ಶೋಷಿತರು, ಬಡವರ ಧ್ವನಿಯಾಗಿದ್ದ ಅರಸು
ಮೈಸೂರು

ಶೋಷಿತರು, ಬಡವರ ಧ್ವನಿಯಾಗಿದ್ದ ಅರಸು

June 7, 2020

ಮೈಸೂರು, ಜೂ.6(ಪಿಎಂ)- ಮಾಜಿ ಮುಖ್ಯಮಂತ್ರಿ, ರಾಜಕೀಯ ಮುತ್ಸದ್ಧಿ ಡಿ.ದೇವರಾಜ ಅರಸು ಶೋಷಿತರು ಹಾಗೂ ಬಡವರ ಧ್ವನಿಯಾಗಿ ನಾಡು ಕಟ್ಟಿದವರು ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಸ್ಮರಿಸಿದರು.

ಮೈಸೂರಿನ ಇಂದಿರಾ ಗಾಂಧಿ ಕಾಂಗ್ರೆಸ್ ಭವನದಲ್ಲಿ ಶನಿವಾರ ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸು ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಅರಸು ಫೋಟೋಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿ ದರು. ಹಲವು ವರ್ಷಗಳಿಂದ ಸಿರಿವಂತರ ಮನೆಗಳಲ್ಲಿ ಜೀತದಾಳಾಗಿದ್ದವರನ್ನು ಜೀತ ಮುಕ್ತಗೊಳಿಸಿದರು. ಭೂ ನ್ಯಾಯಮಂಡಳಿ ಸ್ಥಾಪಿಸಿ ಉಳುವವನ ಪರವಾಗಿ ಭೂ ಕಾಯ್ದೆ ಜಾರಿಗೆ ತಂದು ಇಡೀ ದೇಶದಲ್ಲೇ ದುಡಿ ಯುವ ವರ್ಗಕ್ಕೆ ಭೂಮಿ ಹಕ್ಕನ್ನು ನೀಡಿದ ಧೀಮಂತ ನಾಯಕ. ವೃದ್ಧರು, ವಿಧವೆಯ ರಿಗೆ ಮಾಸಿಕ ವೇತನ ಸೌಲಭ್ಯ ಕಲ್ಪಿಸಿ ಆಸರೆ ಯಾದರು. ನಿರುದ್ಯೋಗಿ ಪದವೀಧರರಿಗೆ ಪೆÇ್ರೀತ್ಸಾಹ ಧನ ನೀಡುವ ಕಾರ್ಯಕ್ರಮ ರೂಪಿಸಿದರು. ಹಿಂದುಳಿದ ಜನಾಂಗದವರನ್ನು ಗುರುತಿಸಿ, ಶಾಸಕ, ಸಂಸದರನ್ನಾಗಿಸಿ ಮಂತ್ರಿ ಸ್ಥಾನಕ್ಕೇರುವಂತೆ ಮಾಡಿದರು. ಸಣ್ಣ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದರು ಎಂದರು.

ಕೆಪಿಸಿಸಿ ವಕ್ತಾರ ಹೆಚ್.ಎ.ವೆಂಕಟೇಶ್ ಮಾತನಾಡಿ, ಶೋಷಿತ ಸಮುದಾಯಗಳ ಸಬಲೀಕರಣಗೊಳಿಸುವಲ್ಲಿ ಕಾಳಜಿ ಹೊಂದಿದ್ದ ದೇವರಾಜ ಅರಸು ಅವರು ಹಾವನೂರು ಆಯೋಗ ರಚಿಸಿದರು. ಆಯೋಗದ ಶಿಫಾ ರಸ್ಸಿನಂತೆ ಮೀಸಲಾತಿ ಕಲ್ಪಿಸಿ ಹಿಂದುಳಿದ ಜನಾಂಗಗಳಿಗೆ ದನಿ ನೀಡಿದರು ಎಂದರು.

ಅರಸು ಅವರ ಹೋರಾಟ, ಸಾಧನೆ ಇಂದಿನ ರಾಜಕಾರಣಿಗಳಿಗೆ ಸ್ಫೂರ್ತಿ. ನಾನು ಮೈಸೂರು ಜಿಪಂ ಅಧ್ಯಕ್ಷೆಯಾಗಿದ್ದಾಗ ಅರಸು ಅವರ ಹೆಸರಿನಲ್ಲಿ ಜಿಪಂ ಆವರಣದಲ್ಲಿ ಮಿನಿ ಸಭಾಂಗಣ ನಿರ್ಮಾಣ ಮಾಡ ಲಾಯಿತು ಎಂದು ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ ಪುಷ್ಪಾ ಅಮರ್‍ನಾಥ್ ನುಡಿದರು.

ಕೆಪಿಸಿಸಿ ಸದಸ್ಯೆ ವೀಣಾ, ಪಾಲಿಕೆ ಮಾಜಿ ಸದಸ್ಯ ಎಂ.ಸುನೀಲ್, ಕಾಂಗ್ರೆಸ್ ಮುಖಂಡ ರಾದ ಜಿ.ಸೋಮಶೇಖರ್, ಶ್ರೀಧರ್, ಡೈರಿ ವೆಂಕಟೇಶ್, ವಿಶ್ವ, ಗುಣಶೇಖರ್, ಲೋಕೇಶ್ ಮಾದಾಪುರ, ಆರ್.ಕೆ.ರವಿ, ಚಂದ್ರು ವಿಶ್ವಕರ್ಮ, ವಕೀಲ ತ್ಯಾಗರಾಜ್ ಮತ್ತಿತರರಿದ್ದರು.

Translate »