ನಂಜನಗೂಡಿನಲ್ಲಿ ವಿಶ್ವ ಪರಿಸರ ದಿನಾಚರಣೆ
ಮೈಸೂರು ಗ್ರಾಮಾಂತರ

ನಂಜನಗೂಡಿನಲ್ಲಿ ವಿಶ್ವ ಪರಿಸರ ದಿನಾಚರಣೆ

June 7, 2020

ನಂಜನಗೂಡು, ಜೂ. 6-ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಸಕ ಬಿ.ಹರ್ಷ ವರ್ಧನ್ ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಉದ್ಯಾನವನ ಅಭಿವೃದ್ಧಿಗೆ ಗಿಡ ನೆಡುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಕಾರ್ಖಾನೆ, ವಾಹನಗಳ ಹೊಗೆಯಿಂದಾಗಿ ವಾಯುಮಾಲಿನ್ಯ ಹೆಚ್ಚಾಗಿ ಓಜೋನ್ ಪದರ ಕೂಡ ರಂಧ್ರವಾಗುತ್ತಿತ್ತು. ಆದರೆ ಲಾಕ್‍ಡೌನ್‍ನಿಂದಾಗಿ ಇಡೀ ಜಗತ್ತು ಸ್ತಬ್ಧಗೊಂಡು ಪರಿಸರದ ಸಮತೋಲನ ಕಾಯ್ದುಕೊಂಡಿದೆ. ಗಿಡ ಮರಗಳು ಹೆಚ್ಚು ಬೆಳೆಸಿದಷ್ಟು ಆಮ್ಲಜನಕದ ಪ್ರಮಾಣ ಹೆಚ್ಚಾ ಗಲಿದೆ. ಜೊತೆಗೆ ಕಾಲಕಾಲಕ್ಕೆ ಉತ್ತಮ ಮಳೆ ಬೆಳೆಯಾಗಿ ಪರಿಸರ ಸಮತೋಲನ ಕಾಪಾಡಿಕೊಳ್ಳಬಹುದಾಗಿದೆ. ಆದ್ದರಿಂದ ಎಲ್ಲರೂ ಮರಗಿಡಗಳನ್ನು ಹೆಚ್ಚು ಬೆಳೆ ಸುವ ಮೂಲಕ ಪರಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

ತಾಪಂ ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವನಾಯ್ಕ, ಸದಸ್ಯರಾದ ಶಿವಣ್ಣ, ತಾಲೂಕು ಬಿಜೆಪಿ ಅಧ್ಯಕ್ಷ ಪಿ.ಮಹೇಶ್, ನಗರಾಧ್ಯಕ್ಷ ಶ್ರೀನಿ ವಾಸ ರೆಡ್ಡಿ, ಬಾಲಚಂದ್ರು, ನಗರಸಭಾ ಆಯುಕ್ತ ಕರಿಬಸವಯ್ಯ, ಪರಿಸರ ಅಧಿ ಕಾರಿ ಅರ್ಚನಾ, ಅಶೋಕ್, ಮುಖಂಡ ರಾದ ಶಿರಮಳ್ಳಿ ಮಹದೇವಸ್ವಾಮಿ, ತಾಪಂ ಇಓ ಶ್ರೀಕಂಠರಾಜೇ ಅರಸ್, ವಲಯ ಅರಣ್ಯಾಧಿಕಾರಿ ಪರಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Translate »