ಸಮಾಜವನ್ನು ಒಗ್ಗೂಡಿಸಬೇಕೇ ಹೊರತು ಒಡೆಯುವ ಕೆಲಸ ಯಾರೂ ಮಾಡಬಾರದು
ಮೈಸೂರು

ಸಮಾಜವನ್ನು ಒಗ್ಗೂಡಿಸಬೇಕೇ ಹೊರತು ಒಡೆಯುವ ಕೆಲಸ ಯಾರೂ ಮಾಡಬಾರದು

February 15, 2021

ಮೈಸೂರು, ಫೆ.14(ಆರ್‍ಕೆಬಿ)- ನಾವು ಆಡುವ ಮಾತಿನ ಬಗ್ಗೆ ಹೆಚ್ಚು ನಿಗಾ ಇಡಬೇಕು. ನಾಲಿಗೆ ಜಾರಿದರೆ ಸಮಾಜಕ್ಕಾಗುವ ನಷ್ಟವನ್ನು ಸರಿ ಪಡಿಸಲಾಗುವುದಿಲ್ಲ ಎಂಬುದನ್ನು ನೆನಪಿಟ್ಟುಕೊಂಡು ರಾಜಕೀಯ ಹೋರಾಟ ಮಾಡಲಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ.ವೈ.ವಿಜ ಯೇಂದ್ರ ಹೋರಾಟಗಾರರು, ರಾಜಕೀಯ ಪಕ್ಷದ ಮುಖಂಡರಲ್ಲಿ ಮನವಿ ಮಾಡಿದರು.

ಮೈಸೂರಿನ ಜೆಎಸ್‍ಎಸ್ ಬಡಾ ವಣೆಯ ಮೊದಲ ಹಂತದಲ್ಲಿ ರಾಜ್‍ಕುಮಾರ್ ರಸ್ತೆ ಬಸವೇಶ್ವರ ವೃತ್ತದಲ್ಲಿ ಅಖಿಲ ಭಾರತ ವೀರ ಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕ ಭಾನುವಾರ ಆಯೋ ಜಿಸಿದ್ದ ಮಹಾಸಭಾ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಇಂದು ಹೋರಾಟ ಸಂದರ್ಭ ದಲ್ಲಿ ಅನೇಕರು ನಾನಾ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಬೇರೆ ಬೇರೆ ಪಕ್ಷ ಗಳ ರಾಜಕೀಯ ಮುಖಂಡರು ಎಲ್ಲರೂ ಸಹ ಹೋರಾಟದಲ್ಲಿ ಭಾಗ ವಹಿಸುತ್ತಿದ್ದಾರೆ. ಅದು ಸರಿ ತಪ್ಪು ಎನ್ನುವುದು ಬೇರೆ ವಿಚಾರ. ಆದರೆ ಕೆಲವೊಮ್ಮೆ ಕಾಲು ಜಾರಿದರೆ ಅನಾ ಹುತ ಆಗುವುದಿಲ್ಲ. ಆದರೆ ಆಡುವ ಮಾತು ನಾಲಿಗೆ ಜಾರಿದರೆ ಆಗು ವಂತಹ ನಷ್ಟವನ್ನು ಸರಿ ಮಾಡಲು ಸಾಧ್ಯವಿಲ್ಲ. ಹೋರಾಟ ಮಾಡುವವರಿಗೆ ತಮ್ಮ ಸಮಾಜಕ್ಕೆ ನ್ಯಾಯ ಕೇಳುವ ಹಕ್ಕಿದೆ. ಅದು ತಪ್ಪು ಎಂದು ಹೇಳುವುದಿಲ್ಲ. ಇಡೀ ರಾಜ್ಯ ನಮ್ಮ ಕಡೆ ನೋಡುತ್ತಿದೆ. ನಾವು ಆಡುವ ಒಂದೊಂದು ಮಾತು ಸಮಾಜವನ್ನು ಒಗ್ಗೂಡಿಸಬೇಕೇ ಹೊರತು ಒಡೆಯುವ ಕೆಲಸವನ್ನು ಯಾರೂ ಮಾಡÀಬಾರದು ಎಂದು ಮನವಿ ಮಾಡಿದರು. ಪ್ರಸ್ತುತ ಬೇರೆ ಬೇರೆ ಜಾತಿ, ಸಮುದಾಯಗಳು ತಮ್ಮ ಹಕ್ಕನ್ನು ಪ್ರತಿಪಾದಿಸುವ ಕೆಲಸ ಮಾಡುತ್ತಿವೆ. ಅನೇಕ ಶ್ರೀಗಳು, ಪಂಚಮ ಸಾಲಿಗಳು, ಕುರುಬ, ವಾಲ್ಮೀಕಿ, ವೀರಶೈವ ಲಿಂಗಾಯತ ಸಮುದಾಯಗಳಿರಬಹುದು ಎಲ್ಲರೂ ಹೋರಾಟ ಮಾಡುತ್ತಿದ್ದಾರೆ. ಆದರೆ ಒಂದು ಮಾತು ಹೇಳ ಬಯಸುತ್ತೇನೆ. ಮುಖ್ಯಮಂತ್ರಿ ಯಡಿ ಯೂರಪ್ಪ ನುಡಿದಂತೆ ನಡೆಯುವ ಶಕ್ತಿ ಇರುವ ನಾಯಕ. ಅವರು ಯಾವುದೇ ಸಮುದಾಯ, ಯಾವುದೇ ಜಾತಿಗೆ ಸೀಮಿತವಾಗಿರುವ ಮುಖ್ಯಮಂತ್ರಿಯಲ್ಲ. ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕನಕ ಜಯಂತಿ, ವಾಲ್ಮೀಕಿ ಜಯಂತಿ ಘೋಷಣೆ ಮಾಡಿದರು. ಕನಕಪೀಠಕ್ಕೆ, ವಾಲ್ಮೀಕಿ ಸಮುದಾಯಕ್ಕೆ ಅನುದಾನ ಕೊಟ್ಟಿದ್ದರು. ಹಿಂದುಳಿದವರು, ದಲಿತ ವರ್ಗ ಸೇರಿದಂತೆ ಎಲ್ಲಾ ವರ್ಗಗಳಿಗೂ ನ್ಯಾಯ ಒದಗಿಸುವ ಕೆಲಸ ಮಾಡಿದರು. ಈಗಲೂ ಅದನ್ನೇ ಮಾಡುತ್ತಿದ್ದಾರೆ. ಅಲ್ಲದೆ ನಾಡಿನ ಸೇವಕನಾಗಿ ಎಲ್ಲಾ ಸಮುದಾಯಗಳ ಬೇಡಿಕೆಗಳಿಗೆ ನ್ಯಾಯ ಒದಗಿಸುವ ಕೆಲಸ ಸಂವಿಧಾನದ ಚೌಕಟ್ಟಿನಲ್ಲಿ ಮಾಡುತ್ತೇನೆಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಹಾಗಾಗಿ ಅವರಿಗೆ ಎಲ್ಲಾ ಸಮುದಾಯ, ಸಮಾಜಕ್ಕೆ ನ್ಯಾಯ ಒದಗಿಸುವ ಕೆಲಸದಲ್ಲಿ ಮಾರ್ಗ ದರ್ಶನ ನೀಡಬೇಕು ಎಂದು ವಿಜಯೇಂದ್ರ ಶ್ರೀಗಳಲ್ಲಿ ಮನವಿ ಮಾಡಿದರು. ಸಮಾರಂಭ ದಲ್ಲಿ ಹೊಸಮಠದ ಶ್ರೀ ಚಿದಾನಂದಸ್ವಾಮೀಜಿ, ಶಾಸಕರಾದ ತನ್ವೀರ್‍ಸೇಠ್, ಎಲ್.ನಾಗೇಂದ್ರ, ಡಾ.ಯತೀಂದ್ರ ಸಿದ್ದರಾಮಯ್ಯ, ಸಿ.ಎಸ್.ನಿರಂಜನಕುಮಾರ್, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಮಾಜಿ ಎಂಎಲ್‍ಸಿಗಳಾದ ತೋಂಟದಾರ್ಯ, ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ಜಿಪಂ ಮಾಜಿ ಅಧ್ಯಕ್ಷ ಕೆ.ಎನ್.ಪುಟ್ಟಬುದ್ಧಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ನಂದೀಶ್ ಹಂಚೆ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಜಿಪಂ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಜಿಪಂ ಸದಸ್ಯೆ ಮಂಗಳಾ ಸೋಮಶೇಖರ್ ಇನ್ನಿತರರು ಉಪಸ್ಥಿತರಿದ್ದರು.

ಮೈಸೂರಿಗೆ ಟೆಕ್ಸ್‍ಟೈಲ್ಸ್ ಪಾರ್ಕ್, ಫಿಲಂ ಸಿಟಿ ತರಲು ಸಚಿವರಲ್ಲಿ ವಿಜಯೇಂದ್ರ ಮನವಿ
ಮೈಸೂರು, ಫೆ.14(ಆರ್‍ಕೆಬಿ)- ಮೈಸೂರಿನಲ್ಲಿ ಟೆಕ್ಸ್‍ಟೈಲ್ಸ್ ಪಾರ್ಕ್ ಮತ್ತು ಫಿಲಂ ಸಿಟಿಯನ್ನು ತರುವ ಪ್ರಯತ್ನ ಮಾಡುವಂತೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಹಕಾರ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಅವರ ಗಮನ ಸೆಳೆದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಆರ್ಥಿಕ ಮುಗ್ಗಟ್ಟು ಇರುವ ಈ ಸಂದರ್ಭದಲ್ಲಿ ಈ ಭಾಗದಲ್ಲಿ ಯುವಕರು, ಮಹಿಳೆಯರಿಗೆ ಉದ್ಯೋಗ ಸೃಷ್ಟಿಸಿ ಕೊಡುವಂತಹ ಕೆಲಸ ಆಗಬೇಕಾಗಿದೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿ ಆರಂಭಿಸಲಿರುವ 7 ಟೆಕ್ಸ್‍ಟೈಲ್ ಪಾರ್ಕ್‍ಗಳ ಪೈಕಿ ಒಂದನ್ನು ಮೈಸೂರಿನಲ್ಲಿ ಸ್ಥಾಪಿಸಲು ಯತ್ನಿಸಬೇಕು. ಜೊತೆಗೆ ಬೆಂಗಳೂರಿಗೆ ಹೋಗುವ ಪ್ರಯತ್ನ ನಡೆದಿರುವ ಫಿಲಂ ಸಿಟಿಯನ್ನು ಸಹ ಮೈಸೂರಿನಲ್ಲಿಯೇ ಸ್ಥಾಪಿಸಲು ಮುಂದಾ ಗುವಂತೆ ಸಚಿವರಲ್ಲಿ ಮನವಿ ಮಾಡಿದರು. ವೀರಶೈವ ಲಿಂಗಾಯತ ಸಮುದಾಯವು ಎಲ್ಲಾ ಸಮುದಾಯಗಳನ್ನು ಜೊತೆಯಲ್ಲಿ ಕೊಂಡೊಯ್ಯಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯ. ಬಸವಣ್ಣನವರು, ಸಿದ್ಧಗಂಗಾ ಶ್ರೀಗಳ ಹಾಗೂ ಸುತ್ತೂರು ಶ್ರೀಗಳ ಮಾರ್ಗದರ್ಶನದಲ್ಲಿ ಎಲ್ಲ ಸಮುದಾಯಕ್ಕೆ, ಸಮಾಜಕ್ಕೆ ನೆರಳಾಗುವ ದಿಕ್ಕಿನಲ್ಲಿ ಒಟ್ಟಿಗೆ ಪರಿಶ್ರಮ ಪಡೋಣ ಎಂದು ಮನವಿ ಮಾಡಿದರು.

 

 

 

Translate »