ಹಾರೋಹಳ್ಳಿ ಬಳಿ ಹುಲಿ ಮೃತದೇಹ ಪತ್ತೆ
ಮೈಸೂರು

ಹಾರೋಹಳ್ಳಿ ಬಳಿ ಹುಲಿ ಮೃತದೇಹ ಪತ್ತೆ

September 26, 2018

ಮೈಸೂರು: ಮೈಸೂರು ತಾಲೂಕು ಹಾರೋಹಳ್ಳಿ ಅರಣ್ಯ ವಲಯದಲ್ಲಿ 6 ವರ್ಷದ ಹುಲಿ ಮೃತದೇಹ ಸೋಮವಾರ ಸಂಜೆ ಪತ್ತೆಯಾಗಿದೆ.ವಿದ್ಯುತ್ ಸ್ಪರ್ಶದಿಂದ ಬೇರೆಡೆ ಹುಲಿ ಸಾವನ್ನಪ್ಪಿದ್ದು, ಅದನ್ನು ಯಾರೋ ಅರಣ್ಯ ವಲಯ ವ್ಯಾಪ್ತಿಗೆ ತಂದು ಹಾಕಿರಬಹುದೆಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ. ಅಲ್ಲಿ ಟ್ರಾಕ್ಟರ್ ಟೈಯರ್ ಗುರುತಿದ್ದು, ಹುಲಿ ಹೆಜ್ಜೆ ಗುರುತುಗಳು ಕಾಣಿಸುತ್ತಿಲ್ಲ.

ಹುಲಿ ಸಾವು ಹಲವು ಅನುಮಾನ ಮೂಡಿಸಿದ್ದು, ಅದು ಸಹಜ ಸಾವಲ್ಲ. ಮರಣೋತ್ತರ ಪರೀಕ್ಷೆ ನಡೆಸಿ ನಂತರ ಸಾವಿಗೆ ನಿಜ ಸಂಗತಿ ತಿಳಿಯಲಿದೆ ಎಂದೂ ಅವರು ತಿಳಿಸಿದ್ದಾರೆ.

Translate »