ಇಂದು ನಯನ ಕುಮಾರ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ
ಮೈಸೂರು

ಇಂದು ನಯನ ಕುಮಾರ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ

January 30, 2022

ಮೈಸೂರು, ಜ.29- ಮೈಸೂರಿನ ದಟ್ಟಗಳ್ಳಿ, ನೇತಾಜಿ ಸರ್ಕಲ್ ಸಮೀಪ ನಿರ್ಮಿ ಸಿರುವ ನೂತನ `ನಯನ ಕುಮಾರ್ಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ’ ಭಾನುವಾರ ಬೆಳಗ್ಗೆ ಉದ್ಘಾ ಟನೆಗೊಳ್ಳಲಿದೆ.

ಶ್ರೀ ಯೋಗಾನರ ಸಿಂಹಸ್ವಾಮಿ ದೇವಾಲಯದ ಶ್ರೀ ಡಾ. ಭಾಷ್ಯಂ ಸ್ವಾಮೀಜಿ ಸಾನಿಧ್ಯ, ಶಾಸಕ ಜಿ.ಟಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ನಟ ಶಿವರಾಜ್‍ಕುಮಾರ್, ಗೀತಾ ಶಿವ ರಾಜ್‍ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಮಂಗಳ ರಾಘವೇಂದ್ರ ರಾಜ್ ಕುಮಾರ್, ಶ್ರೀಮತಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಉದ್ಘಾಟನೆ ನೆರವೇರಿಸ ಲಿದ್ದಾರೆ. ಮೇಯರ್ ಸುನಂದಾ ಪಾಲನೇತ್ರ, ಸಂಸದ ಪ್ರತಾಪ್ ಸಿಂಹ, ಶಾಸಕ ಸಿ.ಎಸ್.ಪುಟ್ಟರಾಜು, ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ, ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಮೇಯರ್ ಸುನಂದಾ ಪಾಲನೇತ್ರ, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳಿ ಅಧ್ಯಕ್ಷೆ ಕೆ.ಲಲಿತಾ ಜಿ.ಟಿ.ದೇವೇ ಗೌಡ, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ. ಹರೀಶ್‍ಗೌಡ, ಪಾಲಿಕೆ ಸದಸ್ಯೆ ಎಂ.ಲಕ್ಷ್ಮಿ, ಮುಡಾ ಆಯುಕ್ತ ಜಿ.ಟಿ.ದಿನೇಶ್ ಕುಮಾರ್, ಆಸ್ಪತ್ರೆ ಮಾಲೀಕರಾದ ಕೆ.ಬಿ.ಕುಮಾರ್ ಮತ್ತಿತರರು ಉಪಸ್ಥಿತರಿರಲಿದ್ದಾರೆ.

Translate »