130 ವಿಧಾನಸಭಾ ಕ್ಷೇತ್ರಗಳತ್ತ ಕಾಂಗ್ರೆಸ್ ಚಿತ್ತ
News

130 ವಿಧಾನಸಭಾ ಕ್ಷೇತ್ರಗಳತ್ತ ಕಾಂಗ್ರೆಸ್ ಚಿತ್ತ

June 25, 2022

ಬೆಂಗಳೂರು, ಜೂ.24(ಕೆಎಂಶಿ) – ರಾಜ್ಯದಲ್ಲಿ ಅಧಿ ಕಾರಕ್ಕೆ ಬರಲು ಹವಣಿಸುತ್ತಿರುವ ಕಾಂಗ್ರೆಸ್, ಮುಂಬ ರುವ ವಿಧಾನಸಭಾ ಚುನಾವಣೆಯಲ್ಲಿ 130 ಕ್ಷೇತ್ರಗಳಿಗೆ ಮಾತ್ರ ಹೆಚ್ಚು ಗಮನ ನೀಡಲು ತೀರ್ಮಾನಿಸಿದೆ.

ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸಹೋದರ ಸಂಸದ ಡಿ.ಕೆ. ಸುರೇಶ್ ಈಗಿ ನಿಂದಲೇ ಅಭ್ಯರ್ಥಿಗಳ ಆಯ್ಕೆಗೆ ಸಮೀಕ್ಷಾ ಕಾರ್ಯ ವನ್ನು ಆರಂಭಿಸಿದ್ದಾರೆ. ಶಿವಕುಮಾರ್ 130 ಕ್ಷೇತ್ರಗಳಿಗೆ ಸೀಮಿತವಾಗಿ ಹೆಚ್ಚು ಒತ್ತು ನೀಡಲು ತೀರ್ಮಾನಿಸಿದ್ದ ರಾದರೂ, ಅವರ ಸಹೋದರ ಮಾತ್ರ ಇನ್ನೂ 224 ಕಡೆಯೂ ಗಮನಹರಿಸಿ ಎನ್ನುತ್ತಿದ್ದಾರೆ.

ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಯಾಗಬೇಕು, ಪಕ್ಷದ ಪ್ರಭಾವ ಹೇಗಿದೆ, ಕಾಂಗ್ರೆಸ್‍ಗೆ ವಿರುದ್ಧವಾಗಿ ಯಾವ ಪಕ್ಷ ಪ್ರಬಲವಾಗಿದೆ. ಮತದಾರರ ಮನಸ್ಸು ಗೆಲ್ಲಲು ಏನು ಮಾಡ ಬೇಕೆಂಬ ಬಗ್ಗೆ ಈಗಾಗಲೇ ಎರಡು ಸಮೀಕ್ಷೆಗಳನ್ನು ಮಾಡಿಸಿದ್ದಾರೆ. ಹರಿಯಾಣ ಮೂಲದ ಸಮೀಕ್ಷಾ ಸಂಸ್ಥೆ ಯೊಂದು ನೀಡಿರುವ ಪ್ರಾಥಮಿಕ ವರದಿಯಿಂದ ಶಿವ ಕುಮಾರ್ ಅಧೀರರಾಗಿದ್ದರು. ಸಮೀಕ್ಷಾ ಕಾರ್ಯ ಸರಿಯಿಲ್ಲವೆಂದು ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ಅವರ ಸಲಹೆ ಮೇರೆಗೆ ಪ್ರಖ್ಯಾತ ಸಂಸ್ಥೆಯೊಂದಕ್ಕೆ ಸಮೀಕ್ಷಾ ಕಾರ್ಯ ವಹಿಸಿದ್ದಾರೆ.

ಇದರ ಜೊತೆ ಜೊತೆಯಲ್ಲೇ ಸ್ಥಳೀಯ ಸಂಸ್ಥೆಯೊಂದು ಏಕಕಾಲದಲ್ಲಿ ಸಮೀಕ್ಷೆ ಆರಂಭಿಸಿದೆ. ಅಭ್ಯರ್ಥಿಗಳ ಆಯ್ಕೆ ಕೆಳಹಂತದಿಂದಲೇ ಆಗಬೇಕು. ಅಭ್ಯರ್ಥಿ ಯಾರೆಂದು ನಾವೇ ಅಂತಿಮಗೊಳಿಸುತ್ತೇವೆ ಎಂದು ದೆಹಲಿಯ ವರಿಷ್ಠರು ರಾಜ್ಯ ನಾಯಕರಿಗೆ ಸಂದೇಶ ನೀಡಿದ್ದರೂ, ಸ್ವತಂತ್ರ ವಾಗಿ ಸಮೀಕ್ಷೆಯನ್ನು ಶಿವಕುಮಾರ್ ಕೈಗೆತ್ತಿಕೊಂಡಿದ್ದಾರೆ.

ರಾಜ್ಯದಲ್ಲಿ ಅಧಿಕಾರಕ್ಕೆ ಬರಲು 113 ಸ್ಥಾನ ಬೇಕು. 130 ಕ್ಷೇತ್ರಗಳಿಗೆ ಸೀಮಿತವಾಗಿ ಹೋರಾಟ ನಡೆಸೋಣ ಎಂದು ಕ್ಷೇತ್ರಗಳ ಪಟ್ಟಿ ನೀಡಿ, ಇತ್ತ ಕಡೆ ಹೆಚ್ಚು ಗಮನ ಹರಿಸುವಂತೆ ದೆಹಲಿ ಮೂಲದ ಸಂಸ್ಥೆಗೆ ತಿಳಿಸಿದ್ದಾರೆ.

ಉಳಿದ 94 ಕ್ಷೇತ್ರಗಳ ಬಗ್ಗೆಯು ಸಮೀಕ್ಷೆಯಾಗಲಿ. ಆದರೆ ಮೊದಲ ಆದ್ಯತೆ ಮತ್ತು ಹೆಚ್ಚು ಒತ್ತು ಕೊಡು ವುದು 130 ಕ್ಷೇತ್ರಗಳಿಗೆ ಎಂದಿದ್ದಾರೆ. ದೆಹಲಿ ಮೂಲದ ಸಂಸ್ಥೆ ಬೂತ್ ಮಟ್ಟದಲ್ಲಿ ಸಮೀಕ್ಷಾ ಕಾರ್ಯ ಆರಂಭಿಸಿದೆ. ಸ್ಥಳೀಯ ಕಾಂಗ್ರೆಸ್ ಮುಖಂಡರು ಮತ್ತು ಪದಾಧಿ ಕಾರಿಗಳಿಗೆ ಈ ಸಂಸ್ಥೆ ಕೆಲವು ಸಲಹೆ ಸೂಚನೆಗಳನ್ನು ನೀಡಿ, ನಾವು ಹೇಳಿದಂತೆ ನಡೆದುಕೊಳ್ಳಬೇಕೆಂದು ಆದೇಶ ಮಾಡುತ್ತಿವೆ. ಕಾಂಗ್ರೆಸ್ ಶಾಸಕರಿಲ್ಲದ ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್ ಶಾಸಕರಿದ್ದರೆ
ಅಂತಹ ಕ್ಷೇತ್ರಗಳಲ್ಲಿ ಯಾವ ರೀತಿ ಜನಪರ ಹೋರಾಟ ನಡೆಸಬೇಕು, ಮತದಾರರನ್ನು ಮನವೊಲಿಸಲು ಏನು ಮಾಡಬೇಕು, ಪಕ್ಷದ ವರ್ಚಸ್ಸು ಹೆಚ್ಚಿಸಲು ಯಾವ ಕಾರ್ಯಕ್ರಮ ರೂಪಿಸಬೇಕು ಎಂಬ ಮಾಹಿತಿಯನ್ನು ನೀಡುತ್ತಿದೆ. ಶಿವಕುಮಾರ್ ನಡೆಸುತ್ತಿರುವ ಸಮೀಕ್ಷೆಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೂ ಸಂಬಂಧವಿಲ್ಲ. ಅಧ್ಯಕ್ಷರು ಸ್ವತಂತ್ರವಾಗಿ ಈ ಸಮೀಕ್ಷೆ ನಡೆಸುತ್ತಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಮಟ್ಟದಲ್ಲಿ ಯಾವ ರೀತಿ ಹೋರಾಟ ಮಾಡಬೇಕೆಂಬುದರ ಬಗ್ಗೆಯು ಸಮಿತಿ ಸದಸ್ಯರು ನೀಡುವ ಸಲಹೆಯಂತೆ ಶಿವಕುಮಾರ್ ಸಂಘಟನೆ ಮತ್ತು ಹೋರಾಟ ನಡೆಸುತ್ತಿದ್ದಾರೆ.

Translate »