ಶೌಚಾಲಯ ನಿರ್ಮಾಣದಲ್ಲಿ ನಿರೀಕ್ಷೆಗೂ ಮೀರಿ ಪ್ರಗತಿ
ಚಾಮರಾಜನಗರ

ಶೌಚಾಲಯ ನಿರ್ಮಾಣದಲ್ಲಿ ನಿರೀಕ್ಷೆಗೂ ಮೀರಿ ಪ್ರಗತಿ

November 21, 2018

ಗುಂಡ್ಲುಪೇಟೆ: ‘ಸ್ವಚ್ಛ ತೆಯೇ ಸೇವೆ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕರೆಗೆ ಜನರು ಸ್ಪಂದಿಸಿದ ಕಾರಣ ಶೌಚಾಲಯ ನಿರ್ಮಾ ಣದಲ್ಲಿ ನಿರೀಕ್ಷೆಗೂ ಮೀರಿ ಪ್ರಗತಿ ಆಗಿದೆ’ ಎಂದು ಶಾಸಕ ಸಿ.ಎಸ್.ನಿರಂಜನ ಕುಮಾರ್ ಸಂತಸ ವ್ಯಕ್ತಪಡಿಸಿದರು.

ತಾಲೂಕಿನ ಮೂಖಹಳ್ಳಿ ಗ್ರಾಮದಲ್ಲಿನ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಜಿಲ್ಲಾ ಪಂಚಾ ಯಿತಿ, ತಾಲೂಕು ಪಂಚಾಯಿತಿ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಆಯೋಜಿಸಿದ್ದ ವಿಶ್ವ ಶೌಚಾಲಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮಾಂತರ ಪ್ರದೇಶದಲ್ಲಿ ಶೌಚಾಲಯಗಳನ್ನು ನಿರ್ಮಿಸುವುದರೊಂದಿಗೆ ಬಯಲು ಶೌಚಾಲಯ ಮುಕ್ತ ಮಾಡಲು ಎಲ್ಲರೂ ಸಹಕಾರ ನೀಡಬೇಕು. ಕೇವಲ ಶೌಚಾಲಯವನ್ನು ಕಟ್ಟಿಸಿಕೊಳ್ಳುವುದು ಮುಖ್ಯವಲ್ಲ. ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಸ್ವಚ್ಛತೆಯೇ ಸೇವೆ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕರೆಗೆ ಜನರು ಸ್ಪಂದಿಸಿದ ಕಾರಣ ಶೌಚಾಲಯ ನಿರ್ಮಾಣದಲ್ಲಿ ನಿರೀಕ್ಷೆಗೂ ಮೀರಿ ಪ್ರಗತಿ ಆಗಿದೆ. ಇದು ಸಂತಸ ಪಡುವ ವಿಚಾರವಾಗಿದೆ. ಶೌಚಾಲಯವು ಬಳಕೆ ಆಗಬೇಕೆಂಬ ಉದ್ದೇಶದಿಂದ ವಿಶ್ವ ಶೌಚಾಲಯ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.

ತಾಲೂಕಿನಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿ ಮತ್ತು ಮಳೆಯಿಂದ ಕೆರೆಕಟ್ಟೆಗಳು ಭರ್ತಿಯಾಗಿರುವ ಕಾರಣ ಯಾವುದೇ ಗ್ರಾಮದಲ್ಲೂ ನೀರಿಗೆ ಕೊರತೆಯಿಲ್ಲ. ಹೀಗಾಗಿ ಶೌಚಾಲಯ ಬಳಕೆಗೆ ನೀರಿನ ಕೊರತೆಯ ಕಾರಣ ನೀಡದೇ ಎಲ್ಲರೂ ಬಳಸಬೇಕು. ನಿರ್ಮಿಸಿಕೊಂಡ ಶೌಚಾ ಲಯವನ್ನು ಸ್ಟೋರ್ ರೂಂ ಅಥವಾ ಇತರೆ ನಿರು ಪಯುಕ್ತ ವಸ್ತುಗಳ ದಾಸ್ತಾನಿಗೆ ಬಳಕೆ ಮಾಡಬಾರದು ಎಂದು ಸಲಹೆ ನೀಡಿದರು.

ಕಳೆದ ಐದು ವರ್ಷಗಳ ಹಿಂದಕ್ಕೆ ಹೋಲಿಸಿದರೆ ಪ್ರಸ್ತುತ ಶೌಚಾಲಯ ಉತ್ತಮ ನಿರ್ವಹಣೆ ಆಗಿದೆ. ಇದಲ್ಲದೇ ಅನೈರ್ಮಲ್ಯಕ್ಕೆ ಕಾರಣವಾಗುವ ಪ್ಲಾಸ್ಟಿಕ್ ಕವರ್, ಶುಭ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಲೋಟ ಬಳಕೆ ಮಾಡಬಾರದು. ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ತಾಪಂ ಇಓ ಕೃಷ್ಣಮೂರ್ತಿ ಮಾತನಾಡಿ, ಬಯಲು ಶೌಚಾಲಯ ಪದ್ಧತಿ ಅತ್ಯಂತ ಕೆಟ್ಟ ಪದ್ಧತಿಯಾಗಿದೆ. ಇದರಿಂದ ನಾನಾ ರೀತಿಯ ತೊಂದರೆ ಆಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳಬೇಕು. ಜಾಗದ ಸಮಸ್ಯೆ ಇರುವವರು ಸಾಮೂಹಿಕ ಶೌಚಾಲಯ ಬಳಸಿಕೊಳ್ಳಬೇಕು. ಮನೆ ನಿರ್ಮಾಣ ಸಂದರ್ಭದಲ್ಲಿ ಕಡ್ಡಾಯವಾಗಿ ಶೌಚಾಲಯಕ್ಕೆ ಸ್ಥಳ ಮೀಸಲಿಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಬಸಮ್ಮಣಿ ಸತೀಶ್, ಸದಸ್ಯರಾದ ಲೋಕೇಶ್, ಎನ್.ಶಿವ ಮೂರ್ತಿ, ಪರಮೇಶ್ವರಪ್ಪ, ಮಾಜಿ ಸದಸ್ಯ ರಾಜಪ್ಪ, ಮುಖಂಡರಾದ ಬಿ.ಎನ್.ವೃಷಬೇಂದ್ರ ಪ್ರಸಾದ್, ಹೊಂಗಹಳ್ಳಿ ಶಿವಪ್ಪ, ಬಿ.ಎಲ್.ಪರಶಿವಮೂರ್ತಿ, ಮಹದೇವಪ್ಪ, ಎಚ್.ಮಲ್ಲಿಕಾರ್ಜುನಸ್ವಾಮಿ, ತಾಪಂ ಸಹಾಯಕ ನಿರ್ದೇಶಕ ಬಾಲಸುಬ್ರಮಣ್ಯ ಶರ್ಮ, ವ್ಯವಸ್ಥಾಪಕ ಅರಸ್, ನೌಕರರಾದ ಶ್ರೀಕಂಠಪ್ಪ, ಅಜೀಂ, ಮುಖ್ಯ ಶಿಕ್ಷಕ ಪ್ರಭು, ಗ್ರಾಪಂ ಪಿಡಿಓ ಬಸವರಾ ಜೇಗೌಡ, ಬಿಲ್ ಕಲೆಕ್ಟರ್ ಸುನೀಲ್, ನೌಕರ ಶಿವಸ್ವಾಮಿ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

Translate »