ಇಂದು ಗಂಗೋತ್ರಿ ಗ್ಲೇಡ್ಸ್‍ನಲ್ಲಿ ಜಿಲ್ಲಾಡಳಿತ ಅಧಿಕಾರಿಗಳ ತಂಡ ಹಾಗೂ ಪೊಲೀಸ್ ಅಧಿಕಾರಿಗಳ ತಂಡಗಳ ನಡುವೆ ಕ್ರಿಕೆಟ್ ಪಂದ್ಯ
ಮೈಸೂರು

ಇಂದು ಗಂಗೋತ್ರಿ ಗ್ಲೇಡ್ಸ್‍ನಲ್ಲಿ ಜಿಲ್ಲಾಡಳಿತ ಅಧಿಕಾರಿಗಳ ತಂಡ ಹಾಗೂ ಪೊಲೀಸ್ ಅಧಿಕಾರಿಗಳ ತಂಡಗಳ ನಡುವೆ ಕ್ರಿಕೆಟ್ ಪಂದ್ಯ

November 1, 2018

ಮೈಸೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ನಾಳೆ(ನ.1) ಮಧ್ಯಾಹ್ನ 12.30ಕ್ಕೆ ಮಾನಸಗಂಗೋತ್ರಿ ಗ್ಲೇಡ್ಸ್ ಮೈದಾನದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳ ತಂಡ(ಡಿಸಿಘಿI ) ಹಾಗೂ ಪೊಲೀಸ್ ಅಧಿಕಾರಿಗಳ ತಂಡ(ಸಿಪಿಘಿI)ಗಳ ನಡುವೆ ಟಿ-20 ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ. ಡಿಸಿಘಿI ತಂಡದಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಎಡಿಸಿ ಟಿ.ಯೋಗೇಶ, ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್, ಮುಡಾ ಆಯುಕ್ತ ಕಾಂತರಾಜು, ಗ್ರಂಥಾಲಯ ಉಪ ನಿರ್ದೇಶಕ ಬಿ.ಮಂಜುನಾಥ್, ಪಾಲಿಕೆ ಕಂದಾಯ ಅಧಿಕಾರಿ ಉಮೇಶ್, ಕಾವೇರಿ ನೀರಾವರಿ ನಿಗಮದ ಆಡಳಿತಾಧಿಕಾರಿ ರವಿಕುಮಾರ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಬಿ.ಎಂ. ಪ್ರಕಾಶ್, ಹುಣಸೂರು ಇಓ ಕೃಷ್ಣ ಕುಮಾರ್, ಟಿ.ನರಸೀಪುರ ಇಓ ಡಾ. ನಂಜೇಶ್, ಮಾಲಿನ್ಯ ನಿಯಂತ್ರಣ ಮಂಡಳಿ ಎಇಒ ಮಂಜು ರಾಜಣ್ಣ, ಕೆ.ಆರ್.ನಗರ ಕೃಷಿ ಅಧಿಕಾರಿ ರಾಘವೇಂದ್ರ, ಕೃಷಿ ಅಧಿಕಾರಿ ನಾಗೇಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಲೆಕ್ಕ ಅಧೀಕ್ಷಕ ನಿರಂಜನ್ ಮೂರ್ತಿ ಹಾಗೂ ಸಿಪಿಘಿI ತಂಡದಲ್ಲಿ ಪೊಲೀಸ್ ಆಯುಕ್ತ ಡಾ. ಎ.ಸುಬ್ರಮಣ್ಯೇಶ್ವರರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್, ಡಿಸಿಪಿ ಗಳಾದ ವಿಷ್ಣುವರ್ಧನ್, ವಿಕ್ರಮ್ ಆಮ್ಟೆ, ಎಎಸ್‍ಪಿ ಅರುಣಾಂಶು ಗಿರಿ, ಕಾಮಾಂಡೆಂಟ್ ಮೌಂಟೆಡ್ ಪ್ರವೀಣ್ ಆಳ್ವ, ಪೆÇಲೀಸ್ ನಿರೀಕ್ಷಕರಾದ ಹರ್ಷ, ಮೂರ್ತಿ, ಆನಂದ್, ಪೆÇಲೀಸ್ ಉಪ ನಿರೀಕ್ಷಕರಾದ ಜಯಪ್ರಕಾಶ್, ಅನಿಲ್, ರವಿ ನಾಯಕ್ ಆಡಲಿದ್ದಾರೆ.

Translate »