ಮೈಸೂರಲ್ಲಿ 2ನೇ ಕೋವಿಡ್ ಆಸ್ಪತ್ರೆಯಾಗಿ ತುಳಸಿದಾಸ್ ಆಸ್ಪತ್ರೆ ನೂತನ ಕಟ್ಟಡ ಬಳಕೆ
ಮೈಸೂರು

ಮೈಸೂರಲ್ಲಿ 2ನೇ ಕೋವಿಡ್ ಆಸ್ಪತ್ರೆಯಾಗಿ ತುಳಸಿದಾಸ್ ಆಸ್ಪತ್ರೆ ನೂತನ ಕಟ್ಟಡ ಬಳಕೆ

June 28, 2020

ಮೈಸೂರು, ಜೂ. 27(ಆರ್‍ಕೆ)- ಮೈಸೂರಿನ ಜೆಎಲ್‍ಬಿ ರಸ್ತೆಯ ಸೇಟ್ ಮೋಹನ್‍ದಾಸ್ ತುಳಸಿದಾಸ್(Sಒಖಿ) ಆಸ್ಪತ್ರೆ ನೂತನ ಕಟ್ಟಡವನ್ನು ಮೈಸೂರಲ್ಲಿ ಎರಡನೇ ಕೋವಿಡ್-19 ಆಸ್ಪತ್ರೆಯಾಗಿ ಬಳಸಿಕೊಳ್ಳಲಾಗುವುದು ಎಂದು ಸಂಸದ ಪ್ರತಾಪ್‍ಸಿಂಹ ಇಂದಿಲ್ಲಿ ತಿಳಿಸಿದ್ದಾರೆ.

ಪ್ರಗತಿಯಲ್ಲಿರುವ ಎಸ್‍ಎಂಟಿ ತಾಯಿ, ಮಗು ಆಸ್ಪತ್ರೆಯ ನೂತನ ಕಟ್ಟಡದ ಕಾಮ ಗಾರಿ ಪರಿಶೀಲಿಸಿದ ಅವರು ತ್ವರಿತಗತಿ ಯಲ್ಲಿ ಕಾಮಗಾರಿ ಪೂರ್ಣಗೊಳಿಸು ವಂತೆ ಗುತ್ತಿಗೆದಾರ ಹಾಗೂ ಉಸ್ತುವಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಕೇಂದ್ರ ಪುರಷ್ಕøತ ರಾಷ್ಟ್ರೀಯ ಆರೋಗ್ಯ ಅಭಿಯಾನ(ಓಊಒ)ದಡಿ 19.5 ಕೋಟಿ ರೂ. ಅನುದಾನದಲ್ಲಿ ಸೇಟ್ ಮೋಹನ್‍ದಾಸ್ ತುಳಸಿದಾಸ್ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದ್ದು, ಹೆರಿಗೆ ಮತ್ತು ಮಕ್ಕಳ ಆರೈಕೆ, ಚಿಕಿತ್ಸೆಗಾಗಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ನೆಲ ಮತ್ತು ಮೊದಲ ಮಹಡಿಯ ನೂತನ ಕಟ್ಟಡದಲ್ಲಿ 2 ಆಪರೇಷನ್ ಥಿಯೇಟರ್ ಗಳು, 2 ಲೇಬರ್ ವಾರ್ಡ್, ನವಜಾತ ಶಿಶು ತುರ್ತು ಚಿಕಿತ್ಸಾ ಘಟಕ ಹಾಗೂ 100 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆಗೆ ಬೇಕಾದ ವೈದ್ಯಕೀಯ ಸಲಕರಣೆ, ವೈದ್ಯರು ಹಾಗೂ ಸಿಬ್ಬಂದಿಗಳನ್ನು ಒದಗಿಸಲಾಗುವುದು ಎಂದು ಪ್ರತಾಪ್‍ಸಿಂಹ ತಿಳಿಸಿದರು.

ಬಾಕಿ ಉಳಿದಿರುವ ಕಟ್ಟಡದ ಕಾಮಗಾರಿ ಯನ್ನು ಒಂದೂವರೆ ತಿಂಗಳಲ್ಲಿ ಪೂರ್ಣ ಗೊಳಿಸಲಾಗುವುದು. ಅಷ್ಟರಲ್ಲಿ ಈಗಿರುವ ಕೆಆರ್‍ಎಸ್ ರಸ್ತೆಯ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿ ಯಾದಲ್ಲಿ ತುಳಸಿದಾಸ್ ತಾಯಿ-ಮಕ್ಕಳ ಆಸ್ಪತ್ರೆ ನೂತನ ಕಟ್ಟಡವನ್ನು ಎರಡನೇ ಕೋವಿಡ್ ಆಸ್ಪತ್ರೆಯನ್ನಾಗಿ ಬಳಸಿಕೊಳ್ಳಲಾಗು ವುದು ಎಂದು ತಿಳಿಸಿದರು.

ಕಟ್ಟಡದ ಕೆಲಸ ಮುಗಿದ ನಂತರ ಇಲ್ಲಿ ಸಂಪೂರ್ಣ ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಿಸಿ ಕೋವಿಡ್-19 ಸೋಂಕಿತರ ಚಿಕಿತ್ಸೆಗೆ ಬೇಕಾದ ಸೌಲಭ್ಯಗಳನ್ನು ಒದಗಿಸಿ ರೋಗಿ ಗಳನ್ನು ದಾಖಲಿಸಿಕೊಳ್ಳಲು ತಯಾರಿ ಮಾಡು ವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಗರ ಮಧ್ಯೆ ವಸತಿ ಪ್ರದೇಶ ವಾಗಿದ್ದರೂ, ಸುತ್ತ ಕಾಂಪೌಂಡ್ ಇರುವ ಕಾರಣ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಸೋಂಕು ಹರಡದಂತೆ ವ್ಯವಸ್ಥೆ ಮಾಡಲಾಗುವುದು ಎಂದರು. ಸೋಂಕು ಸ್ಫೋಟಗೊಂಡಿರುವ ಬೆಂಗಳೂರು, ಮುಂಬೈ ಮತ್ತು ಚೆನ್ನೈನಂತಹ ನಗರಗಳಲ್ಲಿ ಜನ ವಸತಿ ಪ್ರದೇಶದಲ್ಲಿ ಕೋವಿಡ್ ಆಸ್ಪತ್ರೆ ಇದೆ. ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು. ಜಿಲ್ಲಾ ಆರೋಗ್ಯಾ ಧಿಕಾರಿ ಡಾ.ವೆಂಕಟೇಶ್, ಪಿಡಬ್ಲ್ಯೂಡಿ ಅಧಿಕಾರಿಗಳು ಆಸ್ಪತ್ರೆ ಕಟ್ಟಡದ ಕಾಮ ಗಾರಿ ಪರಿಶೀಲನೆ ವೇಳೆ ಉಪಸ್ಥಿತರಿದ್ದರು.

Translate »