ವನ್ಯಜೀವಿ ಸಂರಕ್ಷಣೆ, ಕಾಡಂಚಿನ ಗ್ರಾಮಗಳ ಜನರ ಹಿತ ಕಾಪಾಡುವ ಸಂಬಂಧ ಸಂವಾದ
ಮೈಸೂರು,ಮಾ.1(ಎಂಟಿವೈ)- ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸಲು ಆಯ್ಕೆಯಾಗಿ ಮೈಸೂರಿನ `ಆಡಳಿತ ತರಬೇತಿ ಸಂಸ್ಥೆ’ (ಎಟಿಐ)ಯಲ್ಲಿ ತರಬೇತಿ ಪಡೆಯುತ್ತಿರುವ 40 ವೈದ್ಯರು ಮತ್ತು ಇಬ್ಬರು ಸಿಬ್ಬಂದಿಗಳ ತಂಡ ಬಂಡೀಪುರದ ಕ್ಯಾಂಪಸ್‍ನಲ್ಲಿ ಭಾನುವಾರ ಒಂದು ದಿನದ ಕಾರ್ಯಾ ಗಾರದಲ್ಲಿ ಪಾಲ್ಗೊಂಡು, ವನ್ಯಜೀವಿ ಸಂರಕ್ಷಣೆ, ಕಾಡಂಚಿನ ಗ್ರಾಮಗಳ ಜನರ ಹಿತ ಕಾಪಾಡುವ ಬಗೆಗೆ ಸಂವಾದ ನಡೆಸಿ ಅರಿವು ಹೆಚ್ಚಿಸಿಕೊಂಡರು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಎಟಿಐ ಹಾಗೂ ವೈಲ್ಡ್‍ಲೈಫ್ ಕನ್ಸರ್ವೇ ಷನ್ ಫೌಂಡೇಷನ್ ಸಂಯುಕ್ತಾಶ್ರಯದ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದವರಲ್ಲಿ 20 ವೈದ್ಯರು ಮತ್ತು 20 ಪಶುವೈದ್ಯರಿದ್ದರು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇ ಶದ ಕುರಿತು ಎಸಿಎಫ್ ರವಿಕುಮಾರ್ ಅವರು ಪ್ರಾತ್ಯಕ್ಷಿಕೆ ಮೂಲಕ ವೈದ್ಯರ ತಂಡಕ್ಕೆ ಮಾಹಿತಿ ನೀಡಿದರು.
`1024 ಚ.ಕಿ.ಮೀ ವ್ಯಾಪ್ತಿಯಲ್ಲಿ ಬಂಡೀ ಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪಿಸಿದೆ. ಆಡಳಿತ ಹಾಗೂ ಅರಣ್ಯ ಸಂರಕ್ಷಣೆ ದೃಷ್ಟಿ ಯಿಂದ ಬಂಡೀಪುರ, ಗುಂಡ್ಲುಪೇಟೆ ಹಾಗೂ ಹೆಡಿಯಾಲ ಎಂದು 3 ಉಪ ವಿಭಾಗಗ ಳಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ಬಂಡೀ ಪುರ, ಗೋಪಾಲಸ್ವಾಮಿ ಬೆಟ್ಟ, ಮೂಲೆ ಹೊಳೆ, ಗುಂಡ್ಲುಪೇಟೆ, ಮದ್ದೂರು, ಓಂಕಾರ್, ಕುಂದಕೆರೆ, ಹೆಡಿಯಾಲ, ನುಗು, ಮಳೆಯೂರು, ಕಲ್ಕೆರೆ, ಎನ್.ಬೇಗೂರು ಹಾಗೂ ಗುಂಡ್ರೆ ವಲಯಗಳು ಸೇರಿವೆ. ಕಾಡಂಚಿನ ಗ್ರಾಮಗಳ ಹಿತಕಾಯಲು ಇಲಾಖೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ವನ್ಯಜೀವಿ-ಮಾನವ ಸಂಘರ್ಷ ತಡೆಗೂ ಕ್ರಮಕೈಗೊಳ್ಳಲಾಗಿದೆ. ವನ್ಯ ಜೀವಿಗಳಿಂದ ಬೆಳೆಹಾನಿ ಉಂಟಾದರೆ ತಕ್ಷಣಕ್ಕೆ ಸ್ಪಂದಿಸಿ ಪರಿಹಾರ ನೀಡಲಾಗು ತ್ತಿದೆ’ ಎಂದು ವಿವರಿಸಿದರು.
ವೈಲ್ಡ್‍ಲೈಫ್ ಕನ್ಸರ್‍ವೇಷನ್ ಫೌಂಡೇ ಷನ್ ಮುಖ್ಯಸ್ಥ ರಾಜಕುಮಾರ್ ಡಿ.ಅರಸ್ ಮಾತನಾಡಿ, ಬಂಡೀಪುರ ಹುಲಿ ಸಂರ ಕ್ಷಿತ ಪ್ರದೇಶದಲ್ಲಿ ವನ್ಯಸಂಪತ್ತಿನ ಸಂರ ಕ್ಷಣೆಗೆ ಹಲವು ಕ್ರಮಗಳನ್ನು ಕೈಗೊಳ್ಳ ಲಾಗುತ್ತಿದೆ. ಪರಿಣಾಮ ಅರಣ್ಯ ವ್ಯಾಪ್ತಿಯ ಅಪರಾಧಗಳ ಸಂಖ್ಯೆ ಗಣನೀಯ ಪ್ರಮಾಣ ದಲ್ಲಿ ತಗ್ಗಿದೆ. ಕಳ್ಳಬೇಟೆ ತಡೆಗೆ 52 ಶಿಬಿರ ಗಳಿದ್ದು, ಸಿಬ್ಬಂದಿಗಳು ದಿನದ 24 ಗಂಟೆಯೂ ಅರಣ್ಯ ರಕ್ಷಣೆ ಕಾರ್ಯದಲ್ಲಿ ನಿರತರಾಗಿರು ತ್ತಾರೆ. ಬೇಸಿಗೆ ವೇಳೆ ಬೆಂಕಿ ಅವಘಡದಿಂದ ಅರಣ್ಯ ರಕ್ಷಿಸುವುದು ಸವಾಲಿನ ಕೆಲಸ. ಕಾಡಂ ಚಿನ ಗ್ರಾಮಗಳ ಜನರ ವಿಶ್ವಾಸ ಗಳಿಸಿ ಕೊಂಡು ಅರಣ್ಯ ಸಂಪತ್ತಿನ ರಕ್ಷಣೆ ಮಾಡ ಬೇಕು. ಅದಕ್ಕಾಗಿ ಕಾಡಂಚಿನ ಗ್ರಾಮಗಳ ಜನರು ತಮ್ಮ ಭೂಮಿಯಲ್ಲಿ ಬೆಳೆದಿರುವ ಬೆಳೆಯನ್ನು ಕಾಡುಪ್ರಾಣಿಗಳಿಂದ ರಕ್ಷಿಸಿ ಕೊಳ್ಳಲು ಶೇ.50ರಷ್ಟು ರಿಯಾಯಿತಿ ದರ ದಲ್ಲಿ ಸೋಲಾರ್ ಬೇಲಿ ಅಳವಡಿಸುವು ದಕ್ಕೆ ಅರಣ್ಯ ಇಲಾಖೆ ನೆರವಾಗುತ್ತಿದೆ. ಇದೊಂದು ಯಶಸ್ವಿ ಕಾರ್ಯಕ್ರಮವಾ ಗಿದೆ ಎಂದು ವಿವರ ನೀಡಿದರು.
ಬಳಿಕ ವೈದ್ಯರ ತಂಡ ಕಾಡಂಚಿನ ಮಂಗಲ ಗ್ರಾಮಕ್ಕೆ ತೆರಳಿ ಅಲ್ಲಿನ ಜನರೊಂದಿಗೆ ಸಂವಾದ ನಡೆಸಿತು. ಅವರು ಎದುರಿಸುತ್ತಿರುವ ಸಮಸ್ಯೆ ಗಳ ಮಾಹಿತಿ ಪಡೆಯಿತು. ಕಾಡು ಪ್ರಾಣಿ ಗಳಿಗೆ ಬರುವ ರೋಗ, ಸ್ಥಳೀಯವಾಗಿ ನೀಡುವ ಚಿಕಿತ್ಸೆ, ವನ್ಯಜೀವಿಗಳ ಜೀವನ ಕ್ರಮದ ಬಗೆಗೂ ತಿಳಿದುಕೊಂಡಿತು.
ಈ ಸಂದರ್ಭ ಗೋಪಾಲಸ್ವಾಮಿ ಬೆಟ್ಟ ವಲಯದ ಆರ್‍ಎಫ್‍ಓ ನವೀನ್‍ಕುಮಾರ್, ಆಡಳಿತ ತರಬೇತಿ ಸಂಸ್ಥೆಯ ಸೌಮ್ಯ ಸತೀಶ್, ನೇಚರ್ ವಾಕರ್ ಅನಿಲ್‍ಕುಮಾರ್, ಪತ್ರಕರ್ತ ಎಂ.ಟಿ.ಯೋಗೇಶ್‍ಕುಮಾರ್ ಮತ್ತಿತರಿದ್ದರು.