ನಾಲ್ಕು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ  ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಣೆ
ಹಾಸನ

ನಾಲ್ಕು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಣೆ

December 2, 2018

ಹಾಸನ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಹಡಗು ಮತ್ತು ಜಲ ಸಂಪ ನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನ ಶ್ಚೇತನ ಖಾತೆ ಸಚಿವ ಶ್ರೀ ನಿತಿನ್ ಗಡ್ಕರಿ ಅವರಿಂದು ಕರ್ನಾಟಕದ ಹಾಸನ ಜಿಲ್ಲೆಯ ಹೊಸ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ದಲ್ಲಿ 1865 ಕೋಟಿ ರೂಪಾಯಿ ವೆಚ್ಚದ ನಾಲ್ಕು ರಾಷ್ಟ್ರೀಯ ಹೆದ್ದಾರಿ ಯೋಜನೆ ಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಈ ಯೋಜನೆಗಳಲ್ಲಿ ರಾ.ಹೆ-234ರಲ್ಲಿ 191.6 ಕೋಟಿ ರೂಪಾಯಿ ವೆಚ್ಚದಲ್ಲಿ ಬಾಣಾವರದಿಂದ ಹುಲಿಯಾರುವರೆಗೆ (48.2 ಕಿ.ಮೀ) ಮತ್ತು ರಾ.ಹೆ. -373ರಲ್ಲಿ 849.39 ಕೋಟಿ ರೂಪಾಯಿ ವೆಚ್ಚದಲ್ಲಿ ಬೇಲೂರಿನಿಂದ ಬೇಲಿಕೆರೆವರೆಗೆ (128.35 ಕಿ.ಮೀ) ಸುಸಜ್ಜಿತ ನಿಲುಗಡೆ ತಾಣ (ಪೇವ್ಡ್ ಶೋಲ್ಡರ್ಸ್) ಸೇರಿದಂತೆ ದ್ವಿಪಥವಾಗಿ ಅಗಲೀಕರಿಸುವುದೂ ಸೇರಿದೆ. ಜತೆಗೆ ರಾ.ಹೆ 75ರಲ್ಲಿ ರೂ. 823.4 ಕೋಟಿ ವೆಚ್ಚದಲ್ಲಿ ಚನ್ನರಾಯಪಟ್ಟಣ ಮತ್ತು ಹಾಸನ ಬೈಪಾಸ್ ಅನ್ನು ದ್ವಿಪಥದಿಂದ ಚತುಷ್ಪಥವಾಗಿ ಅಗಲೀ ಕರಿಸುವ ಕಾಮಗಾರಿಗಳು ಸೇರಿವೆ.

ಹೆದ್ದಾರಿ ಯೋಜನೆಗೆ ಶಿಲಾನ್ಯಾಸ ನೆರ ವೇರಿಸಿದ ಬಳಿಕ ಮಾತನಾಡಿದ ನಿತಿನ್ ಗಡ್ಕರಿ, ಶಿರಾಡಿ ಘಾಟ್ ನಲ್ಲಿ 10 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 23.60 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಾಣ ಕ್ಕಾಗಿ ಡಿಪಿಆರ್ (ಸಮಗ್ರ ಯೋಜನಾ ವರದಿ) ಪ್ರಗತಿಯ ಹಂತದಲ್ಲಿದೆ ಎಂದರು. ಈ ಯೋಜನೆ ಒಟ್ಟು 12.60 ಕಿ.ಮೀ. ಉದ್ದದ 6 ಸುರಂಗಗಳನ್ನು ಒಳಗೊಂ ಡಿದೆ. ಈ ಸುರಂಗಗಳು 1.50 ಕಿಮೀ ಉದ್ದದ ಸೇತುವೆಯನ್ನು ಒಳಗೊಂಡಿದ್ದು, 100 ಮೀ. ಎತ್ತರವನ್ನು ಹೊಂದಿದೆ. ಸುರಂಗ ಗಳು ಎರಡು ಸಂಚಾರ ಮಾರ್ಗ ಹಾಗೂ ಪ್ರತಿ ಸುರಂಗದಲ್ಲಿ ಒಂದು ತುರ್ತು ಮಾರ್ಗ ಅಂದರೆ 10.50 ಮೀ ಸಾರಿಗೆ ಮಾರ್ಗ ಒಳ ಗೊಂಡಿವೆ ಎಂದು ಸಚಿವರು ತಿಳಿಸಿದರು.

ಕೇಂದ್ರ ಸರ್ಕಾರ ಮುಂಬರುವ ವರ್ಷ ಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಅಂದಾಜು 1,42,391 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುತ್ತಿದೆ. 57 ಯೋಜನೆಗಳ ಪೈಕಿ 21 ಕಾಮಗಾರಿಗಳು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್.ಎಚ್. ಎ.ಐ.)ನಡಿ ಪ್ರಗತಿಯಲ್ಲಿವೆ ಎಂದರು.

ಬೆಂಗಳೂರು-ಮೈಸೂರು ವಿಭಾಗದ ಷಟ್ಪಥದ ಎಕ್ಸೆಸ್ ಕಂಟ್ರೋಲ್ ಮಾರ್ಗದ ಬಗ್ಗೆ ಮಾತನಾಡಿದ ಗಡ್ಕರಿ, ರಾ.ಹೆ.7ರಲ್ಲಿ ಅನಂತಪುರಂ ಮಾರ್ಗವಾಗಿ ಸಾಗುವ ಬೆಂಗಳೂರಿನಿಂದ ಅಮರಾವತಿವರೆಗಿನ ಮಾರ್ಗದಲ್ಲಿ ಈಗಾಗಲೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪುವ 4.50 ಕಿ.ಮೀ. ಉದ್ದದ ಚತು ಷ್ಪಥ ಎಲಿವೇಟೆಡ್ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ರಾ.ಹೆ. 4ರಲ್ಲಿ ತಿರುಪತಿ ಮಾರ್ಗವಾಗಿ ಸಾಗುವ ಬೆಂಗಳೂರಿ ನಿಂದ ಅಮರಾವತಿ ನಡುವಿನ ರಸ್ತೆ 4/6 ಮಾರ್ಗ (ಬೆಂಗಳೂರು-ಕೋಲಾರ- ಮುಳಬಾಗಿಲು-ಕೆ.ಎನ್.ಟಿ/ಎ.ಪಿ. ಗಡಿ) ಈಗಾಗಲೇ ಪೂರ್ಣಗೊಂಡಿದೆ ಎಂದು ಸಚಿವರು ತಿಳಿಸಿದರು.

ಹಾಸನ-ಹುಲಿಯಾರು-ಹಿರಿಯೂರು ನಡುವಿನ ಸುಮಾರು 150 ಕಿ.ಮೀ. ಮಾರ್ಗ ವನ್ನು 3,200 ಕೋಟಿ ರೂಪಾಯಿ ವೆಚ್ಚದಲ್ಲಿ ಭಾರತ ಮಾಲಾ ಯೋಜನೆ ಅಡಿಯಲ್ಲಿ ಚತುಷ್ಪಥದ ಮಾರ್ಗವಾಗಿ ಅಭಿವೃದ್ಧಿ ಪಡಿಸಲು ಗುರುತಿಸಲಾಗಿದೆ. ಇದು ಡಿಪಿಆರ್ ಹಂತದಲ್ಲಿದೆ ಎಂದು ಗಡ್ಕರಿ ತಿಳಿಸಿದರು. ರಾ.ಹೆ.-4ಎ ಯಿಂದ ರಾ.ಹೆ. -4ರವರೆಗೆ ಸಂಪರ್ಕಿಸುವ ಒಟ್ಟು 68 ಕಿ.ಮೀ. ಉದ್ದದ ಬೆಳಗಾವಿ ಬೈಪಾಸ್ 4/6ರಲ್ಲಿ ಪೂರ್ವ ಭಾಗದಿಂದ ಪಶ್ಚಿಮ ಭಾಗಕ್ಕೆ ಹಾದುಹೋಗುವ ರಸ್ತೆ ನಿರ್ಮಾಣ. ಈ ಬೈಪಾಸ್‍ನ ತಾತ್ಕಾಲಿಕ ಅಂದಾಜು ವೆಚ್ಚ ಸುಮಾರು 1500 ಕೋಟಿ ರೂಪಾಯಿ ಎಂದು ಗಡ್ಕರಿ ತಿಳಿಸಿದರು.

ಬೆಂಗಳೂರು-ಮಂಗಳೂರು ವಿಭಾಗದ ರಾ.ಹೆ.75ರಲ್ಲಿ ಚನ್ನರಾಯಪಟ್ಟಣ ಮತ್ತು ಹಾಸನ ಬೈಪಾಸ್ ಅನ್ನು ದ್ವಿಪಥದಿಂದ ಚತುಷ್ಪಥವಾಗಿ ಅಗಲೀಕರಿಸುವ ಕಾಮ ಗಾರಿ ಪ್ರಗತಿಯಲ್ಲಿದೆ ಎಂದು ಸಚಿವರು ತಿಳಿಸಿ ದರು. ಈ ಯೋಜನೆಯ ಬಗ್ಗೆ ವಿವರ ನೀಡಿದ ಸಚಿವರು, ಇದನ್ನು ಎರಡು ಪ್ಯಾಕೇಜ್ ಅಂದರೆ ಪ್ಯಾಕೇಜ್ -1ರಲ್ಲಿ 10.40 ಕಿ.ಮೀ ಉದ್ದದ ಚನ್ನರಾಯ ಪಟ್ಟಣ ಬೈಪಾಸ್ ಹಾಲಿ ಇರುವ ದ್ವಿಪಥ ವನ್ನು ಚತುಷ್ಪಥವಾಗಿ ಅಂದಾಜು ನಿರ್ಮಾಣ ವೆಚ್ಚ 451.40 ಕೋಟಿ ರೂಪಾಯಿಗಳಲ್ಲಿ ಮತ್ತು ಪ್ಯಾಕೇಜ್ 2ರಲ್ಲಿ 10.31 ಕಿ.ಮೀ. ಹಾಸನ ಬೈಪಾಸ್ ಅನ್ನು ಚತುಷ್ಪಥವಾಗಿ ಅಗಲೀಕರಿಸುವುದು ಇದರ ಅಂದಾಜು ವೆಚ್ಚ 372 ಕೋಟಿ ರೂಪಾಯಿಗಳು ಎಂದು ಸಚಿವರು ತಿಳಿಸಿದರು.

ಮುಖ್ಯಮಂತ್ರಿ ಶ್ರೀ. ಎಚ್.ಡಿ. ಕುಮಾರ ಸ್ವಾಮಿ, ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಮತ್ತು ಇತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Translate »