ಮುಕ್ತ ವಿವಿಯಲ್ಲಿ 11 ಹೊಸ ಕೋರ್ಸ್ ಆರಂಭಕ್ಕೆ ಯುಜಿಸಿ ಅನುಮತಿ
ಮೈಸೂರು

ಮುಕ್ತ ವಿವಿಯಲ್ಲಿ 11 ಹೊಸ ಕೋರ್ಸ್ ಆರಂಭಕ್ಕೆ ಯುಜಿಸಿ ಅನುಮತಿ

July 14, 2021

ಮೈಸೂರು,ಜು.13(ಎಂಟಿವೈ)- `ಬೆಳ್ಳಿಹಬ್ಬ’ ಸಂಭ್ರಮದಲ್ಲಿರುವ `ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ’(ಕರಾಮುವಿ) ರಾಜ್ಯದ ಏಕೈಕ ಮುಕ್ತ ಹಾಗೂ ದೂರ ಶಿಕ್ಷಣ ನೀಡುವ ವಿವಿ ಎಂಬ ಕೀರ್ತಿಗೆ ಪಾತ್ರವಾಗಿದೆ. ಪ್ರಸಕ್ತ ಶೈP್ಷÀಣಿಕ ಸಾಲಿನಿಂದ 11 ಹೊಸ ಕೋರ್ಸ್ ಗಳನ್ನು ಪ್ರಾರಂಭಿಸಲು ಯುಜಿಸಿ ಅನು ಮೋದನೆ ನೀಡಿದೆ ಎಂದು ಕುಲಪತಿ ಪೆÇ್ರ. ಎಸ್.ವಿದ್ಯಾಶಂಕರ್ ತಿಳಿಸಿದ್ದಾರೆ.

ಕರಾಮುವಿ ಸಭಾಂಗಣದಲ್ಲಿ ಮಂಗಳ ವಾರ ಸುದ್ದಿಗೋಷ್ಠಿ ನಡೆಸಿದ ಅವರು, 1996 ರಲ್ಲಿ ಚಿಕ್ಕ ಕಟ್ಟಡದಲ್ಲಿ ಆರಂಭವಾದ ಕರಾ ಮುವಿ ಈಗ 25 ವಸಂತಗಳನ್ನು ಪೂರ್ಣ ಗೊಳಿಸಿದೆ. ಈಗ ಹಲವು ಸ್ವಂತ ಕಟ್ಟಡ ಹೊಂದಿದೆ. 9 ಅಧ್ಯಯನ ಪೀಠಗಳನ್ನು ಒಳಗೊಂಡಿದೆ, ಲಕ್ಷಾಂತರ ವಿದ್ಯಾರ್ಥಿ ಗಳಿಗೆ ದೂರಶಿಕ್ಷಣ ಮೂಲಕ ಶೈಕ್ಷಣಿಕ ನೆಲೆ ಕಂಡುಕೊಳ್ಳಲು ನೆರವಾಗಿದೆ ಎಂದು ಪ್ರೊ.ವಿದ್ಯಾಶಂಕರ್ ವಿವರಿಸಿದರು.

ರಾಜ್ಯ ಸರ್ಕಾರ ಗೆಜೆಟ್ ನೋಟಿಫಿ ಕೇಷನ್ ಹೊರಡಿಸಿ `ಮುಕ್ತ ಹಾಗೂ ದೂರ ಶಿಕ್ಷಣ ನೀಡುವ ರಾಜ್ಯದ ಏಕಮಾತ್ರ ವಿಶ್ವ ವಿದ್ಯಾನಿಲಯ’ ಎಂದು ಕರಾಮುವಿಗೆ ಮನ್ನಣೆ ನೀಡಿ `ಬೆಳ್ಳಿಹಬ್ಬ’ದ ಉಡುಗೊರೆ ಕೊಟ್ಟಿದೆ. ಇಂಥ ಸಂದರ್ಭ ವಿದ್ಯಾರ್ಥಿಗಳಿಗೆ ಸಹಕಾರಿ ಯಾದ ಹಲವು ಯೋಜನೆಗಳನ್ನು ವಿವಿ ಜಾರಿಗೊಳಿಸಿದೆ. ಬೆಳ್ಳಿಹಬ್ಬ ಸಂಭ್ರಮ ಪ್ರಯುಕ್ತ ಕ್ರಿಯಾಯೋಜನೆ, ಉನ್ನತ ಮಟ್ಟದ ಸಮಿತಿ ರಚನೆ, ಹೊಸ ಕಾರ್ಯಕ್ರಮಗಳ ಪರಿ ಚಯ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಕ್ಕೆ ಪೂರಕವಾದ ಎಲ್ಲ ಶೈಕ್ಷಣಿಕ ಸೌಲಭ್ಯಗಳನ್ನು ಒಳಗೊಂಡಿರುವ 24×7 ಕಾರ್ಯನಿರ್ವಹಿಸುವ ಗ್ರಂಥಾಲಯ, ವಸತಿ ಸೌಲಭ್ಯವುಳ್ಳ ಕಟ್ಟಡ ನಿರ್ಮಾಣ ಮಾಡಲಾಗುವುದೆಂದು ತಿಳಿಸಿದರು.

ಹೊಸ ಕೋರ್ಸ್: ಪ್ರಸಕ್ತ ಸಾಲಿನಿಂದ 11 ಕೋರ್ಸ್ ಆರಂಭಿಸಲು ಯುಜಿಸಿ ಅನು ಮತಿ ನೀಡಿದೆ. ಎಂಎಸ್‍ಸಿ(ಸಸ್ಯಶಾಸ್ತ್ರ), ಎಂಎಸ್‍ಸಿ(ಪ್ರಾಣಿಶಾಸ್ತ್ರ), ಎಂಎಸ್‍ಸಿ (ಫುಡ್ ಆ್ಯಂಡ್ ನ್ಯೂಟ್ರಿಷನ್), ಎಂಎಸ್‍ಸಿ (ಇನ್ಫರ್ಮೇಷನ್ ಟೆಕ್ನಾಲಜಿ), ಬಿಎಸ್‍ಸಿ (ಜನರಲï), ಬಿಎಸ್‍ಸಿ(ಇನ್ಫರ್ಮೆಷನ್ ಟೆಕ್ನಾಲಜಿ), ಬಿಎಸ್‍ಸಿ(ಹೋಂಸೈನ್ಸ್), ಬಿಬಿಎ, ಬಿಸಿಎ, ಎಂಎ (ಶಿP್ಷÀಣ), ಎಂಎ (ತೆಲುಗು) ಓಪನ್ ಆ್ಯಂಡ್ ಡಿಸ್ಟೆನ್ಸ್ ಲರ್ನಿಂಗ್ (ಒಡಿಪಿ) ಕೋರ್ಸ್‍ಗಳ ಆರಂಭಕ್ಕೆ ಯುಜಿಸಿ ತಜ್ಞರ ಸಮಿತಿ ಅನುಮೋದನೆ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಹೊಸ ಕೋರ್ಸ್ ಆರಂಭ ಸಂಬಂಧ ಯುಜಿಸಿ ತಜ್ಞರ ಸಮಿತಿ ಜತೆ 6 ಬಾರಿ ಆನ್‍ಲೈನ್ ಸಭೆ ನಡೆಸಲಾಗಿದ್ದು, ನಮ್ಮ ಕೋರಿಕೆಯಂತೆ 11 ಕೋರ್ಸ್ ಆರಂಭಿಸಲು ಸಮಿತಿ ಅನುಮೋದನೆ ನೀಡಿದೆ. ಈಗ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಅಲ್ಲದೇ, ಬಹುಬೇಡಿಕೆಯ ಎಂಎಸ್‍ಡಬ್ಲ್ಯು, ಬಿಎಸ್‍ಡಬ್ಲ್ಯು ಸೇರಿದಂತೆ ಮತ್ತೆ 4 ಕೋರ್ಸ್ ಗಳಿಗೆ ಅನುಮತಿ ಕೋರಿ ಯುಜಿಸಿಗೆ ಅರ್ಜಿ ಸಲ್ಲಿಸಲಾಗಿದೆ. ಆನ್‍ಲೈನ್ ಕೋರ್ಸ್‍ಗೆ ಯುಜಿಸಿ ಅನುಮತಿ ಕೋರಿ ಪಿಪಿಆರ್ ಸಲ್ಲಿಸಲಾಗಿದ್ದು, ಅನುಮೋದನೆಯ ನಿರೀಕ್ಷೆ ಯಲ್ಲಿz್ದÉೀವೆ ಎಂದರು.

ಆನ್‍ಲೈನ್-ಪ್ರಯೋಗ: ಕೇಂದ್ರ ಮಾನವ ಸಂಪನ್ಮೂಲ ಮಂತ್ರಾಲಯದ ಪ್ರತಿಷ್ಠಿತ ಯೋಜನೆಯಾದ ನ್ಯಾಷನಲ್ ಮಿಷನ್ ಆನ್ ಎಜುಕೇಷನ್ ಥ್ರೂ ಇನ್ಫಾರ್ಮೆಷನ್ ಕಮ್ಯೂನಿಕೇಷನ್ ಟೆಕ್ನಾಲಜಿ (ಎನ್‍ಎಂ ಇಐಸಿಟಿ) ಅನ್ನು ಎನ್‍ಐಟಿಕೆ ಮಾರ್ಗದರ್ಶನ ದಲ್ಲಿ ಮುಕ್ತ ವಿವಿಯಲ್ಲಿ ಸ್ಥಾಪಿಸಲಾಗಿದೆ. ವಿವಿಧ ವಿಜ್ಞಾನ ಕಾರ್ಯಕ್ರಮಗಳ ವರ್ಚು ಯಲ್ ಪ್ರಯೋಗಾಲಯವನ್ನು ಯಶಸ್ವಿ ಯಾಗಿ ನಡೆಸಿದ ಕೀರ್ತಿ ಕರಾಮುವಿಗೆ ದೊರೆಯಲಿದೆ ಎಂದರು.

ವಿದ್ಯಾರ್ಥಿ ಹೆಚ್ಚಳ: ಕರಾಮುವಿಗೆ ದಾಖ ಲಾಗುವ ವಿದ್ಯಾರ್ಥಿ ಸಂಖ್ಯೆ ಹೆಚ್ಚಾಗಿದೆ. ಪ್ರಸಕ್ತ ಸಾಲಿನಲ್ಲಿ 40 ಸಾವಿರ ವಿದ್ಯಾರ್ಥಿ ಗಳು ದಾಖಲಾಗುವ ನಿರೀಕ್ಷೆಯಿದೆ. ಈವ ರೆಗೆ 22 ಸಾವಿರ ವಿದ್ಯಾರ್ಥಿಗಳು ದಾಖ ಲಾಗಿz್ದÁರೆ. ಕಳೆದ ಸಾಲಿನಲ್ಲಿ 11 ಸಾವಿರ ವಿದ್ಯಾರ್ಥಿಗಳು ದಾಖಲಾಗಿದ್ದರು. ಕೋವಿಡ್ ಪರಿಣಾಮ ಕಳೆದ ಬಾರಿ ವಿವಿಯಲ್ಲಿ ಪ್ರಥಮ ಬಾರಿಗೆ ತೆರೆದ ಪುಸ್ತಕ ಪರೀಕ್ಷೆ ನಡೆಸಲಾಯಿತು. ಈ ಬಾರಿ ಅಂತ ಪರೀಕ್ಷೆ ನಡೆಸಲ್ಲ ಎಂದು ವಿವರಿಸಿದರು.

ಶಾಲೆ ದತ್ತು: ಕರಾಮುವಿಯಿಂದ ಕೆಲ ಸರ್ಕಾರಿ ಶಾಲೆ ದತ್ತು ಪಡೆಯಲು ಉದ್ದೇ ಶಿಸಲಾಗಿದೆ. ಪ್ರತಿ ಶಾಲೆಗೆ 50ರಿಂದ 70 ಲಕ್ಷ ರೂ. ವಿನಿಯೋಗಿಸಿ ಅಭಿವೃದ್ಧಿಪಡಿಸ ಲಾಗುವುದು. ಕಟ್ಟಡ, ಪೀಠೋಪಕರಣ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ವಿವಿಯಿಂದಲೇ ಕೊಡಲಾಗುತ್ತದೆ. ಶಾಲಾ ಭಿವೃದ್ಧಿಗಾಗಿ ಒಟ್ಟು 10 ಕೋಟಿ ರೂ. ಬಳಸಲು ಉz್ದÉೀಶಿಸಲಾಗಿದೆ. ಆದರೆ, ಯಾವುದೇ ಶಾಲೆಗೂ ನಗದು ನೀಡುವುದಿಲ್ಲ ಎಂದರು.
ವಿವಿಯಲ್ಲಿ ದೃಶ್ಯ-ಶ್ರ್ರಾವ್ಯ ಸ್ಟುಡಿಯೋ ಕಾರ್ಯಾರಂಭ ಮಾಡಿದೆ. ಪ್ರತ್ಯೇಕವಾಗಿ ಆಡಿಯೋ ಮುಖಾಂತರ ಈಗಾಗಲೇ ಅಧ್ಯಾಪಕರು ಪಾಠ, ಬೋಧನೆ ಮಾಡು ತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅನುಕೂಲವಾಗು ವಂತೆ ವಿಡಿಯೋ ಸ್ಟುಡಿಯೋವನ್ನು ಹೆಚ್ಚು ಪರಿಣಾಮಕಾರಿಯಾಗಿ ನವೀಕರಿಸಲಾಗಿದೆ. ಅದನ್ನು ಸದ್ಯದಲ್ಲೇ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಉದ್ಘಾ ಟಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿ ಯಲ್ಲಿ ಮುಕ್ತ ವಿವಿ ಕುಲಸಚಿವ ಪೆÇ್ರ. ಆರ್. ರಾಜಣ್ಣ, ಪರೀಕ್ಷಾಂಗ ಕುಲಸಚಿವ ಮಹದೇವನ್, ಹಣಕಾಸು ಅಧಿಕಾರಿ ಎ.ಖಾದರ್‍ಪಾಶ ಇನ್ನಿತರರು ಇದ್ದರು.

Translate »