ಬಿಜೆಪಿಯಲ್ಲಿ ತುಂಬಾ ಗೌರವವಿದೆ: ರಮೇಶ್ ಜಾರಕಿಹೊಳಿ
ಮೈಸೂರು

ಬಿಜೆಪಿಯಲ್ಲಿ ತುಂಬಾ ಗೌರವವಿದೆ: ರಮೇಶ್ ಜಾರಕಿಹೊಳಿ

May 29, 2020

ಮೈಸೂರು,ಮೇ28(ಆರ್‍ಕೆಬಿ)- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನನ್ನನ್ನು ಸಹಜವಾದ ಪ್ರೀತಿ, ವಿಶ್ವಾಸದಿಂದ ನೋಡಿಕೊಳ್ಳುತ್ತಿದ್ದಾರೆ. ಬಿಜೆಪಿಯಲ್ಲಿ ನನಗೆ ತುಂಬಾ ಗೌರವವೂ ಸಿಗುತ್ತಿದೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ಮೈಸೂರಿನ ಚಾಮರಾಜ ಪುರಂನಲ್ಲಿರುವ ಬಿಜೆಪಿ ಕಚೇರಿ ರಾಜೇಂದ್ರ ಭವನಕ್ಕೆ ಭೇಟಿ ನೀಡಿದಾಗ ನೀಡಿದ ಗೌರವ ಸ್ವೀಕರಿಸಿದ ಸಚಿವರು ಪಕ್ಷದ ಕಾರ್ಯಕರ್ತ ರನ್ನುದ್ದೇಶಿಸಿ ಮಾತನಾಡಿದರು. ಆರ್‍ಎಸ್‍ಎಸ್‍ನ ಅನೇಕ ಹಿರಿಯರು ಕಟ್ಟಿ ಬೆಳೆಸಿದ ಈ ಪಕ್ಷಕ್ಕೆ ಬಂದ ನಂತರ ನನ್ನಲ್ಲಿ ಇನ್ನಷ್ಟು ದೇಶಾಭಿಮಾನ ಮೂಡಿದೆ ಎಂದರು.

ಕಾಂಗ್ರೆಸ್‍ನಲ್ಲಿ ನನ್ನನ್ನು ನಡೆಸಿಕೊಂಡ ರೀತಿ ಸರಿಯಿರಲಿಲ್ಲ. ಅಲ್ಲಿದ್ದ 22 ವರ್ಷ ಗಳಲ್ಲಿ ಸಿಗದ ಗೌರವ ಬಿಜೆಪಿಯಲ್ಲಿ ಕೇವಲ 3 ತಿಂಗಳಲ್ಲಿ ಕಂಡಿದ್ದೇನೆ ಎಂದರು. ಸಂಸದ ಪ್ರತಾಪ್ ಸಿಂಹ, ಮಾಜಿ ಸಂಸದ ಸಿ.ಹೆಚ್. ವಿಜಯಶಂಕರ್, ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೌಟಿಲ್ಯ ರಘು, ಮಾಜಿ ಎಂಎಲ್‍ಸಿ ಸಿದ್ದರಾಜು, ಮುಖಂಡರಾದ ಅಪ್ಪಣ್ಣ, ಬಿಜೆಪಿ ನಗರ ಪ್ರಧಾನ ಕಾರ್ಯ ದರ್ಶಿಗಳಾದ ಹೆಚ್.ಜಿ.ಗಿರಿಧರ್, ಸೋಮ ಸುಂದರ್ ಇನ್ನಿತರರು ಸಭೆಯಲ್ಲಿದ್ದರು.

Translate »