ಕರ್ನಾಟಕದಲ್ಲಿ ಕನ್ನಡ ಕಲಾವಿದÀರಿಗೆ ಪ್ರೋತ್ಸಾಹವಿಲ್ಲ ಹಿರಿಯ ಕಲಾವಿದೆ ಗಿರಿಜಾ ಲೋಕೇಶ್ ಬೇಸರ
ಮೈಸೂರು

ಕರ್ನಾಟಕದಲ್ಲಿ ಕನ್ನಡ ಕಲಾವಿದÀರಿಗೆ ಪ್ರೋತ್ಸಾಹವಿಲ್ಲ ಹಿರಿಯ ಕಲಾವಿದೆ ಗಿರಿಜಾ ಲೋಕೇಶ್ ಬೇಸರ

March 2, 2020

ಮೈಸೂರು,ಮಾ.1(ಆರ್‍ಕೆ)- ಕರ್ನಾಟಕ ರಾಜ್ಯದಲ್ಲಿ ಕನ್ನಡ ಕಲಾವಿದರಿಗೆ ಪ್ರೋತ್ಸಾಹ ದೊರೆಯುತ್ತಿಲ್ಲ ಎಂದು ಹಿರಿಯ ರಂಗ ಕರ್ಮಿ ಹಾಗೂ ಚಲನಚಿತ್ರ ಪೋಷಕ ನಟಿ ಗಿರಿಜಾ ಲೋಕೇಶ್ ಅವರು ಇಂದಿಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿ ನಲ್ಲಿ ಆಯೋಜಿಸಿದ್ದ ಲಲಿತ ಕಲಾ ಸಂಘದ 20ರ ಸಂಭ್ರಮ ಸಮಾರೋಪ ಸಮಾ ರಂಭದಲ್ಲಿ ಪಾಲ್ಗೊಂಡು ಮಾತನಾಡು ತ್ತಿದ್ದ ಅವರು, ನಾವು ಬೇರೆ ಭಾಷೆಯ ಕಲಾ ವಿದರನ್ನು ಪ್ರೋತ್ಸಾಹಿಸುತ್ತೇವೆಯೇ ಹೊರತು ಅದೇಕೋ ಏನೋ ಕನ್ನಡ ಭಾಷೆಯ ಕಲಾ ವಿದರಿಗೆ ಪ್ರೇರಣೆ ನೀಡುವುದಿಲ್ಲ ಎಂದರು.

ಕಲೆಯ ಬಗ್ಗೆ ಆಸಕ್ತಿ ಇರುವವರು ಶಿಕ್ಷಣ ಮುಗಿಸಿ ಕೆಲಸಕ್ಕೆ ಸೇರಿಕೊಂಡು ಮೊದಲು ಜೀವನಕ್ಕೆ ಆಧಾರ ಮಾಡಿಕೊಂಡು ನಂತರ ವಷ್ಟೇ ಕಲೆಯನ್ನು ಪ್ರವೃತ್ತಿಯನ್ನಾಗಿಸಿ ಕೊಳ್ಳಿ ಎಂದು ಯುವ ಸಮುದಾಯಕ್ಕೆ ಸಲಹೆ ನೀಡಿದ ಅವರು, ನಿಮಗೆ ಯಾವುದ ರಲ್ಲಿ ಆಸಕ್ತಿ ಇದೆಯೋ ಅದರಲ್ಲಿ ಮುಂದುವ ರೆಯಿರಿ ಎಂದು ಕಿವಿಮಾತು ಹೇಳಿದರು.

ಕಲೆಯ ಬಗ್ಗೆ ತರಬೇತಿ ಪಡೆದಿದ್ದುದೇ ಮುಂದೆ ನನಗೆ, ನಮ್ಮ ಕುಟುಂಬಕ್ಕೆ ಜೀವನೋ ಪಾಯವಾಯಿತು. ವ್ಯಾಪಾರದಲ್ಲಿ ನಷ್ಟ ಅನು ಭವಿಸಿದ್ದರಿಂದ ಸುಬ್ಬಯ್ಯ ನಾಯ್ದು ಅವರು ಮಗ ಲೋಕೇಶರನ್ನು ಕರ್ನಾಟಕಕ್ಕೆ ಕರೆ ತಂದು ರಂಗಭೂಮಿಯಲ್ಲಿ ತರಬೇತಿ ಕೊಡಿ ಸಿದ್ದು, ಮುಂದೆ ಆ ಕಲೆಯೇ ಜೀವನಾ ಧಾರವಾಯಿತು ಎಂದು ತಮ್ಮ ಹಾಗೂ ಪತಿ ಲೋಕೇಶ ಅವರ ಜೀವನ ಪಯಣ ವನ್ನು ಗಿರಿಜಾ ಅವರು ಮೆಲುಕು ಹಾಕಿದರು.

ಹೊಟ್ಟೆ ತುಂಬ ಊಟ, ಕಣ್ತುಂಬ ನಿದ್ರೆ ಇದ್ದವರೇ ಶ್ರೀಮಂತರು. ಆದರೆ ಇಂದು ಕೊಳ್ಳುಬಾಕ ಸಂಸ್ಕøತಿಯಿಂದಾಗಿ ಎಷ್ಟೇ ಹಣದ ಸಿರಿವಂತಿಕೆ ಇದ್ದರೂ. ನಿಜವಾದ ಶ್ರೀಮಂತಿಕೆಗೆ ಕೊರತೆ ಇದೆ ಎಂದ ಅವರು, ದಸರಾ ವೇಳೆ ಅಲಂಕೃತಗೊಂಡ ರಾಜರು ಮೆರವಣಿಗೆಯಲ್ಲಿ ಸಾಗುತ್ತಿದ್ದರೆ ಅದನ್ನು ಕಣ್ತುಂಬಿಕೊಂಡ ಜನರು ದೈವೀಭಾವನೆ ಯಿಂದ ಭಕ್ತಿ ತೋರುತ್ತಿದ್ದರು. ಆದರೆ, ಈಗ ಶ್ರೀಮಂತರನ್ನು ನೋಡಿದರೆ ನಾವೂ ಅವರಂತಾಗಬೇಕೆಂದು ಬಯಸುವವರೇ ಹೆಚ್ಚು ಎಂದು ನುಡಿದರು.

ಹಿಂದೆ ಸಿನೆಮಾಗಿಂದ ರಂಗಭೂಮಿಗೆ ಹೆಚ್ಚು ಪ್ರಾಧಾನ್ಯತೆ ಇತ್ತು. ಅವರ ಅಭಿ ನಯವು ಪ್ರೇಕ್ಷಕರನ್ನೇ ಪಾತ್ರವಾಗಿಸುತ್ತಿತ್ತು. ನಾವು ಸಹ ಯಾರ ಮರ್ಜಿಗೂ ಒಳಗಾ ಗದೆ ಸ್ವಯಂ ಪ್ರಯತ್ನದಿಂದ ಕನ್ನಡ ನಾಡಿನ ಕಲೆಯನ್ನು ಪ್ರೋತ್ಸಾಹಿಸಿದೆವು ಎಂದ ಗಿರಿಜಾ ಲೋಕೇಶ್, ನಮ್ಮ ದುಡಿಮೆಯಿಂದ ಸಂಕಷ್ಟದಲ್ಲಿರುವ 6 ಮಂದಿ ಹಿರಿಯ ರಂಗ ಭೂಮಿ ಕಲಾವಿದರ ಆರೋಗ್ಯ, ಯೋಗ ಕ್ಷೇಮ ನೋಡಿಕೊಳ್ಳುತ್ತಿದ್ದೇವೆ ಎಂಬು ದಷ್ಟೇ ಸಮಾಧಾನ ಎಂದರು.

ಕಾಲೇಜು ಪ್ರಾಂಶುಪಾಲ ಪ್ರೊ. ಎಸ್.ಬಿ. ಶಾಂತಪ್ಪನವರ್, ಲಲಿತಕಲಾ ಸಂಘದ ಸಂಚಾಲಕಿ ಟಿ.ಶೀಲಾಕುಮಾರಿ, ಪ್ರೊ. ಟಿ.ಎಸ್. ವೇಣುಗೋಪಾಲ್, ರೂಪಶ್ರೀ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿ ದ್ದರು. ವಿದುಷಿ ಡಾ.ವಸುಂಧರಾ ದೊರೆ ಸ್ವಾಮಿ, ಡಾ. ಸುಕನ್ಯಾ ಪ್ರಭಾಕರ್ ಹಾಗೂ ನಟ ಮಂಡ್ಯ ರಮೇಶ್ ಅವರು ನಂತರ ನಡೆದ ಕಲಾ ಪ್ರದರ್ಶನ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.

Translate »