ಈ ಸಲ ದೇವೇಗೌಡರ ಕುಟುಂಬದಿಂದ ನಾಲ್ವರ ಸ್ಪರ್ಧೆ
News

ಈ ಸಲ ದೇವೇಗೌಡರ ಕುಟುಂಬದಿಂದ ನಾಲ್ವರ ಸ್ಪರ್ಧೆ

December 17, 2022

ಬೆಂಗಳೂರು, ಡಿ.16 (ಕೆಎಂಶಿ)- ಮುಂಬ ರುವ ವಿಧಾನಸಭಾ ಚುನಾವಣೆಯಲ್ಲಿ ದೇವೇ ಗೌಡರ ಕುಟುಂಬದಿಂದ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೇರಿ ದಂತೆ ನಾಲ್ಕು ಮಂದಿ ಕಣಕ್ಕಿಳಿಯಲಿದ್ದಾರೆ.

ಅನಿತಾ ಕುಮಾರಸ್ವಾಮಿ ಈ ಬಾರಿ ಚುನಾವಣಾ ಕಣಕ್ಕಿಳಿಯಲು ಆಸಕ್ತಿ ತೋರದ ಕಾರಣ ಅವರ ಪುತ್ರ ನಿಖಿಲ್‍ಕುಮಾರ ಸ್ವಾಮಿ ರಾಮನಗರದಿಂದ, ಹೆಚ್.ಡಿ. ಕುಮಾರಸ್ವಾಮಿ ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

ದೇವೇಗೌಡರ ಮತ್ತೊಬ್ಬ ಪುತ್ರ ಹೆಚ್.ಡಿ. ರೇವಣ್ಣ ಹೊಳೆನರಸೀಪುರದಿಂದಲೂ, ಅವರ ಪತ್ನಿ ಭವಾನಿ ರೇವಣ್ಣ ಇಲ್ಲವೇ ಡಾ.ಸೂರಜ್ ರೇವಣ್ಣ ಅವರನ್ನು ಹಾಸನ ವಿಧಾನಸಭಾ ಕ್ಷೇತ್ರ ದಿಂದ ಕಣಕ್ಕಿಳಿಸಲು ಸಿದ್ಧತೆ ನಡೆದಿದೆ.

2023ರ ಏಪ್ರಿಲ್-ಮೇ ತಿಂಗಳಲ್ಲಿ ನಡೆಯುವ ವಿಧಾನ ಸಭಾ ಚುನಾವಣೆಗೆ ಸರಿಸುಮಾರು 100 ವಿಧಾನಸಭಾ ಕ್ಷೇತ್ರಗಳಿಗೆ ತಡರಾತ್ರಿ ವೇಳೆಗೆ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ರಾಮನಗರದಲ್ಲಿ ಇಂದು ಎರಡನೇ ಹಂತದ ಪಂಚರತ್ನ ಯಾತ್ರೆ ಆರಂಭಿಸಿರುವ ಕುಮಾರಸ್ವಾಮಿ ಅಲ್ಲಿನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮದ ನಂತರ ಪಟ್ಟಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಅವರ ಹಿತೈಷಿಗಳು ತಡರಾತ್ರಿ ಇಲ್ಲವೆ ಮುಂಜಾನೆ ಪಟ್ಟಿ ಬಿಡುಗಡೆ ಮಾಡಿ ಎಂದು ಮಾಡಿದ ಸಲಹೆಗೆ ಕುಮಾರಸ್ವಾಮಿ ಸಮ್ಮತಿಸಿದ್ದಾರೆ ಎಂದು ಹೇಳಲಾಗಿದೆ. ವಿಧಾನಸಭೆಯ ಐವರು ಹಾಲಿ ಶಾಸಕರಿಗೆ ಮೊದಲ ಪಟ್ಟಿಯಲ್ಲಿ ಅವಕಾಶ ನೀಡಿಲ್ಲ. ವಿವಾದವಲ್ಲದ ಸರಿಸುಮಾರು 100 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಬಿಡುಗಡೆಗೊಳ್ಳುತ್ತಿದೆ. ದೆಹಲಿ, ಮುಂಬೈ ಹಾಗೂ ಹೈದರಾಬಾದ್‍ನಿಂದ ಬಂದಿರುವ ಚುನಾವಣಾ ತಜ್ಞರು ನೀಡಿರುವ ಸಲಹೆ ಸೂಚನೆಗಳ ಅನುಸಾರ ಅಭ್ಯರ್ಥಿಗಳ ಆಯ್ಕೆ ನಡೆಸಲಾಗಿದೆ ಎನ್ನಲಾಗಿದೆ.

ಜೆಡಿಎಸ್‍ನಲ್ಲೇ ಉಳಿದುಕೊಂಡಿರುವ ಹಿರಿಯ ನಾಯಕ ಜಿ.ಟಿ. ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರ, ಅವರ ಪುತ್ರ ಹರೀಶ್‍ಗೌಡ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿನ ಅಭ್ಯರ್ಥಿಗಳ ಆಯ್ಕೆಯಲ್ಲಿ ಜಿ.ಟಿ. ದೇವೇಗೌಡರು ನೀಡಿರುವ ಸಲಹೆಗಳನ್ನು ಕುಮಾರ ಸ್ವಾಮಿ ಪರಿಗಣಿಸಿದ್ದಾರೆ ಎನ್ನಲಾಗಿದೆ. ಮಾಜಿ ಪ್ರಧಾನಿ ದೇವೇಗೌಡರು ಈ ಬಾರಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಆದರೆ ತಮ್ಮ ಪುತ್ರ ಕುಮಾರಸ್ವಾಮಿಗೆ ಕೆಲವು ಸಲಹೆ ಸೂಚನೆ ನೀಡಿದ್ದಾರೆ. ವಿಧಾನಸಭೆಯ ಜೆಡಿಎಸ್‍ನ ಉಪನಾಯಕ ಬಂಡೆಪ್ಪ ಕಾಶೆಂಪೂರ್ (ಬೀದರ್ ದಕ್ಷಿಣ) ಹೆಚ್.ಕೆ. ಕುಮಾರಸ್ವಾಮಿ (ಸಕಲೇಶಪುರ), ಸಿ.ಎಸ್. ಪುಟ್ಟರಾಜು (ಪಾಂಡವಪುರ) ಸಾರಾ ಮಹೇಶ್ (ಕೆ.ಆರ್.ನಗರ) ಮಂಜುನಾಥ್ (ದಾಸರಹಳ್ಳಿ), ಗೌರಿಶಂಕರ್ (ತುಮಕೂರು ಗ್ರಾಮಾಂತರ) ವೀರಭದ್ರಯ್ಯ (ಮಧುಗಿರಿ), ಎಂ.ಟಿ. ಕೃಷ್ಣಪ್ಪ (ತುರುವೇಕೆರೆ) ಸುರೇಶ್‍ಗೌಡ (ಚಿಕ್ಕನಾಯಕನಹಳ್ಳಿ), ಸುಧಾಕರಲಾಲ್ (ಕೊರಟಗೇರೆ) ನಾಗರಾಜ (ಗುಬ್ಬಿ) ತಿಮ್ಮರಾಯಪ್ಪ (ಪಾವಗಡ) ಕೃಷ್ಣಾರೆಡ್ಡಿ (ಶಿಡ್ಲಘಟ್ಟ) ನಿಸರ್ಗ ನಾರಾಯಣಸ್ವಾಮಿ (ದೇವನಹಳ್ಳಿ) ಡಾ. ಶ್ರೀನಿವಾಸಮೂರ್ತಿ (ನೆಲಮಂಗಲ) ಕೆ.ಪಿ. ಬಚ್ಚೇಗೌಡ (ಚಿಕ್ಕಬಳ್ಳಾಪುರ). ರಾಜಾವೆಂಕಟಪ್ಪ ನಾಯಕ (ಮಸ್ಕಿ), ವೆಂಕಟರಾವ್ ನಾಡಗೌಡ (ಸಿಂದನೂರು), ದೇವಾನಂದ ಚವ್ಹಾಣ್ (ನಾಗಠಾಣ), ಹೆಚ್.ಎಸ್. ಶಿವಶಂಕರ (ಹರಿಹರ), ಹನುಮಂತಪ್ಪ ಮಾವಿನಮರದ (ಬಾದಾಮಿ), ಎಸ್.ಎ. ಗೋವಿಂದರಾಜ (ತುಮಕೂರು), ಶಾರದಾ ನಾಯಕ (ಶಿವಮೊಗ್ಗ ಗ್ರಾಮಾಂತರ), ಸಮೃದ್ಧಿ ಮಂಜುನಾಥ (ಮುಳಬಾಗಿಲು), ವೆಂಕಟಶಿವರಾರೆಡ್ಡಿ (ಶ್ರೀನಿವಾಸಪುರ), ಪ್ರಭಾಕರ ರೆಡ್ಡಿ (ಬೆಂಗಳೂರು ದಕ್ಷಿಣ). ನಾಗನಗೌಡ ಕುಂದಕೂರು (ಗುರುಮಿಟಕಲ್) ಶ್ರೀನಾಥ (ಕೋಲಾರ) ಮಂಜುನಾಥ (ಮಾಗಡಿ) ರವೀಂದ್ರ ಶ್ರೀಕಂಠಯ್ಯ (ಶ್ರೀರಂಗಪಟ್ಟಣ) ಅಶ್ವಿನ್‍ಕುಮಾರ್ (ಟಿ.ನರಸೀಪುರ) ಕೆ.ಮಹದೇವ (ಪಿರಿಯಾಪಟ್ಟಣ) ಸೇರಿದಂತೆ 100 ಆಸುಪಾಸಿನ ಅಭ್ಯರ್ಥಿಗಳ ಹೆಸರು ಪ್ರಕಟಗೊಳ್ಳಲಿದೆ.

Translate »