ವಾರ್ಡ್‍ನಲ್ಲಿ ಪೌರಕಾರ್ಮಿಕರ ಕೊರತೆ ಹಿನ್ನೆಲೆ; ವಿಭಿನ್ನ ರೀತಿ ಪ್ರತಿಭಟನೆ
ಮೈಸೂರು

ವಾರ್ಡ್‍ನಲ್ಲಿ ಪೌರಕಾರ್ಮಿಕರ ಕೊರತೆ ಹಿನ್ನೆಲೆ; ವಿಭಿನ್ನ ರೀತಿ ಪ್ರತಿಭಟನೆ

March 2, 2020

ಪಾಲಿಕೆ ಸದಸ್ಯೆಯಿಂದ ಕುಟುಂಬ ಸಮೇತ ಸ್ವಚ್ಛತಾ ಕಾರ್ಯ!
ಮೈಸೂರು, ಮಾ.1(ಪಿಎಂ)- ಪೌರಕಾರ್ಮಿಕರ ಕೊರತೆ ಹಿನ್ನೆಲೆಯಲ್ಲಿ 61ನೇ ವಾರ್ಡ್‍ನ ಸ್ವಚ್ಛತೆ ಕಾಪಾಡಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಪಾಲಿಕೆ ಸದಸ್ಯೆ ಶೋಭಾ ಸುನೀಲ್, ಭಾನುವಾರ ವಾರ್ಡಿನಲ್ಲಿ ಕುಟುಂಬ ಸಮೇತ ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ವಿನೂತನ ರೀತಿ ಪ್ರತಿಭಟನೆ ವ್ಯಕ್ತಪಡಿಸಿದರು.

ಕುಟುಂಬ ಸಮೇತ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿದರು. ವಾರ್ಡಿನ ಹಲವೆಡೆ ಸ್ವಚ್ಛತಾ ಕಾರ್ಯ ನಡೆಸಿ ಪೌರಕಾರ್ಮಿಕರ ಕೊರತೆ ನೀಗಿಸಿ ಎಂದು ಪಾಲಿಕೆಯನ್ನು ಒತ್ತಾಯಿಸಿದರು.

500 ಜನಸಂಖ್ಯೆಗೆ ಒಬ್ಬ ಪೌರಕಾರ್ಮಿಕರನ್ನು ನಿಯೋಜಿಸುವ ನಿಯಮವನ್ನು ಬದಲಿಸಿದ ಸರ್ಕಾರ, 700 ಜನಸಂಖ್ಯೆಗೆ ಒಬ್ಬ ಪೌರಕಾರ್ಮಿಕರು ಕೆಲಸ ಮಾಡುವಂತೆ ನಿಯಮ ರೂಪಿಸಿದೆ. ಅದರಂತೆ ಪಾಲಿಕೆ ಕ್ರಮ ಕೈಗೊಂಡಿದೆ. ಬದಲಾದ ನಿಯಮದಂತೆ ನಮ್ಮ ವಾರ್ಡ್‍ನ ಜನಸಂಖ್ಯೆಗೆ ಅನುಗುಣವಾಗಿ 25 ಪೌರಕಾರ್ಮಿಕರನ್ನು ನೀಡಲಾ ಗಿತ್ತು. ಅವರಲ್ಲಿ ಐವರು ಮೃತಪಟ್ಟಿದ್ದರೆ, ಇಬ್ಬರು ನಿವೃತ್ತರಾಗಿದ್ದಾರೆ. ಖಾಲಿಯಾದ ಜಾಗಕ್ಕೆ ಮತ್ತೆ ಪೌರಕಾರ್ಮಿಕರನ್ನು ನೀಡಿಲ್ಲ ಎಂದು ಆಕ್ಷೇಪಿಸಿದರು.

ಇದರಿಂದ ವಾರ್ಡಿನಲ್ಲಿ ಸ್ವಚ್ಛತೆ ಸಮರ್ಪಕವಾಗಿ ನಡೆಯದೇ ನಾಗಕರಿಕರು ಅಸಮಾ ಧಾನ ವ್ಯಕ್ತಪಡಿಸುತ್ತಿದ್ದಾರೆ. ಪೌರಕಾರ್ಮಿಕರನ್ನು ನೀಡುವಂತೆ ವರ್ಷದಿಂದ ಮನವಿ ಮಾಡಿ ದರೂ ಪ್ರಯೋಜನವಾಗಿಲ್ಲ ಎಂದು ಶೋಭಾ ಬೇಸರ ವ್ಯಕ್ತಪಡಿಸಿದರು. ಅವರ ಪತಿ ಸುನೀಲ್, ಮಕ್ಕಳಾದ ಪ್ರಿಯಾಂಕ, ಅಶ್ವಿನಿ, ಲಕ್ಷ್ಮೀ, ಮಾದೇಶ್ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Translate »