ಪಕ್ಷದ ಶಿಸ್ತು ಉಲ್ಲಂಘಿಸಿದವರ ಉಚ್ಛಾಟನೆ ಅನಿವಾರ್ಯ
ಮೈಸೂರು

ಪಕ್ಷದ ಶಿಸ್ತು ಉಲ್ಲಂಘಿಸಿದವರ ಉಚ್ಛಾಟನೆ ಅನಿವಾರ್ಯ

January 6, 2021

ಶಾಸಕ ಜಿ.ಟಿ.ದೇವೇಗೌಡರ ವಿಷಯದಲ್ಲಿ ಮಾಜಿ ಸಿಎಂ  ಕುಮಾರಸ್ವಾಮಿ ಹೇಳಿಕೆಗೆ ಸಾ.ರಾ.ಮಹೇಶ್ ಸಮರ್ಥನೆ
ಬೆಂಗಳೂರು: ಯಾರೇ ಆದರೂ ಪಕ್ಷದ ಶಿಸ್ತನ್ನು ಉಲ್ಲಂಘಿಸಬಾರದು. ಪಕ್ಷಕ್ಕೆ ಮುಜು ಗರವಾಗುವ ಹಾಗೆ ಹೇಳಿಕೆಗಳನ್ನು ಕೊಡಬಾರದು. ಹಾಗೆ ಮಾಡಿದಲ್ಲಿ ಉಚ್ಛಾಟನೆ ಅನಿವಾರ್ಯ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಪ್ರತಿಪಾದಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಮೈಸೂರಿನಿಂದಲೇ ಉಚ್ಛಾಟನೆ ಆರಂಭ ಎಂಬ ಕುಮಾರ ಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರೂ ಇದನ್ನೇ ಹೇಳಿರೋದು. ಜೆಡಿಎಸ್ ಕಾಲ ಕಾಲಕ್ಕೆ ಬದಲಾಗುತ್ತೆ ಎಂಬುದೆಲ್ಲಾ ಸುಳ್ಳು. ಪಕ್ಷದಲ್ಲೇ ಇದ್ದುಕೊಂಡು ಇಂತಹ ಹೇಳಿಕೆ ಕೊಡೋದು ಸರಿಯಲ್ಲ. ಯಾರ್ಯಾರು ಯಾವಾಗ ಬದಲಾಗ್ತಾರೆ ಅನ್ನೋದು ಜನರಿಗೆ ಗೊತ್ತಿದೆ ಎಂದು ಜಿ.ಟಿ.ದೇವೇಗೌಡರ ವಿರುದ್ಧ ಸಾ.ರಾ.ಮಹೇಶ್ ವಾಗ್ದಾಳಿ ನಡೆಸಿದರು. ಶಾಸಕರಿಗೆ ಅನುದಾನ ನೀಡುತ್ತಿಲ್ಲವೆಂಬ ಆರೋಪದ ಬಗ್ಗೆ ಪ್ರತಿ ಕ್ರಿಯಿಸಿದ ಅವರು, ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ನಮಗೆ ಕೊಡಬೇಕಾದ 2 ಕೋಟಿ ರೂ. ಶಾಸಕರ ನಿಧಿಯನ್ನೇ ಕೊಟ್ಟಿಲ್ಲ. ಇನ್ನು ಕ್ಷೇತ್ರದ ಅನುದಾನ ಎಲ್ಲಿಂದ ಬರುತ್ತದೆ. ನನ್ನ ಕ್ಷೇತ್ರದಲ್ಲೂ ಅರ್ಧಂಬರ್ಧ ರಸ್ತೆ ಮಾಡಿದ್ದಾರೆ. ಕಂಟ್ರಾಕ್ಟರ್ ಕೇಳಿದರೆ ಬಿಲ್ ಬಂದಿಲ್ಲ ಅಂತಾರೆ. ಶಾಸಕರಿಗೆ ಅನು ದಾನ ಸರ್ಕಾರದಿಂದ ಸಿಗುತ್ತಿಲ್ಲ. ಇದನ್ನೇ ಅವರ ಪಕ್ಷದವರೂ ಹೇಳಿದ್ದಾರೆ ಎಂದರು.

 

Translate »