ರಾಘವಾಪುರದಲ್ಲಿ ಹುಲಿ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ
ಚಾಮರಾಜನಗರ

ರಾಘವಾಪುರದಲ್ಲಿ ಹುಲಿ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ

June 11, 2018

ಗುಂಡ್ಲುಪೇಟೆ: ತಾಲೂಕಿನ ರಾಘವಾಪುರ ಜಮೀನೊಂದ ರಲ್ಲಿ ಭಾನುವಾರ ಮುಂಜಾನೆ ಹುಲಿ ಕಾಣ ಸಿ ಕೊಂಡಿದ್ದು, ರೈತರು ಮತ್ತು ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದೆ.

ಬೆಳಿಗ್ಗೆ ಗ್ರಾಮದ ಹೊರವಲಯದ ಕೆರೆಯ ಸಮೀಪದ ಜಮೀನಿನಲ್ಲಿನ ರೈತರಿಗೆ ಹುಲಿ ಕಾಣ ಸಿಕೊಂಡಿದೆ. ಹುಲಿ ಯನ್ನು ಪ್ರತ್ಯಕ್ಷವಾಗಿ ಕಂಡ ರೈತರೊಬ್ಬರು ಜೋರಾಗಿ ಕೂಗಿ ಕೊಂಡಿದ್ದಾರೆ. ಈ ವೇಳೆ ಹುಲಿಯು ಸಮೀಪದ ಬಾಳೆ ತೋಟದತ್ತ ತೆರಳಿದೆ ಎನ್ನಲಾಗಿದೆ.

ಮಳೆ ಬಿದ್ದಿರುವುದರಿಂದ ಜಮೀನು ಗಳಲ್ಲಿ ಸಾಗಿದ ಮಾರ್ಗದಲ್ಲಿ ಹುಲಿ ಹೆಜ್ಜೆಯ ಗುರುತುಗಳು ಕಂಡು ಬಂದಿದೆ. ವಿಷಯ ತಿಳಿದ ತಕ್ಷಣ ಅರಣ್ಯ ಇಲಾ ಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಹುಲಿಯ ಹೆಜ್ಜೆಯ ಗುರುತು ಪರಿಶೀಲಿಸಿ ಹುಲಿಯ ಹುಡುಕಾಟ ನಡೆಸಿ ಪಟಾಕಿ ಸಿಡಿಸಲಾಯಿತು. ಆದರೂ, ಹುಲಿ ಪತ್ತೆಯಾಗಲಿಲ್ಲ.

‘ಸಮೀಪದ ಹಸಗೂಲಿ ಗ್ರಾಮದ ಗುಡ್ಡದಲ್ಲಿ ನೆಲೆಸಿರುವ ಹುಲಿಯು ಇತ್ತೀ ಚೆಗೆ ಗುಡ್ಡದಲ್ಲಿ ನಡೆಯುತ್ತಿರುವ ಗಣ ಗಾರಿಕೆಯ ಸ್ಫೋಟಕದ ಶಬ್ದದಿಂದ ಹೊರ ಬಂದಿರಬಹುದು. ಆದ್ದರಿಂದ ಸುತ್ತಲಿನ ಗ್ರಾಮಗಳ ರೈತರಿಗೆ ಅರಣ್ಯ ಇಲಾಖೆಯು ಪಟಾಕಿ ವಿತರಣೆ ಮಾಡಿದ್ದು, ಜಮೀನಿಗೆ ತೆರಳುವಾಗ ಪಟಾಕಿ ಸಿಡಿಸಲು ಹೇಳ ಲಾಗಿದೆ. ಮತ್ತೊಮ್ಮೆ ಕಂಡು ಬಂದಲ್ಲಿ ಸ್ಥಳದಲ್ಲಿ ಬೋನು ಅಳವಡಿಸ ಲಾಗುವುದು’ ಎಂದು ಓಂಕಾರ್ ವಲ ಯಾರಣ್ಯಾಧಿಕಾರಿ ಎಂ.ಎನ್.ನವೀನ್ ಕುಮಾರ್ ತಿಳಿಸಿದರು.

Translate »