ಸಾರಿಗೆ ನೌಕರರ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟರೂ  ಮೈಸೂರಲ್ಲಿ 150ಕ್ಕೂ ಹೆಚ್ಚು ಸಾರಿಗೆ ಬಸ್ ಸಂಚಾರ
ಮೈಸೂರು

ಸಾರಿಗೆ ನೌಕರರ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟರೂ ಮೈಸೂರಲ್ಲಿ 150ಕ್ಕೂ ಹೆಚ್ಚು ಸಾರಿಗೆ ಬಸ್ ಸಂಚಾರ

April 12, 2021

ಮೈಸೂರು, ಏ.11(ಎಂಟಿವೈ)- ಆರನೇ ವೇತನ ಆಯೋಗದ ವರದಿ ಅನುಷ್ಠಾನಗೊಳಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾ ಟಕ ರಾಜ್ಯ ಸಾರಿಗೆ ಸಂಸ್ಥೆ ನೌಕರರ ಒಕ್ಕೂಟ ಕರೆ ನೀಡಿರುವ ಮುಷ್ಕರ 5ನೇ ದಿನಕ್ಕೆ ಕಾಲಿಟ್ಟರೂ, ಮೈಸೂರಲ್ಲಿ ಭಾನುವಾರ ಎರಡೂ ವಿಭಾಗಗಳಿಂದ ಸಾರಿಗೆ ಸಂಸ್ಥೆಯ 150ಕ್ಕೂ ಹೆಚ್ಚು ಬಸ್ ಸಂಚರಿಸಿ ದವು. ಇದರಿಂದ ಸಾರಿಗೆ ಬಸ್ ಸಂಚಾರದಲ್ಲಿ ಸುಧಾ ರಣೆ ಕಂಡಿದ್ದು, ಪ್ರಯಾಣಿಕರಲ್ಲಿ ಭರವಸೆ ಮೂಡಿದೆ.

ಮುಷ್ಕರದಲ್ಲಿ ಪಾಲ್ಗೊಂಡಿರುವ ಸಾರಿಗೆ ನೌಕರರ ವಿರುದ್ಧ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಮುಷ್ಕರದ ಯಶಸ್ವಿಗೆ ಬೆನ್ನೆಲುಬಾಗಿ ನಿಂತ ಕೆಲವು ಸಿಬ್ಬಂದಿಗಳಿಗೆ ವರ್ಗಾವಣೆಯ ಶಿಕ್ಷೆ ನೀಡಿದ್ದರೆ, ಕರ್ತವ್ಯಕ್ಕೆ ಗೈರು ಹಾಜರಾಗಿರುವ ಇಲಾಖೆಯ ವಸತಿ ಗೃಹದಲ್ಲಿರುವ ಸಿಬ್ಬಂದಿಗಳನ್ನು ಮನೆ ಖಾಲಿ ಮಾಡು ವಂತೆ ನೋಟಿಸ್ ನೀಡಲಾಗಿತ್ತು. ಅಲ್ಲದೆ ಟ್ರೈನಿಗಳಿಗೆ ಕರ್ತವ್ಯಕ್ಕೆ ಹಾಜರಾಗಲು ಗಡುವು ನೀಡಲಾಗಿತ್ತು. ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬಹುದೆಂಬ ಆತಂಕ ಹಾಗೂ ಹಿರಿಯ ಅಧಿಕಾರಿಗಳ ಒತ್ತಡ ದಿಂದ ಕೆಲವು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗು ತ್ತಿರುವುದರಿಂದ ಸಾರಿಗೆ ಬಸ್‍ಗಳ ಸಂಚಾರ ದಲ್ಲಿ ಸುಧಾರಣೆ ಕಂಡು ಬಂತು.

ಗ್ರಾಮಾಂತರ ವಿಭಾಗದಲ್ಲಿ 50 ಬಸ್: ಕಳೆದ 5 ದಿನಗಳಿಂದ ರಾಜ್ಯ ವ್ಯಾಪಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರದಲ್ಲಿ ಮೈಸೂರು ನಗರ ಹಾಗೂ ಗ್ರಾಮಾಂತರ ವಿಭಾಗಗಳ ಸಾರಿಗೆ ನೌಕ ರರು ಬೆಂಬಲ ನೀಡಿ, ಕರ್ತವ್ಯಕ್ಕೆ ಗೈರು ಹಾಜರಾಗಿ ದ್ದರು. ಇದರಿಂದ ಮೈಸೂರು ಗ್ರಾಮಾಂತರ ವಿಭಾಗ ದಲ್ಲಿರುವ 700 ಬಸ್‍ಗಳು ಸಂಚಾರ ಸ್ಥಗಿತಗೊಳಿ ಸಿದ್ದವು. ಪ್ರತಿದಿನ 650 ಮಾರ್ಗಗಳಲ್ಲಿ 2500 ಟ್ರಿಪ್ ಸಂಚರಿಸುತ್ತಿದ್ದವು. ಈ 700 ಬಸ್‍ಗಳಲ್ಲಿ ಕಳೆದ 2 ದಿನಗಳಿಂದ 20-30 ಬಸ್ ಸಂಚರಿಸುತ್ತಿದ್ದವು. ಇಂದು ಬೆಳಿಗ್ಗೆ 45 ಬಸ್ ವಿವಿಧ ಮಾರ್ಗದಲ್ಲಿ ಸಂಚಾರ ಆರಂಭಿಸಿದ್ದವು. ಮಧ್ಯಾಹ್ನದ ನಂತರ 10-15 ಹೆಚ್ಚುವರಿ ಬಸ್‍ಗಳು ಸಂಚಾರ ಆರಂಭಿಸಿ ದವು. ಇದರಿಂದ ಕಳೆದ 5
ದಿನಗಳಿಂದ ಖಾಸಗಿ ಬಸ್‍ಗಳಿಂದಲೇ ಗಿಜಿಗುಡುತ್ತಿದ್ದ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಭಾನುವಾರ ಹೆಚ್ಚಿನ ಸಂಖ್ಯೆ ಯಲ್ಲಿ ಸಾರಿಗೆ ಬಸ್‍ಗಳು ದರ್ಶನ ನೀಡಿದವು.

ನಗರ ವಿಭಾಗÀದಲ್ಲಿ 100 ಬಸ್: ಮುಷ್ಕರದಿಂ ದಾಗಿ ಬಿಕೋ ಎನ್ನುತ್ತಿದ್ದ ಮೈಸೂರು ನಗರ ಬಸ್ ನಿಲ್ದಾಣದಲ್ಲಿ ಭಾನುವಾರ 100ಕ್ಕೂ ಹೆಚ್ಚು ನಗರ ಸಾರಿಗೆ ಬಸ್‍ಗಳು ಕಂಡು ಬಂದವು. ನಗರ ವಿಭಾಗದಲ್ಲಿ ಕುವೆಂಪುನಗರ, ಬನ್ನಿಮಂಟಪ, ಸಾತಗಳ್ಳಿ ಹಾಗೂ ವಿಜಯನಗರ ಬಸ್ ಡಿಪೋಗಳಿಂದ ಒಟ್ಟು 450 ಬಸ್‍ಗಳಿದ್ದು, ಮುಷ್ಕರದಿಂದಾಗಿ ಸಂಚಾರ ಸ್ಥಗಿತಗೊಳಿಸಿದ್ದವು. ಶುಕ್ರವಾರ 35, ಶನಿವಾರ 50ಕ್ಕೂ ಹೆಚ್ಚು ಬಸ್ ಸಂಚರಿಸಿದ್ದವು. ಆದರೆ ಇಂದು ಬೆಳಗ್ಗೆ ನಗರ ಸಾರಿಗೆಯ 100ಕ್ಕೂ ಹೆಚ್ಚು ಬಸ್ ಸಂಚಾರ ನಡೆಸಿದವು.

ಗ್ರಾಮೀಣ ಪ್ರದೇಶಕ್ಕಿಲ್ಲ ಬಸ್: ಮೈಸೂರು ತಾಲೂಕು ಸೇರಿದಂತೆ ವಿವಿಧ ಗ್ರಾಮಗಳಿಗೆ ಇನ್ನೂ ಬಸ್ ಸೇವೆ ಆರಂಭವಾಗಿಲ್ಲ. ಮೈಸೂರಿನ ವಿವಿಧ ಬಡಾವಣೆಗೆ ಬಸ್ ಸಂಚಾರ ಆರಂಭವಾಗಿದೆ ಯಾದರೂ ಗ್ರಾಮೀಣ ಪ್ರಯಾಣಿಕರಿಗೆ ಬಸ್ ಸೌಲಭ್ಯವಿಲ್ಲದೆ, ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಮುಂದುವರೆದಿದೆ.

ಮುಂದುವರೆದ ಖಾಸಗಿ ವಾಹನಗಳ ಸೇವೆ: ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಿಂದ ಭಾನುವಾರ ರಾಜಹಂಸ, ಐರಾವತ, ಸುವರ್ಣ ಸಾರಿಗೆ ಬಸ್‍ಗಳ ಸಂಚಾರ ಆರಂಭವಾಗಿತ್ತಾದರೂ ಖಾಸಗಿ ಬಸ್, ಮಿನಿ ಬಸ್, ಟಿಟಿ ಸೇರಿದಂತೆ ವಿವಿಧ ಖಾಸಗಿ ವಾಹನಗಳು ಪ್ರಯಾಣಿಕರಿಗಾಗಿ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದವು. ವಿವಿಧ ಮಾರ್ಗದಲ್ಲಿ ಸಂಚರಿಸಲು ಸಾರಿಗೆ ಸಂಸ್ಥೆಯ 50ಕ್ಕೂ ಹೆಚ್ಚು ಬಸ್‍ಗಳು ಬಸ್ ನಿಲ್ದಾಣಕ್ಕೆ ಆಗಮಿಸಿದ್ದರಿಂದ ಖಾಸಗಿ ವಾಹನಗಳ ಚಾಲಕರು, ನಿರ್ವಾಹಕರು ಹಾಗೂ ಏಜೆಂಟರಲ್ಲಿ ತಳಮಳ ಉಂಟಾಗಿತ್ತು.
ಸಾರಿಗೆ ಸಂಸ್ಥೆಗಳ ಬಸ್‍ಗಳ ಸಂಚಾರ ಹೆಚ್ಚಾಗುವುದರಿಂದ ಖಾಸಗಿ ಬಸ್‍ಗಳಿಗೆ ಪ್ರಯಾಣಿಕರ ಕೊರತೆ ಉಂಟಾಗಿ ನಷ್ಟವಾಗುತ್ತದೆ. ಖಾಸಗಿ ವಾಹನಗಳ ಸಂಚಾರ ಮುಂದುವರೆಸಬೇಕೋ ಅಥವಾ ಸಂಚಾರ ಸ್ಥಗಿತಗೊಳಿಸಬೇಕೋ ಎನ್ನುವುದನ್ನು ಸ್ಪಷ್ಟಪಡಿಸು ವಂತೆ ಬಸ್ ನಿಲ್ದಾಣದಲ್ಲಿದ್ದ ಸಾರಿಗೆ ಸಂಸ್ಥೆ ಅಧಿಕಾರಿಗಳಲ್ಲಿ ಕೇಳಿಕೊಳ್ಳುತ್ತಿದ್ದರು.

Translate »