ವಿಕ್ರಂ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ಸ್‍ಗೆ ಚಿಕಿತ್ಸೆ ಆರಂಭ
ಮೈಸೂರು

ವಿಕ್ರಂ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ಸ್‍ಗೆ ಚಿಕಿತ್ಸೆ ಆರಂಭ

July 23, 2020

ಮೈಸೂರು, ಜು.22(ಆರ್‍ಕೆ)- ಕೊರೊನಾ ಸೋಂಕಿತ ಕೊರೊನಾ ಮುಂಚೂಣಿ ವಾರಿಯರ್ಸ್‍ಗೆ ಮೈಸೂರಿನ ವಿಕ್ರಂ ಜೇಷ್ಠ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್‍ನಲ್ಲಿ ಇಂದಿ ನಿಂದ ಚಿಕಿತ್ಸೆ ಆರಂಭವಾಗಿದೆ.

ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಬುಧವಾರ ಬೆಳಿಗ್ಗೆ ಕೋವಿಡ್ ಕೇರ್ ಸೆಂಟರ್ ಕಾರ್ಯಕ್ಕೆ ಚಾಲನೆ ನೀಡಿ ದರು. ವೈದ್ಯರು, ನರ್ಸ್‍ಗಳು, ಪೌರಕಾರ್ಮಿಕರು, ಪೊಲೀಸ್ ಸಿಬ್ಬಂದಿಗೆ ಅಲ್ಲಿ ಚಿಕಿತ್ಸೆ ನೀಡ ಲಿದ್ದು, ಮೈಸೂರು ಅಸೋಸಿ ಯೇಷನ್ ಆಫ್ ಹಾಸ್ಪಿಟಲ್, ನರ್ಸಿಂಗ್ ಹೋಂ ಮತ್ತು ಡಯಾಗ್ನೋಸ್ಟಿಕ್ ಸೆಂಟರ್(ಒಂಊಂಓ) ಮತ್ತು ಜಿಲ್ಲಾಡಳಿತದಿಂದ 97 ಹಾಸಿಗೆಯ ವೈದ್ಯಕೀಯ ಸೌಲಭ್ಯವನ್ನು ಒದಗಿಸಿದೆ. ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಕೊರೊನಾ ಮುಂಚೂಣಿ ವಾರಿಯರ್ಸ್‍ಗಳನ್ನು ದಾಖ ಲಿಸಿ ಚಿಕಿತ್ಸೆ ನೀಡಲು ವೆಂಟಿಲೇಟರ್, ಆಕ್ಸಿಜನ್, ಪಿಪಿಇ ಕಿಟ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಜಿಲ್ಲಾಡಳಿತ ಪೂರೈಸಿದ್ದು, ಮಹಾನ್ ಸಂಸ್ಥೆಯಿಂದ ವೈದ್ಯರು, ನರ್ಸ್, ಹೌಸಕೀಪಿಂಗ್ ಹಾಗೂ ‘ಡಿ’ ಗ್ರೂಪ್ ನೌಕರ ಸಂಬಳ ನೀಡುವ ವ್ಯವಸ್ಥೆ ಮಾಡಲಾಗಿದೆ. ವಿಕ್ರಂ ಜೇಷ್ಠ ಆಸ್ಪತ್ರೆಯ 3 ಮತ್ತು 4ನೇ ಮಹಡಿಯಲ್ಲಿ ಒಟ್ಟು 97 ಹಾಸಿಗೆಯ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಒದಗಿಸಿರುವುದರಿಂದ ಇಂದಿನಿಂದ ಸೋಂಕಿತರ ಚಿಕಿತ್ಸಾ ಕಾರ್ಯ ಆರಂಭವಾಗಿದೆ. ಮಹಾನ್ ಸಂಸ್ಥೆ ಅಧ್ಯಕ್ಷ ಡಾ. ಜಾವಿದ್ ನಯೀಮ್, ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್, ಎಸ್ಪಿ ಸಿ.ಬಿ.ರಿಷ್ಯಂತ್ ಹಾಗೂ ಇತರರು ಉಪಸ್ಥಿತರಿದ್ದರು.

Translate »