ಕೇಂದ್ರ ಸರ್ಕಾರದಲ್ಲಿ ಸಹಕಾರ ಕ್ಷೇತ್ರಕ್ಕೆ  ಪ್ರತ್ಯೇಕ ಸಚಿವಾಲಯ ಘೋಷಣೆ
ಮೈಸೂರು

ಕೇಂದ್ರ ಸರ್ಕಾರದಲ್ಲಿ ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ಘೋಷಣೆ

July 8, 2021

ಮೈಸೂರು, ಜು.7(ಆರ್‍ಕೆಬಿ)- ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಸಚಿ ವಾಲಯ ಘೋಷಿಸಿದ್ದು, ಇದರಿಂದ ಸಹ ಕಾರ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಬಲ ಬಂದಂತಾಗಲಿದೆ. ಹೀಗಾಗಿ ಪ್ರತ್ಯೇಕ ಸಚಿ ವಾಲಯಕ್ಕೆ ವ್ಯವಸ್ಥೆ ಮಾಡಿದ ಪ್ರಧಾನ ಮಂತ್ರಿ ಮತ್ತು ಗೃಹ ಮಂತ್ರಿಗಳಿಗೆ ಸದ್ಯ ದಲ್ಲೇ ನಿಯೋಗ ಹೋಗಿ ಅಭಿನಂದಿಸು ವುದಾಗಿ ಸಹಕಾರ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಇಂದಿಲ್ಲಿ ತಿಳಿಸಿದರು.

ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರ ಕ್ಷೇತ್ರ ಇದುವರೆಗೆ ಕೃಷಿ ಇಲಾಖೆಯಲ್ಲಿತ್ತು. ಹಾಗಾಗಿ ಕೃಷಿ ಹೆಚ್ಚು ಮಹತ್ವ ಪಡೆಯುತ್ತಿತ್ತು. ಈಗ ಅಭಿವೃದ್ಧಿ ದೃಷ್ಟಿಯಿಂದ ಪ್ರತ್ಯೇಕ ಸಚಿವಾಲಯ ಮಾಡಿ, ಅದಕ್ಕೊಬ್ಬರು ಸಚಿವರನ್ನು ನೇಮಕ ಮಾಡು ವುದು ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು.

ರಾಜ್ಯದಲ್ಲಿ ಸುಮಾರು 43,000 ಸಹ ಕಾರ ಸಂಸ್ಥೆಗಳಿದ್ದು, 5 ಸಾವಿರ ಸೌಹಾರ್ದ ಸೊಸೈಟಿಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ 2.5 ಕೋಟಿ ಹಾಗೂ ದೇಶ ದಲ್ಲಿ ಸುಮಾರು 48 ಕೋಟಿ ಸಹಕಾರಿ ಸದಸ್ಯರಿದ್ದಾರೆ. ಈ ಎಲ್ಲರಿಗೂ ಈಗ ಒಂದು ವ್ಯವಸ್ಥೆ ರೂಪುಗೊಂಡಿದ್ದು, ಸಮು ದಾಯ ಆಧಾರಿತ ಅಭಿವೃದ್ಧಿಯನ್ನು ಸಹಭಾಗಿತ್ವದ ಜೊತೆಗೆ ಕೊಂಡೊಯ್ಯಲು ಸಹಕಾರಿಯಾದಂತಾಗಿದೆ. ಇದೊಂದು ನಾಗರಿಕ ಕೇಂದ್ರಿತ ಸಹಕಾರಿ ಚಳವಳಿಗೆ ಪೂರಕವಾಗಿ ಕಾರ್ಯನಿರ್ವಹಣೆ ಮಾಡಲು ರಚಿಸಿದಂತಹ ಅದ್ಭುತ ವ್ಯವಸ್ಥೆಯಾಗಿದೆ. ಸಹಕಾರ ಇಲಾಖೆ ಪ್ರತ್ಯೇಕ ತಿದ್ದುಪಡಿ ಗಳನ್ನು ಮಾಡಲಾಗುತ್ತಿರಲಿಲ್ಲ. ಈಗ ಪ್ರತ್ಯೇಕ ಸಚಿವಾಲಯ ಆಗಿರುವುದರಿಂದ ತಿದ್ದು ಪಡಿಗಳು ಹಾಗೂ ಸಹಕಾರ ಕ್ಷೇತ್ರಕ್ಕೆ ಸಂಬಂ ಧಿಸಿದ ಅಗತ್ಯ ಕೆಲಸಗಳನ್ನು ನೇರವಾಗಿ ಸಚಿವಾಲಯದಿಂದಲೇ ಪಡೆಯಲು ಅನುಕೂಲವಾಗಲಿದೆ ಎಂದರು.

ಸಹಕಾರ ಇಲಾಖೆ ಬೃಹದಾಕಾರವಾಗಿ ಬೆಳೆದಿದ್ದರೂ ಪ್ರತ್ಯೇಕ ಸಚಿವಾಲಯ ಇರ ಲಿಲ್ಲ. ಸರಿಯಾದ ಮಹತ್ವ ಸಿಕ್ಕಿರಲಿಲ್ಲ ಎಂಬ ಕೂಗಿತ್ತು. ಇದೆಲ್ಲವನ್ನೂ ಅರಿತೇ ಕೇಂದ್ರ ಸರ್ಕಾರ ಪ್ರತ್ಯೇಕ ಸಚಿವಾಲಯ ಮಾಡಿದೆ. ಇದರಿಂದ ಸಹಕಾರ ಇಲಾ ಖೆಗೆ ಮಹತ್ವದ ನಿರ್ಣಯಗಳನ್ನು ಕೈಗೊ ಳ್ಳಲು ಸಾಧ್ಯವಾಗಲಿದೆ. ಇದಕ್ಕಾಗಿ ರಾಜ್ಯದ ಸಹಕಾರ ಕ್ಷೇತ್ರದ ಹಾಗೂ ಜನಪ್ರತಿ ನಿಧಿಗಳ ಪರವಾಗಿ ಪ್ರಧಾನಿ ಮತ್ತು ಗೃಹ ಸಚಿವರಿಗೆ ಅಭಿನಂದಿಸಲು ಸದ್ಯದಲ್ಲೇ ದೆಹಲಿಗೆ ನಿಯೋಗ ತೆರಳಲಿದ್ದೇವೆ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಸರ್ಕಾರದಿಂದ ಇನ್ನು ನಮ್ಮ ಇಲಾಖೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಅನುದಾನವನ್ನು ಪಡೆಯುವಲ್ಲಿಯೂ ಸಹ ಇದರಿಂದ ಅನುಕೂಲವಾಗಲಿದೆ. ಹಾಗಾಗಿ ರಾಜ್ಯಗಳಲ್ಲಿ ಮತ್ತಷ್ಟು ಅಭಿ ವೃದ್ಧಿಯ ಕಾರ್ಯಗಳು ಸಹಕಾರ ಇಲಾಖೆಗಳ ಮೂಲಕ ಅನುಷ್ಠಾನಗೊಳ್ಳು ವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಂಸದ ಪ್ರತಾಪ್‍ಸಿಂಹ, ಶಾಸಕ ಎಲ್.ನಾಗೇಂದ್ರ, ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ. ರಾಜೀವ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್‍ಕುಮಾರ್‍ಗೌಡ, ಮಾಜಿ ಮೇಯರ್ ಸಂದೇಶ್‍ಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »