ಜಿಲ್ಲಾ ಆಸ್ಪತ್ರೆಯ ಮುಂಭಾಗ ಶುಶ್ರೂಷಕರ ಪ್ರತಿಭಟನೆ
ಚಾಮರಾಜನಗರ

ಜಿಲ್ಲಾ ಆಸ್ಪತ್ರೆಯ ಮುಂಭಾಗ ಶುಶ್ರೂಷಕರ ಪ್ರತಿಭಟನೆ

November 21, 2018

ಕರ್ತವ್ಯದಲ್ಲಿ ತಮ್ಮನ್ನೇ ಮುಂದುವರೆಸುವಂತೆ ಆಗ್ರಹ, ಕರ್ತವ್ಯಕ್ಕೆ ಗೈರು, ರೋಗಿಗಳ ಪರದಾಟ
ಚಾಮರಾಜನಗರ: ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ಮೂರು ವರ್ಷಗಳಿಂದ ಸ್ಟೆಫಂಡರಿ ಆಧಾರದಲ್ಲಿ ಶುಶ್ರೂಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ತಮ್ಮನ್ನೇ ಮುಂದು ವರೆಸುವಂತೆ ಆಗ್ರಹಿಸಿ ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಮಂಗಳ ವಾರ ಶುಶ್ರೂಷಕರು ಪ್ರತಿಭಟನೆ ನಡೆಸಿದರು.

ಆಸ್ಪತ್ರೆಯ ಮುಖ್ಯದ್ವಾರದಲ್ಲಿ ಜಮಾ ಯಿಸಿದ ಶುಶ್ರೂಷಕರು (ನರ್ಸ್‍ಗಳು) ಬೆಳಿಗ್ಗೆಯಿಂದ ಸಂಜೆವರೆಗೂ ಧರಣಿ ನಡೆಸಿದರು. ನಮ್ಮನ್ನು ಕರ್ತವ್ಯದಲ್ಲಿ ಮುಂದುವರೆಸುವುದಾಗಿ ಲಿಖಿತ ಭರವಸೆ ನೀಡುವವರೆಗೂ ಧರಣಿ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ಚಾಮರಾಜನಗರ ವೈದ್ಯಕೀಯ ವಿಜ್ಞಾ ನಗಳ ಸಂಸ್ಥೆಯು ಪ್ರಾರಂಭವಾಗುವ ಸಂದ ರ್ಭದಲ್ಲಿ ಶುಶ್ರೂಷಕರು (ನರ್ಸ್‍ಗಳ) ಅವಶ್ಯಕತೆ ಇದ್ದಾಗ 60 ನರ್ಸ್‍ಗಳನ್ನು ಸ್ಟೆಫಂಡರಿ ಆಧಾರದಲ್ಲಿ ತೆಗೆದುಕೊಳ್ಳಲಾ ಯಿತು. ನಾವು 3 ವರ್ಷದಿಂದಲೂ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಪ್ರತಿ 6 ತಿಂಗಳಂತೆ ಮುಂದುವರಿಸಿಕೊಂಡು ಹೋಗಲಾಗು ತ್ತಿತ್ತು. ಹೊಸದಾಗಿ ಬಂದ ಮೆಡಿಕಲ್ ಕಾಲೇಜಿನ ಡೀನ್ ಹಾಗೂ ನಿರ್ದೇಶಕ ಡಾ.ರಾಜೇಂದ್ರ ಅವರು ಹೊಸದಾಗಿ ನರ್ಸ್ ಗಳ ಆಯ್ಕೆಗಾಗಿ ಅರ್ಜಿ ಆಹ್ವಾನಿಸಿದ್ದಾರೆ. ಇದರಿಂದ ನಮಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.

ಜಿಲ್ಲಾ ಉಸ್ತುವಾರಿ ಸಚಿವರು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ನಮ್ಮನ್ನೇ ಮುಂದುವರೆಸುವಂತೆ ಡೀನ್ ಅವರಿಗೆ ನಿರ್ದೇಶಿಸಿದ್ದಾರೆ. ಆದರೂ ಸಹ ಅವರು ಅರ್ಜಿ ಆಹ್ವಾನಿಸಿದ್ದಾರೆ. ಹೀಗಾಗಿ ನಮಗೆ ಹುದ್ದೆ ಕಳೆದುಕೊಳ್ಳುವ ಭಯ ಸೃಷ್ಟಿ ಯಾಗಿದೆ ಎಂದರು. ನಮ್ಮ ಸೇವೆಯನ್ನು ಇನ್ನೂ 11 ತಿಂಗಳು ಮುಂದುವರೆಸಬೇಕು. ಈ ಮೂಲಕ ನಮಗೆ ನ್ಯಾಯ ದೊರ ಕಿಸಬೇಕು. ಇಲ್ಲದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ನರ್ಸ್‍ಗ ಳಾದ ಎನ್.ಕುಮಾರ್, ಮಹೇಶ್, ಚುಂಚ ನಗಿರಿ, ರಾಜೇಶ್, ಬಂಗಾರಸ್ವಾಮಿ, ವಸಂತಮ್ಮ, ಗೀತಾ, ಶೃತಿ, ಮಹದೇವಮ್ಮ, ಚಂದ್ರಕಲಾ ಇತರರು ಭಾಗವಹಿಸಿದ್ದರು. ನರ್ಸ್‍ಗಳು ದಿಢೀರ್ ಆಗಿ ಕರ್ತವ್ಯ ಬಹಿಷ್ಕರಿಸಿ ಧರಣಿ ನಡೆಸಿದ್ದರಿಂದ ರೋಗಿ ಗಳು ಹಾಗೂ ವೈದ್ಯರು ಪರ ದಾಡುವಂತಾಯಿತು.

Translate »