ಈಗಲೂ ಇವಿಎಂಗಳ ಮೇಲಿನ ಅನುಮಾನ ಕಾಡುತ್ತಿದೆ
ಮೈಸೂರು

ಈಗಲೂ ಇವಿಎಂಗಳ ಮೇಲಿನ ಅನುಮಾನ ಕಾಡುತ್ತಿದೆ

June 4, 2019

ಮೈಸೂರು: ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದ್ದು, ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ಯದ್ವಾ ತದ್ವಾ ಲೀಡ್ ಬಂದಿದ್ದ ಕಡೆ ಕಾಂಗ್ರೆಸ್‍ಗೆ ಹೆಚ್ಚು ಮತ ಲಭಿಸಿರು ವುದು ಇವಿಎಂ ಮೇಲಿನ ಅನುಮಾನಕ್ಕೆ ಪುಷ್ಟಿ ನೀಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಇವಿಎಂಗಳ ಮೇಲೆ ಅನುಮಾನ ವ್ಯಕ್ತ ಪಡಿಸಿದ್ದಾರೆ.

ಮೈಸೂರಿನ ರಾಮಕೃಷ್ಣನಗರದ ಲ್ಲಿರುವ ತಮ್ಮ ನಿವಾಸದ ಬಳಿ ಸೋಮ ವಾರ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು. ಸ್ಥಳೀಯ ಸಂಸ್ಥೆಗಳಿಗೆ ನಡೆದಿರುವ ಚುನಾವಣೆಯ ಫಲಿತಾಂಶ ನೋಡಿದರೆ ನನ್ನ ಅನುಮಾನ ಈಗಲೂ ಕಾಡುತ್ತಿದೆ. ಲೋಕಸಭಾ ಚುನಾ ವಣೆಯಲ್ಲಿ ಎಲ್ಲೆಲ್ಲಿ ಬಿಜೆಪಿಗೆ ಯದ್ವಾ-ತದ್ವಾ ಲೀಡ್ ಬಂದಿತ್ತೋ ಅಲ್ಲೆಲ್ಲಾ ಕಾಂಗ್ರೆಸ್‍ಗೆ ಲೀಡ್ ಬಂದಿದೆ. ಬಿಜೆಪಿ ಯವರು ಇವಿಎಂ ಮ್ಯಾನಿಪ್ಲೇಟ್ ಮಾಡ್ತಾರೆ ಅನ್ನುವ ಅನುಮಾನ ಮತ್ತಷ್ಟು ದಟ್ಟವಾಗಿದೆ. ಪ್ರತಿ ಬಾರಿಯೂ ಚುನಾ ವಣೆಗಳಲ್ಲೂ ಜನರು ಸ್ಥಳೀಯ ವಿಚಾರಗಳ ಮೇಲೆ ಮತ ಹಾಕುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ದೇಶದ ವಿಚಾರ ಇಟ್ಟುಕೊಂಡು ಮತ ಹಾಕಿದರೆ, ಸ್ಥಳೀಯ ಸಂಸ್ಥೆಯಲ್ಲಿ ಲೋಕಲ್ ವಿಚಾರ ಇಟ್ಟುಕೊಂಡು ಮತ ಕೊಟ್ಟಿದ್ದಾರೆ. ಒಂದೊಂದು ಚುನಾವಣೆಯಲ್ಲೂ ವಿಚಾರ, ಫಲಿತಾಂಶ ವ್ಯತ್ಯಾಸವಾಗಲಿದೆ ಎಂದರು.

ಹಿಂದಿ ಹೇರಿಕೆ ಹುನ್ನಾರ: ತ್ರಿಭಾಷಾ ಶಿಕ್ಷಣ ನೀತಿಜಾರಿಗೆ ತರುತ್ತಿರುವುದು ಹಿಂದಿ ಭಾಷೆ ಹೇರಿಕೆ ಮಾಡುವ ಹುನ್ನಾರ ಅಡಗಿದೆ ಎಂದು ಕಿಡಿಕಾರಿ ದರು. ನಾವೇನಾದರೂ ಹಿಂದಿ ಭಾಷೆ ಬೇಕೆಂದು ಕೇಳಿಕೊಂಡಿಲ್ಲ. ಕೇಂದ್ರ ಸರಕಾರ ಇದಕ್ಕೆ ನೀತಿ ತರುತ್ತಿರು ವುದರಿಂದ ನಮ್ಮ ಮೇಲೆ ಬಲವಂತದ ಏರಿಕೆಯಾಗಿದೆ ಎಂದು ದೂರಿದರು.

ನೆಲ, ಜಲ, ಭಾಷೆ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ. ಬಲವಂತವಾಗಿ ಯೋಜನೆ ಜಾರಿಗೆ ಮುಂದಾದರೆ ನಾವು ತಮಿಳು ನಾಡಿನಂತೆ ರಾಜ್ಯದಲ್ಲೂ ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದರು. ಸಚಿವ ಸಂಪುಟ ವಿಸ್ತರಣೆ, ಪುನರ್ ರಚನೆ ಕುರಿತಂತೆ ಹೈಕಮಾಂಡ್ ನೋಡಿಕೊಳ್ಳ ಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿ ದರು. ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‍ಕುಮಾರ್, ಮುಖಂಡರುಗಳಾದ ಕೆ.ಎಸ್.ಶಿವ ರಾಮು, ಮೈಸೂರು ಬಸವಣ್ಣ ಸೇರಿ ದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »