ಇಂದು `ಐಎಂಎ ರಾಷ್ಟ್ರೀಯ ಪ್ರತಿಭಟನಾ ದಿನ’ ಆಚರಣೆ
ಮೈಸೂರು

ಇಂದು `ಐಎಂಎ ರಾಷ್ಟ್ರೀಯ ಪ್ರತಿಭಟನಾ ದಿನ’ ಆಚರಣೆ

June 18, 2021

ಮೈಸೂರು,ಜೂ.17(ಆರ್‍ಕೆಬಿ)- ಕೋವಿಡ್ -19 ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ವೈದ್ಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೈಹಿಕ ಮತ್ತು ಮಾನಸಿಕ ಹಲ್ಲೆ ತಡೆಗಟ್ಟಬೇಕು. ಆಧುನಿಕ ಔಷಧ ಮತ್ತು ಲಸಿಕೆಯ ವಿರುದ್ಧ ಉದ್ದೇಶಪೂರ್ವಕ ವಾಗಿ ತಪ್ಪು ಮಾಹಿತಿಗಳನ್ನು ಹರಡುತ್ತಿರು ವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ವೃತ್ತಿ ಮತ್ತು ವೃತ್ತಿಪರರ ಮೇಲಿನ ಹಲ್ಲೆ ಯನ್ನು ನಿಲ್ಲಿಸಲು ವೈಯಕ್ತಿಕವಾಗಿ ಮಧ್ಯ ಪ್ರವೇಶಿಸಬೇಕು ಎಂದು ಭಾರತೀಯ ವೈದ್ಯರ ಸಂಘ (ಐಎಂಎ) ಪ್ರಧಾನಮಂತ್ರಿ ಗಳ ಮೊರೆ ಹೋಗಿದ್ದಾರೆ.

ಸಾವಿರಾರು ಜನರ ಸೇವಾನಿರತ ಅನೇಕ ಯುವ ವೈದ್ಯರು ತಮ್ಮ ಜೀವ ಕಳೆದುಕೊಂಡಿ ದ್ದಾರೆ. ಇದು ವೈದ್ಯರಿಗೆ ಮಾತ್ರವಲ್ಲದೆ ಅವರ ಕುಟುಂಬ ಸದಸ್ಯರ ಮೇಲೂ ಗಂಭೀರ ಪರಿ ಣಾಮ ಬೀರಿದೆ. ಪತಿ ಮತ್ತು ಪತ್ನಿ ಇಬ್ಬರೂ ವೈದ್ಯರಾಗಿದ್ದು, ತಮ್ಮ ಮಕ್ಕಳನ್ನು ಅನಾಥರ ನ್ನಾಗಿ ಬಿಟ್ಟು ಹೋದ ಹಲವು ಪ್ರಕರಣ ಗಳಿವೆ. ಇಂತಹ ಎಲ್ಲಾ ಪ್ರಕರಣಗಳ ನೋಂದಣಿಯನ್ನು ಐಎಂಎ ನಿರ್ವಹಿಸು ತ್ತಿದೆ. ಈ ಕುಟುಂಬಗಳ ರಕ್ಷಣೆಗೆ ಪ್ರಧಾನ ಮಂತ್ರಿಗಳಲ್ಲಿ ಕೋರಿರುವುದಾಗಿ ಐಎಂಎ ಮೈಸೂರು ಘಟಕದ ಅಧ್ಯಕ್ಷ ಡಾ.ಬಿ.ಎನ್. ಆನಂದರವಿ, ಕಾರ್ಯದರ್ಶಿ ಡಾ.ಎನ್. ಚಂದ್ರಭಾನ್‍ಸಿಂಗ್ ತಿಳಿಸಿದ್ದಾರೆ.

ಆರೋಗ್ಯ ಸೇವಾ ಸಿಬ್ಬಂದಿ ಮತ್ತು ವೈದ್ಯ ಕೀಯ ಸಂಸ್ಥೆಗಳು (ಹಿಂಸೆ ಮತ್ತು ಆಸ್ತಿ ಹಾನಿ ನಿಷೇಧ) ಮಸೂದೆ, ಕರ್ತವ್ಯನಿರತ ವೈದ್ಯರು ಮತ್ತು ಇತರೆ ಆರೋಗ್ಯ ಆರೈಕೆ ವೃತ್ತಿಪರರ ಮೇಲೆ ಹಲ್ಲೆ ಮಾಡುವವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸುವ 2019ರ ಕರಡು ಕಾನೂನಿನ ಬಗ್ಗೆ ಅಂತರ ಸಚಿವಾ ಲಯದ ಸಮಾಲೋಚನೆಯ ಸಮಯ ದಲ್ಲಿ ಗೃಹ ಸಚಿವಾಲಯವು ಇದನ್ನು ವಜಾ ಗೊಳಿಸಿದೆ. ಐಪಿಸಿ, ಸಿಆರ್‍ಪಿಸಿಯಿಂದ ನಿಬಂಧನೆಗಳನ್ನು ಸೇರಿಸುವ ಜೊತೆಗೆ ವಿಚಾ ರಣೆಗಳ ತ್ವರಿತ ವಿಲೇವಾರಿಗಾಗಿ ಅಗತ್ಯ ಕ್ರಮ ಗಳ ತಕ್ಷಣವೇ ಘೋಷಿಸಬೇಕು. ಅಂತಹ ಘೋರ ಅಪರಾಧದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಶಿಕ್ಷಿಸಬೇಕು. ಇದರಿಂದ ಯಾವುದೇ ಆರೋಗ್ಯ ರಕ್ಷಣಾ ವೃತ್ತಿಪರರ ಮೇಲೆ ದಾಳಿ ಮಾಡುವ ಸಮಾಜ ವಿರೋಧಿ ಶಕ್ತಿಗಳಿಗೆ ಪರಿಣಾಮಕಾರಿ ಪ್ರತಿಬಂಧಕವನ್ನು ಸೃಷ್ಟಿಸ ಬೇಕು ಎಂದು ಒತ್ತಾಯಿಸಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ವೈದ್ಯರನ್ನು ಕೋವಿಡ್ ಹುತಾತ್ಮರೆಂದು ಘೋಷಿಸÀಬೇಕು. ಅಂತಹ ಕುಟುಂಬಗಳಿಗೆ ವಿಮಾ ಪ್ರಯೋಜನಗಳನ್ನು ವಿಸ್ತರಿಸುತ್ತಿರುವ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜ ನೆಗೆ ನಾವು ಧನ್ಯವಾದ ಅರ್ಪಿಸುತ್ತೇವೆ. ಆದಾಗ್ಯೂ ಯೋಜನೆಯ ಕಾರ್ಯ ವಿಧಾನದ ಅನುಷ್ಠಾನದಲ್ಲಿ ವಿವಿಧ ಅಡೆತಡೆಗಳಿಂ ದಾಗಿ ಮೊದಲ ಅಲೆಯಲ್ಲಿ ಪ್ರಾಣ ಕಳೆದು ಕೊಂಡ 754 ವೈದ್ಯರ ಪೈಕಿ 168 ವೈದ್ಯ ಕುಟುಂಬಗಳು ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಸಾಧ್ಯವಾಗಿದೆ. ಈ ಎಲ್ಲಾ ಹುತಾತ್ಮ ರನ್ನು ಗುರುತಿಸಿ, ಪರಿಶೀಲಿಸಲು ಕೇಂದ್ರೀಯ ಗುಪ್ತಚರ ಬ್ಯೂರೋ ಮೂಲಕ ಪರಿಣಾಮ ಕಾರಿ ವ್ಯವಸ್ಥೆ ರಚಿಸಬೇಕು ಎಂದು ಆಗ್ರಹಿಸಿ ದ್ದಾರೆ. ಸಾಂಕ್ರಾಮಿಕ ರೋಗದಿಂದ ಹೊರ ಬರಲು, ದುರ್ಬಲ ಜನರನ್ನು ರಕ್ಷಿಸುವ ನಿಟ್ಟಿ ನಲ್ಲಿ ದೇಶವನ್ನು ಸಜ್ಜು ಮತ್ತು ಸಶಕ್ತಗೊಳಿ ಸಲು ಲಸಿಕೆಯೊಂದೇ ಏಕೈಕ ಆಯುಧ ಎಂಬುದನ್ನು ಐಎಂಎ ನಂಬಿದೆ. ಲಸಿಕೆಯ ಎರಡೂ ಡೋಸ್‍ಗಳನ್ನು ಪಡೆದ ಕೇವಲ ಜನರಿಗೆ ಯಾವುದೇ ತೀವ್ರ ಸೋಂಕು ಇರಲಿಲ್ಲ ಎಂಬುದು ಸಂತೋಷಕರ ಸಂಗತಿ. ಲಸಿಕೆಯ ಮೂಲಕ ನಾವು, ನಮ್ಮ ಜನರು, ದೇಶವನ್ನು ಸೋಂಕಿನ ದುರಂತದಿಂದ ರಕ್ಷಿಸಬಹುದು ಎಂಬುದು ಸಾಬೀತಾಗಿದೆ. ಆದ್ದರಿಂದ ಸರ್ಕಾ ರವು ಎಲ್ಲರಿಗೂ ಸಾರ್ವತ್ರಿಕ ಲಸಿಕೆ ಉತ್ತೇಜಿಸ ಬೇಕು. ಲಸಿಕೆಯ ವಿರುದ್ಧ ಮಾತನಾಡು ವವರನ್ನು ಕಾನೂನಿನ ಪ್ರಕಾರ ಶಿಕ್ಷಿಸಬೇಕು ಎಂದು ಸಲಹೆ ನೀಡಿದ್ದಾರೆ. ಕೋವಿಡ್-19ನಂತರದ ತೊಡಕನ್ನು ವಿವರವಾಗಿ ಅಧ್ಯ ಯನ ಮಾಡಲು ಮತ್ತು ಔಷಧದ ಎಲ್ಲಾ ವಿಭಾಗಗಳಲ್ಲಿ ಬಹುಮುಖಿ ಚಿಕಿತ್ಸಾ ಮಾರ್ಗ ಸೂಚಿಗಳನ್ನು ಹೊರತರಲು ಪ್ರತ್ಯೇಕ ಸಂಶೋ ಧನಾ ಕೋಶ ಸ್ಥಾಪಿಸುವಂತೆ ಮನವಿ ಮಾಡಿ ದ್ದಾರೆ. ಹೀಗಾಗಿ 2021ರ ಜೂ.18ರಂದು ಆಧು ನಿಕ ಆರೋಗ್ಯ ರಕ್ಷಣಾ ವೃತ್ತಿಗೆ ಸೂಕ್ತವಾದ ವಾತಾವರಣ ಒದಗಿಸಲು ಪ್ರಧಾನಿಗಳ ಗಮನ ಸೆಳೆಯಲು `ಐಎಂಎ ರಾಷ್ಟ್ರೀಯ ಪ್ರತಿಭಟನಾ ದಿನ’ವಾಗಿ ಆಚರಿಸುತ್ತಿದ್ದೇವೆ. ಇದು ಹೆಚ್ಚು ಸಹಾನುಭೂತಿ ಮತ್ತು ಸಮರ್ಪಣೆಯೊಂ ದಿಗೆ ಮತ್ತು ಮಾನಸಿಕ, ದೈಹಿಕ ಕಿರುಕುಳದ ಯಾವುದೇ ಭಯವಿಲ್ಲದೇ ಕೆಲಸ ಮಾಡುವ ವಿಶ್ವಾಸವನ್ನು ನಮ್ಮಲ್ಲಿ ತುಂಬುತ್ತದೆ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Translate »