ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ  ಮೈಸೂರು ಅಭಿವೃದ್ಧಿಗೆ 150 ಕೋಟಿ ಮಂಜೂರು
ಮೈಸೂರು

ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಮೈಸೂರು ಅಭಿವೃದ್ಧಿಗೆ 150 ಕೋಟಿ ಮಂಜೂರು

September 23, 2022

ಮೈಸೂರು,ಸೆ.22(ಎಂಟಿವೈ)-ಸಾಂಸ್ಕøತಿಕ ಹಾಗೂ ಪಾರಂ ಪರಿಕ ನಗರವೂ ಆಗಿರುವ ಮೈಸೂರಿನ ಪ್ರತಿಷ್ಠೆಗೆ ಧಕ್ಕೆಯಾಗ ದಂತೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮೈಸೂರು ಮಹಾನಗರ ಪಾಲಿಕೆಗೆ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ 150 ಕೋಟಿ ರೂ. ಮಂಜೂರು ಮಾಡಿರುವುದಾಗಿ ನಗರಾ ಭಿವೃದ್ಧಿ ಸಚಿವ ಭೈರತಿ ಬಸವರಾಜು ಇಂದಿಲ್ಲಿ ತಿಳಿಸಿದ್ದಾರೆ.

ಮೈಸೂರಿನ ವಿದ್ಯಾರಣ್ಯಪುರಂನ ರಾಮಲಿಂಗೇಶ್ವರ ಪಾರ್ಕ್ ನಲ್ಲಿ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ನಡೆಯುತ್ತಿರುವ ಮೋದಿ ಯುಗ ಉತ್ಸವ ಕಾರ್ಯಕ್ರಮದಲ್ಲಿ ಗುರುವಾರ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಮಾತನಾ ಡಿದ ಅವರು, ಮೈಸೂರು ನಗರಕ್ಕೆ ತನ್ನದೇ ಆದ ಪರಂಪರೆ ಇದೆ. ಸಾಂಸ್ಕøತಿಕ ಹಾಗೂ ಅರಮನೆಗಳ ನಗರಿಯೂ ಆಗಿದೆ. ತನ್ನದೇ ಇತಿಹಾಸ ಹೊಂದಿರುವ ಮೈಸೂರು ನಗರದ ಮಹತ್ವಕ್ಕೆ ಧಕ್ಕೆ ಆಗದಂತೆ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳ ಲಾಗಿದೆ. ಈಗಾಗಲೇ ಮೈಸೂರು ಮಹಾನಗರ ಪಾಲಿಕೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮಹಾತ್ಮಗಾಂಧೀಜಿ ನಗರ ವಿಕಾಸ ಯೋಜನೆಯಡಿ 150 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅದರಲ್ಲಿ, ಕೃಷ್ಣರಾಜ ಕ್ಷೇತ್ರಕ್ಕೆ 25 ಕೋಟಿ ರೂ. ನೀಡಿದ್ದೇವೆ. ಎಸ್‍ಹೆಚ್‍ಪಿ ಯೋಜನೆಯಡಿ 50 ಕೋಟಿ ಬಿಡುಗಡೆ ಮಾಡಲಾಗಿದೆ. ಮಳೆ ನೀರಿನಿಂದಾಗುವ ಅನಾ ಹುತ ತಡೆಗೆ 46 ಕೋಟಿ ರೂ. ನೀಡಿದ್ದೇವೆ. ಸಿಎಂ ಮನ ವೊಲಿಸಿ ಲೋಕೋಪಯೋಗಿ ಇಲಾಖೆ ವತಿಯಿಂದ 50 ಕೋಟಿ ರೂ. ಮಂಜೂರು ಮಾಡಲಾಗಿದ್ದು, ಆ ಅನು ದಾನದಿಂದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ದೊರೆತಿದೆ. ಮುಡಾದಿಂದ ಒಟಿಎಂ ನಿರ್ಮಾಣಕ್ಕೆ 20 ಕೋಟಿ ರೂ. ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಕ್ಕೆ 35 ಕೋಟಿ ರೂ ನೀಡಿದ್ದೇವೆ ಎಂದು ವಿವರಿಸಿದರು.

ಮೈಸೂರಲ್ಲಿ ಹೊಸ ಬೆಳಕು: ಮೈಸೂರು ನಗರಕ್ಕೆ ಹೊಸ ಬೆಳಕು ನೀಡುವ ನಿಟ್ಟಿನಲ್ಲಿ ಮೈಸೂರಿನ ವಿವಿಧ ರಸ್ತೆಗಳ ವಿದ್ಯುತ್ ಕಂಬಗಳಿಗೆ ಇದುವರೆಗೂ 69 ಸಾವಿರಕ್ಕೂ ಹೆಚ್ಚು ಪ್ರಜ್ವಲಿಸುವ ಎಲ್‍ಇಡಿ ಬಲ್ಬ್ ಅಳವಡಿಸಲಾಗಿದ್ದು, ಉಳಿದ ಕಂಬಗಳಿಗೂ ತ್ವರಿತಗತಿಯಲ್ಲಿ ಎಲ್‍ಇಡಿ ಬಲ್ಬ್ ಅಳವಡಿಕೆಗೆ ಸೂಚನೆ ನೀಡಲಾಗಿದೆ. ಕಳೆದ ಕೆಲವು ವರ್ಷಗಳಿಂದ ಮೈಸೂ ರಿನ ರಿಂಗ್ ರಸ್ತೆಯಲ್ಲಿ ಬೀದಿದೀಪಗಳಿಲ್ಲದೆ ಕತ್ತಲೆ ಆವರಿಸಿತ್ತು. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಬಂದಾಗ ರಿಂಗ್ ರಸ್ತೆ ಕತ್ತಲೆ ಆವರಿಸಿದ್ದನ್ನು ಗಮನಿಸಿ, ಅಂದು ಮುಡಾ ಆಯುಕ್ತರಾಗಿದ್ದವರಿಗೆ ಶೀಘ್ರವಾಗಿ ದೀಪ ಅಳವಡಿಸುವಂತೆ ಸೂಚನೆ ನೀಡಿದ್ದೆ. ಪ್ರಸ್ತುತ ರಿಂಗ್ ರಸ್ತೆಯಲ್ಲಿ ವಿದ್ಯುತ್ ಬೀದಿದೀಪ ಅಳವಡಿಕೆ ಕಾರ್ಯ ನಡೆಯುತ್ತಿದೆ. ನಾನು ನಗರಾಭಿವೃದ್ಧಿ ಸಚಿವನಾಗಿ ಬಂದ ಮೇಲೆ ರಿಂಗ್ ರಸ್ತೆಯ ಕತ್ತಲು ನಿವಾರಿಸಲು ಕ್ರಮ ಕೈಗೊಂಡಿದ್ದೇನೆ ಎಂದರು.

ಸಮರ್ಪಕ ಕುಡಿಯುವ ನೀರು: ಮೈಸೂರು ನಗರಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡು ವುದಕ್ಕಾಗಿ 531 ಕೋಟಿ ರೂ. ವೆಚ್ಚದಲ್ಲಿ ಉಂಡುವಾಡಿ ಯೋಜನೆಯನ್ನು ಕೈಗೆತ್ತಿಕೊಂಡು, ತ್ವರಿತಗತಿಯಲ್ಲಿ ಕಾಮ ಗಾರಿ ಅನುಷ್ಠಾನಗೊಳಿಸಲಾಗಿದೆ. ಕಬಿನಿಯಿಂದ ಹೆಚ್ಚುವರಿ ನೀರು ಪೂರೈಕೆ ಮಾಡಲು 150 ಕೋಟಿ ರೂ. ಪ್ರಸ್ತಾವನೆ ಯನ್ನು ಇಲಾಖೆ ಮುಂದೆ ಇಡಲಾಗಿದ್ದು, ಅದನ್ನೂ ಮಂಜೂರು ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.

ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನೆಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸುತ್ತಿದ್ದು ಸಂತೋಷದ ಸಂಗತಿ. ರಾಷ್ಟ್ರಪತಿಗಳ ಆಗಮನದ ಹಿನ್ನೆಲೆಯಲ್ಲಿ ಮೈಸೂರು ನಗರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ನಾಡದೇವಿ ಉತ್ಸವ ದಸರಾ ಮಹೋತ್ಸವ ಯಶಸ್ವಿಯಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳ ಲಾಗಿದೆ. ಈಗಾಗಲೇ ಚಾಮುಂಡೇಶ್ವರಿಯ ಕೃಪಾಕಟಾಕ್ಷ ದಿಂದ ನಾಡಿನಾದ್ಯಂತ ಸಮೃದ್ಧಿಯಾಗಿ ಮಳೆ ಬಂದಿದೆ ಎಂದರು.

ವಿಭಿನ್ನ ಕಾರ್ಯಕ್ರಮ: ರಾಜ್ಯದ 224 ಕ್ಷೇತ್ರಗಳಿಗೆ ಹೋಲಿ ಸಿದರೆ, ಮೈಸೂರಿನ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮ ದಾಸ್ ವಿಭಿನ್ನ ಹಾಗೂ ವಿಶಿಷ್ಟವಾದ ಕಾರ್ಯಕ್ರಮ ಆಯೋ ಜಿಸಿದ್ದಾರೆ. ಪ್ರಧಾನಿ ಮೋದಿ ಅವರ ಸಂಕಲ್ಪದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಸರ್ಕಾರದ ಯೋಜನೆ ತಲುಪಬೇ ಕೆಂಬ ಆಶಯ ಈಡೇರಿಸುವುದಕ್ಕಾಗಿ ಮೋದಿ ಯುಗ ಉತ್ಸವ ಕಾರ್ಯಕ್ರಮ ಆಯೋಜಿಸಿದ್ದಾರೆ. ನಾನು ನನ್ನ ಕ್ಷೇತ್ರದಲ್ಲೂ ಇಂತಹ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗಿಲ್ಲ. ಕ್ಷೇತ್ರದ ರಸ್ತೆ ಬದಿ ವ್ಯಾಪಾರಿಗಳಿಗೆ ಐಡಿ ಕಾರ್ಡ್ ವಿತರಣೆ, ಹೊಲಿಗೆ ಯಂತ್ರ ವಿತರಿಸುವ ಮೂಲಕ ಸೇವಾಕಾರ್ಯ ಮಾಡುತ್ತಿರು ವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಪ್ರತಿಮ ನಾಯಕ: ಪ್ರಧಾನಿ ಮೋದಿ ರಾಷ್ಟ್ರ ಕಂಡ ಅಪ್ರತಿಮ ನಾಯಕ. ಅವರ ಪಕ್ಷದಲ್ಲಿ ನಾನು ಸೇರಿ ಕೆಲಸ ಮಾಡುವುದಕ್ಕೆ ನನಗೆ ಹೆಮ್ಮೆಯಾಗಿದೆ. ಶಾಸಕ ರಾಮದಾಸ್ ಅವರು ಹಿಂದಿನಿಂದಲೂ ಮೋದಿಯವರೊಂದಿಗೆ ಇದ್ದಾರೆ. ನಾನು ಬಿಜೆಪಿ ಸೇರಿದ ಕೆಲವೇ ವರ್ಷಗಳಲ್ಲಿ ಅವರೊಟ್ಟಿಗೆ ವೇದಿಕೆ ಹಂಚಿಕೊಂಡಿರುವುದು ಸಂತಸ ಉಂಟು ಮಾಡಿದೆ. ಅವರ ಆದರ್ಶ ನಮಗೆ ಸ್ಫೂರ್ತಿದಾಯಕವಾಗಿದೆ. ವಿದೇಶಿ ಗರಿಗೂ ಮಾದರಿಯಾಗುವ ಕೆಲಸ ಮಾಡುತ್ತಿದ್ದಾರೆ. ಅವರ ಹುಟ್ಟುಹಬ್ಬದ ಅಂಗವಾಗಿ ಅನೇಕ ಅಭಿವೃದ್ಧಿ ಯೋಜನೆ ಕೈಗೊಳ್ಳುವುದರ ಜೊತೆಗೆ ಬಡವರು, ಕೂಲಿ ಕಾರ್ಮಿಕರಿಗೆ ಸೌಲಭ್ಯ ನೀಡುತ್ತಿರುವುದು ಶ್ಲಾಘನೀಯ ಎಂದರು.

ಮೋದಿ ಎಂದರೆ ಅಭಿವೃದ್ಧಿ: ಇದಕ್ಕೂ ಮುನ್ನ ಶಾಸಕ ಎಸ್.ಎ.ರಾಮದಾಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಮೋದಿ ಯವರ ಇಚ್ಛೆಯಂತೆ ದೇಶದ ಸರ್ವತೋಮುಖ ಅಭಿವೃದ್ಧಿಯ ಚಿಂತನೆಯನ್ನು ಇಟ್ಟುಕೊಂಡು ದಿನಕ್ಕೊಂದು ಅಭಿವೃದ್ಧಿ ಕಾರ್ಯಕ್ರಮ ನಡೆಸಲಾಗುತ್ತಿದೆÉ. ಮೋದಿ ಎಂದರೆ ಅಭಿವೃದ್ಧಿ ಎಂಬುದು ನಮ್ಮ ಅರ್ಥವಾಗಿದೆ. ಇದಕ್ಕೆ ಇಂದು ನಗರಾ ಭಿವೃದ್ಧಿ ಸಚಿವರ ಮೂಲಕ ವಿವಿಧ ಅಭಿವೃದ್ಧಿ ಕಾಮಗಾರಿ ಗಳಿಗೆ ಚಾಲನೆ ನೀಡಲಾಗಿದೆ. ‘ಕಿಚನ್ ಗಾರ್ಡನ್’ ಬೆಳೆಸಲು ಒಂದು ಸಾವಿರ ಮನೆಗಳನ್ನು ಗುರುತಿಸಿ ಆ ಮೂಲಕ ಆದಾಯ ಗಳಿಸುವ ನೂತನ ಕಾರ್ಯಕ್ರಮ ಆರಂಭಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಸೆ ಕಟ್ಟಕಡೆಯ ವ್ಯಕ್ತಿ, ಕಸಗುಡಿಸುವವರಿಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೌಲಭ್ಯ, ಯೋಜನೆ ತಲುಪಿಸಲು ಕ್ರಮ ಕೈಗೊಳ್ಳ ಲಾಗಿದೆ ಎಂದರು. ಮಹಾನಗರಪಾಲಿಕೆಯಿಂದ ವಿಶೇಷವಾಗಿ ‘ಯೋಗಲಕ್ಷ್ಮಿ ಬಾಂಡ್’ ಹೆಣ್ಣು ಮಕ್ಕಳಿಗೆ ನೀಡುವ ಆರೋ ಗ್ಯದ ಬಾಂಡ್(97 ಸಾವಿರ ರೂ.ಗಳ ಆರೋಗ್ಯ ಬಾಂಡ್) ಅನ್ನು ಧನ್ಯಶ್ರೀ, ಲಿಖಿತ, ತನುಶ್ರೀ, ಪುಣ್ಯಶ್ರೀ, ಶೋಭಿತರಿಗೆ ನೀಡಲಾಯಿತು. ಬೀದಿ ವ್ಯಾಪಾರಿಗಳ ವ್ಯಾಪಾರ ಪತ್ರವನ್ನು ಮಹದೇವಯ್ಯ, ಸಿದ್ದರಾಜು, ಮಹೇಂದ್ರ, ನಂದೀಶ್ ನಾಯಕ್, ವೆಂಕೋಬರಾವ್, ಮಹದೇವಸ್ವಾಮಿಯವರಿಗೆ ನೀಡಲಾ ಯಿತು. ಸ್ವಯಂ ಉದ್ಯೋಗದ ಸಾಲ ಸೌಲಭ್ಯದ ಮಂಜೂ ರಾತಿ ಪತ್ರವನ್ನು ಪ್ರದೀಪ, ವಿಕಲಚೇತನರಾದ ವೆಂಕಟೇಶ್ ಅವರಿಗೆ ನೀಡಲಾಯಿತು. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಉಚಿತ ಲ್ಯಾಪ್‍ಟಾಪ್ ಖರೀದಿಗೆ ಅನುದಾನವನ್ನು ಹೇಮಲತ, ಮಧು ಸೂದನ್, ವೈಷ್ಣವಿ ಅವರಿಗೆ ನೀಡಲಾಯಿತು. ವ್ಯಾಸಂಗ ಪೆÇ್ರೀತ್ಸಾಹ ಧನ ನಿಖಿತ, ಸ್ಫೂರ್ತಿ ಅವರಿಗೆ ನೀಡಲಾಯಿತು. ಕಿಚನ್ ಗಾರ್ಡನ್ ಯೋಜನೆಯಲ್ಲಿ ನಾಗರತ್ನ, ಜಯಂತಿ, ಸುವರ್ಣ, ಚಂದ್ರು ಅವರಿಗೆ ಔಷಧಿಗಿಡಗಳನ್ನು ನೀಡಲಾಯಿತು.

ಶ್ವಾನಗಳ ಚಿಕಿತ್ಸೆ ಮತ್ತು ಪುನರ್ವಸತಿ ಕೇಂದ್ರ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 61.55 ಕೋಟಿ ರೂ ವೆಚ್ಚದಲ್ಲಿ 28 ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಮೈಸೂರಲ್ಲಿ ಕೋವಿಡ್ ಸಂದರ್ಭದÀಲ್ಲಿ ಸಂಘ- ಸಂಸ್ಥೆಗಳೊಂದಿಗೆ ಮಂಗ ಗಳಿಗೆ ನೆರವು ನೀಡಲಾಗಿತ್ತು. ಹೀಗಾಗಿ ಕಂದಾಯ ಇಲಾಖೆ ಯಿಂದ ಪುನರ್ ವಸತಿ ಕೇಂದ್ರಕ್ಕೆ 4 ಎಕರೆ ಜಾಗವನ್ನು ಪಾಲಿಕೆಗೆ ಹಸ್ತಾಂತರಿಸಲಾಗಿದೆ. ಅದರಲ್ಲಿ ಪಾಲಿಕೆಯಿಂದ 2 ಕೋಟಿ ರೂ. ವೆಚ್ಚದಲ್ಲಿ ಮೂರು ಎಕರೆ ಜಾಗದಲ್ಲಿ ಶ್ವಾನಗಳ ಚಿಕಿತ್ಸಾ ಮತ್ತು ಪುನರ್ವಸತಿ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದರು.

ಇದೇ ವೇಳೆ ಸ್ವಯಂ ಉದ್ಯೋಗ ಯೋಜನೆಯಡಿ ಹೊಲಿಗೆ ಯಂತ್ರ ಯೋಜನೆಯಡಿಯಲ್ಲಿ ರುಕ್ಮಿಣಿ, ಶಿಲ್ಪ, ಅನಿತಾ, ರೂಪ, ಶೋಭಾ, ಊಮಾ, ಸುಮಲತಾ, ಮೀನಾಕ್ಷಿ ಅವರಿಗೆ ನೀಡ ಲಾಯಿತು. ಪೌರಕಾರ್ಮಿಕರಿಗೆ ಸ್ವಚ್ಛತಾ ಪರಿಕರಗಳ ಕಿಟ್ ಅನ್ನು ಹೆಂಗಮ್ಮ, ಚಿನ್ನಕ್ಕ, ಸಾವಿತ್ರಿ, ರಂಗಮ್ಮ, ರವೀಂದ್ರ, ಹಲಮೇಲಮ್ಮ, ನಾಗರಾಜು, ನಾಗೇಂದ್ರ ಅವರಿಗೆ ವಿತರಿಸಲಾಯಿತು. ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್, ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತರೆಡ್ಡಿ, ಮುಡಾ ಆಯುಕ್ತ ಜಿ.ಟಿ.ದಿನೇಶ್ ಕುಮಾರ್, ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ವಡಿವೇಲು, ಪಾಲಿಕೆ ಸದಸ್ಯರಾದ ಮಾ.ವಿ.ರಾಮಪ್ರಸಾದ್, ಬಿ.ವಿ.ಮಂಜು ನಾಥ್, ಪಿ.ಟಿ.ಕೃಷ್ಣ, ಕ್ಷೇತ್ರದ ಪ್ರಧಾನ ಕಾರ್ಯ ದರ್ಶಿಗಳಾದ ಓಂ.ಶ್ರೀನಿವಾಸ್, ನಾಗೇಂದ್ರ, ತೋಟಗಾರಿಕೆ ಇಲಾಖೆ ಉಪನಿರ್ದೇ ಶಕ ರುದ್ರೇಶ, ಚಂಪಕಾ, ಸೌಮ್ಯ ಈಶ್ವರ, ಶಾರದಮ್ಮ ಈಶ್ವರ್, ಮುಡಾ ಸದಸ್ಯ ಲಿಂಗಣ್ಣ ಇನ್ನಿತರರು ಉಪಸ್ಥಿತರಿದ್ದರು.

Translate »