ಸತತ 6 ದಿನ ತಿರುಪತಿ ದೇವಾಲಯ ಬಂದ್!
ದೇಶ-ವಿದೇಶ

ಸತತ 6 ದಿನ ತಿರುಪತಿ ದೇವಾಲಯ ಬಂದ್!

July 16, 2018

ಆಂಧ್ರಪ್ರದೇಶ: ಇದೇ ಮೊದಲ ಬಾರಿಗೆ ಸತತ 6 ದಿನಗಳ ಕಾಲ ತಿರುಪತಿ ದೇವಾಲಯದ ಬಾಗಿಲು ಬಂದ್ ಆಗಲಿದ್ದು, ಆಗಸ್ಟ್ 11ರಿಂದ 16 ರವರೆಗೂ ಭಕ್ತಾದಿಗಳಿಗೆ ದೇವಾಲಯದಲ್ಲಿ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಸಮಗ್ರ ಸ್ವಚ್ಛಗೊಳಿಸುವಿಕೆಗಾಗಿ ಆರು ದಿನಗಳ ಕಾಲ ತಿರುಪತಿ ದೇವಾಲಯದ ಬಾಗಿಲು ಬಂದ್ ಆಗಲಿದೆ ಎಂದು ದೇವಾಲಯದ ಅಧಿಕಾರಿಗಳು ಹೇಳಿದ್ದಾರೆ.

ದೇವಾಲಯದಲ್ಲಿ ಅಷ್ಟ ಬಂಧನ ಬಾಲಾ ಲಯ ಮಹಾ ಸಂಪ್ರೋಕ್ಷಣೆ ಕಾರ್ಯಕ್ರಮ ನಡೆಯ ಲಿದ್ದು, ಪ್ರತಿ 12 ವರ್ಷಗಳಿಗೊಮ್ಮೆ ಈ ಧಾರ್ಮಿಕ ಆಚರಣೆ ನಡೆಯಲಿದೆ. ಪ್ರತಿ 12 ವರ್ಷಗಳಿಗೊಮ್ಮೆ ಈ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಯಾ ದರೂ ಸಹ ಇದೇ ಮೊದಲ ಬಾರಿಗೆ ಟಿಟಿಡಿ ದೇವಾ ಲಯದ ಬಾಗಿಲನ್ನು ಮುಚ್ಚುತ್ತಿದೆ. ಈ ಹಿಂದೆ 2006ರಲ್ಲಿಯೂ ಸಹ
ಈ ಧಾರ್ಮಿಕ ಕಾರ್ಯಕ್ರಮ ನಡೆದಿತ್ತು. ಆದರೆ ಈಗಿನಷ್ಟು ಜನ ಸಂದಣ ಇಲ್ಲದೇ ಇದ್ದ ಕಾರಣದಿಂದಾಗಿ ದೇವಾಲಯದ ಬಾಗಿಲನ್ನು ಮುಚ್ಚಿರಲಿಲ್ಲ. ಈಗ ಪ್ರತಿ ದಿನ ದೇವಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ 1 ಲಕ್ಷ ದಾಟಿರುವ ಹಿನ್ನೆಲೆಯಲ್ಲಿ ಈ ಬಾರಿಯ ಸಂಪ್ರೋಕ್ಷಣೆ ಕಾರ್ಯಕ್ರಮದಂದು ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತಿದೆ. ಎರಡನೆಯದ್ದಾಗಿ ಶನಿವಾರ, ಭಾನುವಾರ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಸಾಲು ಸಾಲು ರಜೆಗಳಿದ್ದು, ದರ್ಶನಕ್ಕೆ ನಿರ್ಬಂಧ ವಿಧಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಒಂದು ವಾರ ದೇವಾಲಯದ ಬಾಗಿಲನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಟಿಟಿಡಿ ಹೇಳಿದೆ. ಬೆಟ್ಟದ ಮೇಲೆ ತೆರಳುವ ಭಕ್ತಾದಿಗಳಿಗೆ ಆಗಸ್ಟ್ 9ರಿಂದಲೇ ನಿರ್ಬಂಧ ವಿಧಿಸಲಾಗುತ್ತದೆ.

Translate »