಮಾಡಿದರೆ ಅದು ವಿಜ್ಞಾನವಾಗಿ ಉಳಿಯಲು ಆಪತ್ತು ಎದುರಾದಂತೆ ಎಂದು ಹಿರಿಯ ಸಾಹಿತಿ ಜಿ.ರಾಮಕೃಷ್ಣ ಅಭಿಪ್ರಾಯಪಟ್ಟರು.
ಮೈಸೂರಿನ ಸಿಎಫ್‍ಟಿಆರ್‍ಐ, ನವದೆಹ ಲಿಯ ವಿಜ್ಞಾನ್ ಪ್ರಸಾರ್, ಮೈಸೂರು ವಿಜ್ಞಾನ ನಾಟಕೋತ್ಸವ ಸಮಿತಿ ಟ್ರಸ್ಟ್ ಸಂಯುಕ್ತಾ ಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ಮೈಸೂರು ವಿಜ್ಞಾನ ನಾಟಕೋ ತ್ಸವ ಅಂಗವಾಗಿ ಭಾನುವಾರ ಸಿಎಫ್‍ಟಿ ಆರ್‍ಐನ ಚೆಲುವಾಂಬ ಸಭಾಂಗಣದಲ್ಲಿ `ವೈಜ್ಞಾನಿಕ ಕಥೆಗಳು’ ಹಾಗೂ `ಜನಸಾಮಾನ್ಯ ರಲ್ಲಿ ವಿಜ್ಞಾನ’ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
`ಕಲ್ಪನಾಶಕ್ತಿ’ ಸಾಹಿತ್ಯದ ಒಂದು ತಂತ್ರ. ಅದನ್ನು ಯಾವ ಮಟ್ಟದಲ್ಲಿ ಸೀಮಿತವಾಗಿ ಬಳಸಬೇಕು ಎಂಬುದನ್ನು ಗಂಭೀರವಾಗಿ ಅವಲೋಕಿಸಬೇಕು. ಆಗ ಮಾತ್ರವೇ ಸಾಹಿತ್ಯ ಮತ್ತು ವಿಜ್ಞಾನ ಎರಡಕ್ಕೂ ಗುಣಾತ್ಮಕ ವಾದ ಅಂಶ ಲಭಿಸಲಿದೆ. ಕಥೆಯಲ್ಲಿ ತರ್ಕ ಬದ್ಧಗೊಳಿಸಲು ನಮಗೆ ಸ್ವಾತಂತ್ರ್ಯವಿದೆ. ಆದರೆ ವಿಜ್ಞಾನ ಕ್ಷೇತ್ರದಲ್ಲಿ ಅದೇ ರೀತಿ ಮಾಡುವುದು ಸೂಕ್ತವಲ್ಲ ಎಂದರು.
ಸಿಂಧೂ ಬಯಲಿನ ನಾಗರಿಕತೆ ಹಾಗೂ ಋಗ್ವೇದಕ್ಕೂ 1500 ವರ್ಷಗಳ ಅಂತರ ವಿದೆ. ನಾನು ವಿದ್ಯಾರ್ಥಿಯಾಗಿದ್ದಾಗ ಪ್ರಾಧ್ಯಾ ಪಕರೊಬ್ಬರು ಋಗ್ವೇದ ಮಂತ್ರವೇ ಸಿಂಧೂ ನಾಗರಿಕತೆಯಲ್ಲಿಯೂ ಇದೆ ಎನ್ನುತ್ತಿದ್ದರು. ಕಲ್ಪನಾಲೋಕದಲ್ಲಿ ವಿಹರಿಸಿದರೆ ಈ ರೀತಿ ಹೇಳಲು ಸಾಧ್ಯವಷ್ಟೆ. ನಾವು ವೈಜ್ಞಾನಿಕ ಸಾಹಿತ್ಯ ಕುರಿತು ಚರ್ಚೆ ಮಾಡುವಾಗ ಸಾಹಿ ತ್ಯದ ಅಂಶವೆಷ್ಟು? ವಿಜ್ಞಾನದ ಅಂಶವೆಷ್ಟು? ಎಂದು ಪರಿಶೀಲಿಸಬೇಕು ಎಂದರು.
`ನಾನೇಕೆ ವೈಜ್ಞಾನಿಕ ಕಥೆ ಬರೆದೆ?’ ಎಂಬ ಬಗ್ಗೆ ಮಾತನಾಡಿದ ಲೇಖಕ ಪ್ರೊ. ಕೆ.ಎನ್.ಗಣೇಶಯ್ಯ, ಕಥೆಗಾರಿಕೆಗೆ ಮೂಲವೇ ವೈಜ್ಞಾನಿಕ ಕಥೆಗಾರಿಕೆ. ವಿಜ್ಞಾನ ಕಥೆಗಾ ರಿಕೆ ಪ್ರಸ್ತುತತೆ ಇಂದು ಹೆಚ್ಚಿದೆ. ಕಥೆ ಮನ ರಂಜನೆಯೂ ಹೌದು, ಜ್ಞಾನ ಪ್ರಸಾರ ಮಾಧ್ಯಮವೂ ಹೌದು. ಅರಿವು ಹರಡು ವುದೇ ಕಥೆಗಾರಿಕೆಯ ಮೂಲ ಉದ್ದೇಶ. ಜನಪದಲ್ಲೂ ವೈಜ್ಞಾನಿಕ ಅಂಶಗಳನ್ನು ಗುರುತಿಸಬಹುದು ಎಂದರು. `ಮಹಾಸಂಪರ್ಕ- ಒಂದು ಹೊಳಹು’ ಕುರಿತು ಐಪಿಎಸ್ ಅಧಿ ಕಾರಿ ಸವಿತಾ ಶ್ರೀನಿವಾಸ್, `ಕನ್ನಡದಲ್ಲಿ ವೈಜ್ಞಾ ನಿಕ ಕಥೆಗಳು’ ಕುರಿತು ಹವ್ಯಾಸಿ ಪತ್ರಕರ್ತ ತೋನ್ಸೆ ಗಣೇಶ ಶೆಣೈ ಮಾತನಾಡಿದರು.