ಮೈಸೂರು, ಜು.15(ಆರ್‍ಕೆಬಿ)- ರಾಜ್ಯ ಸರ್ಕಾರ ಸದನದಲ್ಲಿ ಚರ್ಚೆಗೊಳಪಡಿಸದೆ, ವಿಪಕ್ಷ ನಾಯಕರ ವಿರೋಧವನ್ನೂ ಲೆಕ್ಕಿ ಸದೇ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಸುಗ್ರೀವಾಜ್ಞೆಗೆ ರಾಜ್ಯಪಾಲರಿಂದ ಅಂಕಿತ ಹಾಕಿಸಿ ಜಾರಿಗೆ ಮುಂದಾಗಿರುವುದನ್ನು ನೋಡಿದರೆ ಇದೊಂದು ಭಂಡ ಸರ್ಕಾರ ಎನಿಸುತ್ತದೆ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ ಕಿಡಿಕಾರಿದ್ದಾರೆ.
ಮೈಸೂರಿನ ಇಂದಿರಾ ಗಾಂಧಿ ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ವಿಶೇಷ ಅಧಿವೇಶನ ಕರೆಯದೇ, 1961ರಲ್ಲಿ ಅಂದಿನ ಮುಖ್ಯ ಮಂತ್ರಿ ಡಿ.ದೇವರಾಜ ಅರಸು ಅವರು ಕ್ರಾಂತಿಕಾರಕ ಭೂಸುಧಾರಣಾ ಕಾಯ್ದೆ ಜಾರಿ ಮಾಡಿದ್ದರು. ಅದನ್ನು ಈಗ ತಿದ್ದು ಪಡಿ ಮಾಡದಂತೆ ವಿಪಕ್ಷ ನಾಯಕ ಸಿದ್ದ ರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಕೆಲ ದಿನಗಳಿಂದ ಪ್ರತಿಭಟನೆ ನಡೆಸಿತ್ತು. ರೈತರು, ದಲಿತ ವರ್ಗದವರು ಹೋರಾಟ ನಡೆಸಿ ದ್ದರು. ಆದರೆ ಇದಾವುದನ್ನೂ ಲೆಕ್ಕಕ್ಕಿಡದ ರಾಜ್ಯ ಬಿಜೆಪಿ ಸರ್ಕಾರ, ಜನ ಬೀದಿ ಗಿಳಿದು ಚಳವಳಿ ಮಾಡಲಾಗದ ಸಂದರ್ಭ ನೋಡಿಕೊಂಡು ಕರಾಳ ಕಾಯ್ದೆ ಜಾರಿ ಗೊಳಿಸುತ್ತಿದೆ. ವಿಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಜನವಿರೋಧಿ ಕಾಯ್ದೆ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿ.ಎಸ್.ಯಡಿಯೂರಪ್ಪ ಭೂ ಮಾಫಿಯಾ ಒತ್ತಡಕ್ಕೆ ಮಣಿದು ಈ ಕಾಯ್ದೆ ತಂದಿ ದ್ದಾರೆ. ಇದರಿಂದ ಕೃಷಿ ಜಮೀನು ಮಾರು ಕಟ್ಟೆ ವಸ್ತುವಾಗಲಿದೆ. ಕೃಷಿ ಚಟುವಟಿಕೆ ಕುಂಠಿತವಾಗಲಿದೆ. ಆಹಾರ ಉತ್ಪಾದನೆಯೂ ಕುಸಿಯಲಿದೆ. 1974ರ ಹಿಂದೆ ಇದ್ದ ಜಮೀನ್ದಾರಿ ಪದ್ಧತಿ ಮರುಕಳಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸರ್ಕಾರದ ಈ ರೈತ ವಿರೋಧಿ, ಜನ ವಿರೋಧಿ ನಡೆ ವಿರುದ್ಧ ಕಾಂಗ್ರೆಸ್ ಸದನದಲ್ಲಿ ಹೋರಾಟ ನಡೆಸಲಿದೆ. ರಾಜ್ಯಾದÀ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.