ಬೆಂಗಳೂರು, ಆ.17(ಕೆಎಂಶಿ)-ಗುಡುಗು ಸಿಡಿಲಿನಿಂದ ಜನ ಸಾಯುವುದನ್ನು ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಎಚ್ಚರಿಕೆ ಘಂಟೆ ನೀಡುವ ತಂತ್ರ ಜ್ಞಾನವನ್ನು ಅಳವಡಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನೆರವಿ ನಿಂದ ಪ್ರತಿ ಪಂಚಾಯಿತಿಯಲ್ಲೂ ಎಚ್ಚ ರಿಕೆ ಘಂಟೆ ಅಳವಡಿಸಿ, ಗುಡುಗು ಸಿಡಿಲಿಗೂ ಮುನ್ನ ಅಂದರೆ 30 ನಿಮಿಷಗಳ ಮುಂಚೆ ಸಾರ್ವಜನಿಕರಿಗೆ ಘಂಟೆ ಮೂಲಕ ಸಂದೇಶ ರವಾನಿಸಲಾಗುವುದು. ಘಂಟೆಯ ಸಂದೇಶ ಒಂದೂ ವರೆ ಕಿಲೋಮೀಟರ್ ವ್ಯಾಪ್ತಿಗೆ ತಲುಪುತ್ತಿದ್ದು, ಈ ಶಬ್ದ ಬರುತ್ತಿ ದ್ದಂತೆ ಜನತೆ ಎಚ್ಚೆತ್ತುಕೊಂಡು ಸುರಕ್ಷತಾ ಸ್ಥಳಗಳಿಗೆ ಸೇರಿಕೊಂ ಡರೆ ಸಾವು-ನೋವು ತಪ್ಪಿಸಬಹುದಾಗಿದೆ. ಪ್ರತಿ ಪಂಚಾಯಿತಿಗೂ ಇಂತಹ ಘಂಟೆಗಳನ್ನು ಅಳವಡಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಇದೇ ಮಾದರಿಯಲ್ಲಿ ಕರಾವಳಿ ತೀರದಲ್ಲಿ ಚಂಡಮಾರುತ ಬರುವ ಮುನ್ಸೂಚನೆ ನೀಡುವ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಚಂಡಮಾರುತ ಪ್ರವಾಹ ಅಪ್ಪಳಿಸುವುದಕ್ಕೂ 30 ನಿಮಿಷಗಳ ಕಾಲ ಮುಂಚೆಯೇ ಸ್ಥಳೀಯ ಕೇಂದ್ರಕ್ಕೆ ಮಾಹಿತಿ ಲಭ್ಯವಾಗಿ ಅಲ್ಲಿಂದ ಸಾರ್ವಜನಿ ಕರಿಗೆ ಸೈರನ್ ಬಾರಿಸುವುದರ ಮೂಲಕ ಎಚ್ಚರಿಕೆ ನೀಡುವ ಯೋಜನೆ ಅನುಷ್ಠಾನ ಗೊಳಿಸಲಾಗುತ್ತದೆ. ಇಂತಹ ಪ್ರತಿ ಕೇಂದ್ರ ಸ್ಥಾಪಿಸಲು 12 ಕೋಟಿ ರೂ.ಗಳ ಅಗತ್ಯವಿದ್ದು, ಇದರ ಪೂರ್ಣ ಹಣವನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದರು.
ರಾಜ್ಯದ 61 ತಾಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಈ ಮೊದಲು 39 ತಾಲೂಕುಗಳನ್ನು ಇದರ ವ್ಯಾಪ್ತಿಗೆ ಸೇರಿಸಿದ್ದು, ಇದೀಗ ಹೆಚ್ಚುವರಿ ಯಾಗಿ ಮತ್ತೆ 22 ತಾಲೂಕುಗಳನ್ನು ಪ್ರವಾಹ ಪೀಡಿತವೆಂದು ಘೋಷಣೆ ಮಾಡಲಾಗಿದೆ.