ನ.11ರವರೆಗೆ `ಬಿಗ್‍ಬಜಾರ್ ಧನೋತ್ಸವ’  ಗ್ರಾಹಕರಿಗೆ ವಿಶೇಷ ರಿಯಾಯಿತಿ ಕೊಡುಗೆ
ಮೈಸೂರು

ನ.11ರವರೆಗೆ `ಬಿಗ್‍ಬಜಾರ್ ಧನೋತ್ಸವ’  ಗ್ರಾಹಕರಿಗೆ ವಿಶೇಷ ರಿಯಾಯಿತಿ ಕೊಡುಗೆ

November 1, 2018

ಮೈಸೂರು:  ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಬಿಗ್‍ಬಜಾರ್ ಶಾಪಿಂಗ್ ಮಾಲ್‍ನಲ್ಲಿ ಅ.31ರಿಂದ ನ.11ರವರೆಗೆ ಹಮ್ಮಿಕೊಂಡಿರುವ `ಬಿಗ್‍ಬಜಾರ್ ಧನೋತ್ಸವ’ದಲ್ಲಿ ಗ್ರಾಹಕರಿಗೆ ಭಾರೀ ರಿಯಾಯಿತಿ ಜೊತೆಗೆ ಬೆಳ್ಳಿ ನಾಣ್ಯಗಳ ವಿಶೇಷ ಕೊಡುಗೆ ಇರುತ್ತದೆ ಎಂದು ಬಿಗ್‍ಬಜಾರ್‍ನ ಸ್ಟೋರ್ ಮ್ಯಾನೇಜರ್ ರವಿಚಂದ್ರನ್ ತಿಳಿಸಿದರು.

ಬಿಗ್‍ಬಜಾರ್ ಆವರಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 10,000 ಮೇಲ್ಪಟ್ಟು ಖರೀದಿಸಿದವರಿಗೆ 10 ಗ್ರಾಂ ಬೆಳ್ಳಿ ನಾಣ್ಯ, 20,000 ಮೇಲ್ಪಟ್ಟು ಖರೀದಿಸಿದರೆ 30 ಗ್ರಾಂ ಬೆಳ್ಳಿ ನಾಣ್ಯ, 4,000 ಮತ್ತು ಅದಕ್ಕಿಂತ ಹೆಚ್ಚು ವ್ಯವಹಾರ ಮಾಡಿದ ಎಸ್‍ಬಿಐ ಡೆಬಿಟ್ ಕಾರ್ಡ್ ಬಳಕೆದಾರರಿಗೆ ಶೇ.10ರಷ್ಟು ಕ್ಯಾಷ್‍ಬ್ಯಾಕ್ ದೊರೆಯುತ್ತದೆ. ವ್ಯಾಪಕ ಶ್ರೇಣಿಯ ಸಿಹಿ ತಿಂಡಿ ಮತ್ತು ಉಡುಗೊರೆಗಳ ಮೇಲೆ ಅತ್ಯದ್ಭುತ ರಿಯಾ ಯಿತಿಯೂ ಇದೆ ಎಂದರು. ಕೊರಿಯೊ ಎಲ್‍ಇಡಿ ಟಿವಿ ಶ್ರೇಣಿಗಳ ಮೇಲೆ ಆಕರ್ಷಕ ರಿಯಾಯಿತಿ ಇದ್ದು, ರೂ.99000 ಬೆಲೆಯ ಕೊರಿಯೊ ಎಲ್‍ಇಡಿ ಎಚ್‍ಡಿ ಟಿವಿ 39,999 ರೂ.ಗೆ ದೊರೆಯಲಿದೆ. ನಮ್ಮಲ್ಲಿ ಖರೀದಿಸುವ ಎಲೆಕ್ಟ್ರಾನಿಕ್, ಬಟ್ಟೆ ಮತ್ತಿತರ ಎಲ್ಲಾ ವಸ್ತುಗಳ ಮೇಲೂ ವಿಶೇಷ ರಿಯಾಯಿತಿ ದೊರೆಯಲಿದೆ. ಅಲ್ಲದೆ ಗ್ರಾಹಕರ ಹೆಚ್ಚಿನ ಒತ್ತಡದ ಹಿನ್ನೆಲೆಯಲ್ಲಿ ಇನ್ನೂ ನಾಲ್ಕು ಹೆಚ್ಚುವರಿ ಕೌಂಟರ್ ತೆರೆಯಲಾಗಿದ್ದು, ಗ್ರಾಹಕರು ಕ್ಯೂ ನಿಲ್ಲುವುದನ್ನು ತಪ್ಪಿಸಲು ಮೊಬೈಲ್ ಬಿಲ್ಲಿಂಗ್ ಕೂಡ ವ್ಯವಸ್ಥೆ ಮಾಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಅಸಿಸ್ಟೆಂಟ್ ಸ್ಟೋರ್ ಮ್ಯಾನೇಜರ್ ಸಿ.ಆರ್.ಪುನೀತ್ ಕುಮಾರ್, ಎಲೆಕ್ಟ್ರಾನಿಕ್ ಡಿಪಾರ್ಟ್‍ಮೆಂಟ್ ಮ್ಯಾನೇಜರ್ ಕಿಶೋರ್ ಉಪಸ್ಥಿತರಿದ್ದರು.

Translate »