ಮೈಸೂರು, ಜೂ.25(ಆರ್‍ಕೆಬಿ)- ಕೆಪಿ ಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಜು.2 ರಂದು ಬೆಂಗಳೂರಿನಲ್ಲಿ ಪದಗ್ರಹಣ ಮಾಡು ತ್ತಿದ್ದು, ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಹೆಚ್ಚು ಜನ ಹೋಗಲಾಗದು. ಆದ ಕಾರಣ ಪಕ್ಷದ ಮುಖಂಡರು, ಕಾರ್ಯ ಕರ್ತರು ಅವರು ಇದ್ದಲ್ಲಿಯೇ ಪೆಂಡಾಲ್ ಹಾಕಿಸಿ, ಒಂದೆರಡು ದೊಡ್ಡ ಟಿವಿ ಇಟ್ಟು ಕನಿಷ್ಠ 150 ಮಂದಿಯಾದರೂ ವೀಕ್ಷಿಸು ವಂತೆ ವ್ಯವಸ್ಥೆ ಮಾಡಬೇಕು. ಇದೇ ವೇಳೆ ಪಕ್ಷದ ಮುಖಂಡರು, ಕಾರ್ಯಕರ್ತರು ಸಂವಿಧಾನದ ಪೀಠಿಕೆ ಓದಬೇಕು ಎಂದು ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಚಾಮುಂಡೇಶ್ವರಿ ಹಾಗೂ ಇಲವಾಲ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪೂರ್ವಭಾವಿ ಸಭೆ ಯಲ್ಲಿ ಮಾತನಾಡಿದ ಅವರು, ಕಾರ್ಯ ಕರ್ತರು ತಮ್ಮ ಊರುಗಳಲ್ಲಿಯೇ ಇದ್ದು ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ವೀಕ್ಷಿಸಲು ಕಾಂಗ್ರೆಸ್ ವತಿಯಿಂದ ಎಲ್ಲಾ ವ್ಯವಸ್ಥೆ ಮಾಡಲಾಗುವುದು. ಪ್ರತಿಯೊಬ್ಬ ಕಾಂಗ್ರೆಸ್ ಮುಖಂಡರೂ ಭಾಗವಹಿಸಿ, ಅದರ ವರದಿಯನ್ನು ಕೆಪಿಸಿಸಿಗೆ ಕಳುಹಿಸಿ ಕೊಡಬೇಕು. ಇದು ಕೆಪಿಸಿಸಿ ನೂತನ ಅಧ್ಯಕ್ಷರ ಕೋರಿಕೆ ಎಂದರು.
ಪ್ರಚಾರದ ಕೊರತೆ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಕಾಂಗ್ರೆಸ್ ಹಿಂದೆ ಬಿದ್ದಿತ್ತು. ಇಂದು ತಂತ್ರಜ್ಞಾನ ಮತ್ತು ಸಾಮಾ ಜಿಕ ಜಾಲತಾಣ ಬಳಸುತ್ತಿದ್ದು, ಅದರಲ್ಲಿ ಯಶಸ್ವಿ ಆಗುತ್ತೇವೆ ಎಂಬ ವಿಶ್ವಾಸವಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯಕುಮಾರ್ ಮಾತನಾಡಿ, ಇದು ಕೊರೊನಾ ಸಂದರ್ಭ. ಜಿಲ್ಲಾಧಿಕಾರಿಗಳು ನೀಡಿರುವ ಗಂಭೀರ ಸೂಚನೆಗಳನ್ನು ಪಾಲಿಸಿ ಸಭೆ ನಡೆಸಬೇಕು. ಮುಖಂಡರು, ಕಾರ್ಯಕರ್ತರು ಸಕ್ರಿಯ ವಾಗಿ ಪಾಲ್ಗೊಂಡು ಕಾಂಗ್ರೆಸ್ ಸಂಘ ಟನೆಗೆ ತೊಡಗಬೇಕು ಎಂದು ತಿಳಿಸಿದರು.
ಜಿಪಂ ಮಾಜಿ ಅಧ್ಯಕ್ಷ ಕೆ.ಮರಿಗೌಡ ಮಾತ ನಾಡಿ, ಸಂಘಟನೆ ಕೊರತೆಯಿಂದ ಪಕ್ಷಕ್ಕೆ ಸೋಲಾಗಿತ್ತು. ಇದಕ್ಕಾಗಿ ತಳಮಟ್ಟದಿಂದ ಪಕ್ಷವನ್ನು ಸಂಘಟಿಸಲು ಕಾರ್ಯಕ್ರಮ ಗಳನ್ನು ಹಾಕಿಕೊಳ್ಳಲಾಗುತ್ತಿದೆ. ಜನರಿಗೆ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿ ಹಾಗೂ ಕಾಂಗ್ರೆಸ್ ಸರ್ಕಾರದ ಸಾಧನೆ ಗಳನ್ನು ತಿಳಿಸಬೇಕಿದೆ ಎಂದರು.
ಈ ಸಂದರ್ಭ ಮುಖಂಡರಾದ ಗುರು ಪಾದಸ್ವಾಮಿ, ಮಾವಿನಹಳ್ಳಿ ಸಿದ್ದೇಗೌಡ, ಸಿ.ಎನ್.ಮಂಜೇಗೌಡ, ಜೇಸುದಾಸ್, ಚಾಮುಂಡೇಶ್ವರಿ ಬ್ಲಾಕ್ ಅಧ್ಯಕ್ಷ ಉಮಾ ಶಂಕರ್, ಇಲವಾಲ ಬ್ಲಾಕ್ ಅಧ್ಯಕ್ಷ ಸಿದ್ದ ರಾಜು, ಜಿಪಂ ಸದಸ್ಯ ಅರುಣ್‍ಕುಮಾರ್ ಇನ್ನಿತರರು ಉಪಸ್ಥಿತರಿದ್ದರು