ವಿಶಿಷ್ಟವಾಗಿ ನಡೆದ ವಿಶ್ವ ಶೌಚಾಲಯ ದಿನ ಕಾರ್ಯಕ್ರಮ
ಚಾಮರಾಜನಗರ

ವಿಶಿಷ್ಟವಾಗಿ ನಡೆದ ವಿಶ್ವ ಶೌಚಾಲಯ ದಿನ ಕಾರ್ಯಕ್ರಮ

November 20, 2018

ಚಾಮರಾಜನಗರ:  ಜಿಲ್ಲಾ, ತಾಲೂಕು ಹಾಗೂ ಹರದನಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ವಿಶ್ವ ಶೌಚಾಲಯ ದಿನವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಶೌಚಾಲಯ ಬಳಕೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಅಧಿಕಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಹರದನಹಳ್ಳಿಯವರೆಗೆ ನಡೆಸಿದ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ನಗರದ ಜಿಲ್ಲಾಡ ಳಿತ ಭವನದ ಆವರಣದ ಬಳಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾ ಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಚಾಲನೆ ನೀಡಿದರು. ಅಲ್ಲದೆ ಹರೀಶ್ ಕುಮಾರ್ ಅವರೂ ಸಹ ಸೈಕಲ್ ಏರಿ ಜಾಗೃತಿ ಜಾಥಾ ದಲ್ಲಿ ಪಾಲ್ಗೊಂಡು ಗಮನ ಸೆಳೆದರು.

ನಗರದ ಪ್ರಮುಖ ರಸ್ತೆಯ ಮೂಲಕ ಸಾಗಿದ ಸೈಕಲ್ ಜಾಥಾ ಹರದನಹಳ್ಳಿ ಯಲ್ಲಿ ಮುಕ್ತಾಯವಾಯಿತು. ಬಳಿಕ ಹರದನ ಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಅಧ್ಯಕ್ಷರಾದ ದೊಡ್ಡಮ್ಮ ಉದ್ಘಾಟಿಸಿದರು.

ಇದೇ ವೇಳೆ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್, ಜಿಲ್ಲೆಯಲ್ಲಿ ಕಳೆದ ವರ್ಷದಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಶೌಚಾಲಯ ಬಳಕೆ ಪೂರ್ಣ ಪ್ರಮಾಣದಲ್ಲಿ ಮಾಡ ಬೇಕಿದೆ. ಇದರ ಜಾಗೃತಿಗಾಗಿಯೇ ಈ ವರ್ಷ ವಿಶೇಷವಾಗಿ ಸಮೂಹ ಆಂದೋಲನ ಮಾದರಿಯಲ್ಲಿ ಕಾರ್ಯಕ್ರಮ ನಡೆಸುವ ಉದ್ದೇಶ ಹೊಂದಲಾಗಿದೆ ಎಂದರು.

ಶಿಕ್ಷಣ, ಆರೋಗ್ಯ, ಮಾನವ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಕೇವಲ ಅಧಿಕಾರಿಗಳ ಪಾತ್ರ ಮುಖ್ಯವಾಗುವುದಿಲ್ಲ. ಜನಪ್ರತಿನಿಧಿಗಳ ಸಹಕಾರದೊಂದಿಗೆ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕÉೂಂಡಾಗ ಪ್ರಗತಿಪರ ಕೆಲಸಗಳು ಪರಿಣಾಮಕಾರಿಯಾಗಿ ನಡೆಯಲಿದೆ. ನಾಗರಿಕರು, ಜನಪ್ರತಿನಿಧಿ ಗಳು ನಿರೀಕ್ಷಿತ ಬೆಂಬಲ ನೀಡುತ್ತಿದ್ದಾರೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದರು.

ಆರೋಗ್ಯ ಕಾಳಜಿಯಿಂದ ನಿರ್ಮಿಸಲಾಗಿ ರುವ ಶೌಚಾಲಯಗಳನ್ನು ಬಳಕೆ ಮಾಡುವುದರಿಂದ ಆಗುವ ಪ್ರಯೋಜನ ಕುರಿತು ವಿದ್ಯಾರ್ಥಿಗಳಿಂದಲೇ ಅರಿವು ಮೂಡಿಸಬಬಹುದು. ಹೀಗಾಗಿ ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಶೌಚಾ ಲಯದ ಮಹತ್ವವನ್ನು ತಿಳಿಸಿ ಅವರ ಮೂಲಕ ಪೋಷಕರಿಗೆ ಜಾಗೃತಿ ಮೂಡಿಸುವ ಉದ್ದೇಶ ನಮ್ಮದಾಗಿದೆ. ಈ ಕಾರಣ ದಿಂದಲೇ ಶಾಲೆಗಳಿಂದಲೇ ವಿಶ್ವ ಶೌಚಾಲಯ ದಿನ ಆಚರಣೆಗೆ ಮುಂದಾಗಿದ್ದೇವೆ ಎಂದು ಹರೀಶ್ ಕುಮಾರ್ ತಿಳಿಸಿದರು.

ತಾಲೂಕು ಪಂಚಾಯತ್ ಸದಸ್ಯ ಮಹದೇವಶೆಟ್ಟಿ ಮಾತನಾಡಿ, ಬಯಲು ಶೌಚಮುಕ್ತ ಗ್ರಾಮದ ಕನಸು ಗಾಂಧೀಜಿ ಯವರದ್ದಾಗಿತ್ತು. ಸ್ವಚ್ಛತೆ ಕಾಪಾಡುವ ಮೂಲಕ ಆರೋಗ್ಯಕರ ವಾತಾವರಣ ವನ್ನು ನಿರ್ಮಿಸಿಕೊಳ್ಳಬೇಕೆಂಬ ಕಾಳಜಿಯನ್ನು ಎಲ್ಲರೂ ಅರಿಯಬೇಕು ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಉಪನಿರ್ದೇಶಕರು ಹಾಗೂ ಜಂಟಿ ಕೃಷಿ ನಿರ್ದೇಶಕ ಎಂ. ತಿರುಮಲೇಶ್ ಮಾತ ನಾಡಿ, ಸ್ವಚ್ಛತೆಯೇ ದೇವರು. ನೈರ್ಮಲ್ಯ ಕಾಪಾಡಿಕೊಳ್ಳದಿದ್ದರೆ ರೋಗರುಜಿನಗಳಿಗೆ ತುತ್ತಾಗಬೇಕಾಗುತ್ತದೆ. ವಿದ್ಯಾರ್ಥಿಗಳು ಶೌಚಾಲಯ ಬಳಕೆ ನಿರ್ವಹಣೆಗೆ ಒತ್ತು ನೀಡುವ ಜತೆಗೆ ಇತರರಿಗೂ ಉತ್ತೇಜನ ಮಾರ್ಗದರ್ಶನ ಮಾಡಬೇಕು ಎಂದರು.

ಸ್ವಚ್ಛತೆಯೇ ಸ್ವರ್ಗ, ಕೊಚ್ಚೆ ಕೊಳಕೆಂಬುದು ನರಕ, ಮನದಂಗಳ ಮನೆಯಂಗಳ ಊರಂ ಗಳ ಸ್ವಚ್ಛವಿದ್ದರೆ ನಿತ್ಯ ಬದುಕು ಸ್ವರ್ಗ ನೋಡಾ ಎಂಬ ಹನಿಗವನವನ್ನು ಸ್ಥಳದಲ್ಲಿಯೇ ರಚಿಸಿ ವಾಚಿಸುವ ಮೂಲಕ ತಿರುಮಲೇಶ್ ಸ್ವಚ್ಛತೆಯ ಪ್ರಾಮುಖ್ಯತೆಯನ್ನು ಮನನ ಮಾಡಿಕೊಟ್ಟರು.

ಆರೋಗ್ಯ, ನೈರ್ಮಲ್ಯ ಕಾಪಾಡುವ ಕುರಿತು ಪ್ರತಿಜ್ಞಾವಿಧಿಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಬೋಧಿ ಸಿದರು. ಕಲಾವಿದರಾದ ರಾಮಸಮುದ್ರ ಮಹೇಶ್, ನಟರಾಜು ಅವರು ನೈರ್ಮಲ್ಯ ಜಾಗೃತಿ ಗೀತೆಗಳನ್ನು ಹಾಡಿದರು.

ತಾಪಂ ಸದಸ್ಯ ಕುಮಾರ್, ಗ್ರಾಪಂ ಅಧ್ಯಕ್ಷ ಸುಬ್ಬಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಪದ್ಮಾ ಶೇಖರ್ ಪಾಂಡೆ, ಮುಖ್ಯ ಲೆಕ್ಕಾಧಿಕಾರಿ ಬಸವರಾಜು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುಳ, ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಎಸ್. ರಮೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Translate »