ಮೈಸೂರು ಜಿಲ್ಲೆಯ 225 ಕೇಂದ್ರಗಳಲ್ಲಿ ಲಸಿಕೆ ಸೌಲಭ್ಯ
ಮೈಸೂರು

ಮೈಸೂರು ಜಿಲ್ಲೆಯ 225 ಕೇಂದ್ರಗಳಲ್ಲಿ ಲಸಿಕೆ ಸೌಲಭ್ಯ

March 9, 2021

ಮೈಸೂರು, ಮಾ.8(ಆರ್‍ಕೆ)- ಮೈಸೂ ರಿನ 23 ಖಾಸಗಿ ಆಸ್ಪತ್ರೆ ಸೇರಿದಂತೆ ಜಿಲ್ಲೆ ಯಾದ್ಯಂತ 225 ಆರೋಗ್ಯ ಕೇಂದ್ರಗಳಲ್ಲಿ ಇಂದಿನಿಂದ 3ನೇ ಹಂತದ ಕೋವಿಡ್-19 ಲಸಿಕೆ ನೀಡುವ ಸಾಮೂಹಿಕ ಅಭಿ ಯಾನ ಆರಂಭವಾಗಿದೆ.

ಕೊರೊನಾ ಲಸಿಕೆ ಅಭಿಯಾನದ ವೇಗ ಹೆಚ್ಚಿಸಿ, ಹೆಚ್ಚಿನ ಸಂಖ್ಯೆಯ ಹಿರಿಯ ನಾಗರಿಕರಿಗೆ ಲಸಿಕೆ ನೀಡುವ ಉದ್ದೇಶ ದಿಂದ ಸರ್ಕಾರದ ನಿರ್ದೇಶನದಂತೆ ಮೈಸೂರಿನ 23 ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲು ಅವಕಾಶ ನೀಡಲಾಗಿದ್ದು, ಸೋಮವಾರ ಬೆಳಗ್ಗೆಯಿಂದ ಸಾಮೂ ಹಿಕವಾಗಿ ಈ ಪ್ರಕ್ರಿಯೆ ನಡೆಯುತ್ತಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪಿ.ರವಿ ತಿಳಿಸಿದ್ದಾರೆ.

ಮೈಸೂರಿನ ಜೆಎಸ್‍ಎಸ್, ಅಪೊಲೋ ನಟರಾಜ್, ಅಲ್‍ಅನ್ಸರ್, ಬೃಂದಾವನ, ಕೃಷ್ಣ, ಭಾನವಿ, ನಾರಾಯಣ ಹೃದಯಾ ಲಯ, ಕಾವೇರಿ, ಕ್ಲಿಯರ್‍ಮೆಡಿ, ಸಿಗ್ಮಾ, ಸೆಂಟ್ ಜೋಸೆಫ್, ಡಿಆರ್‍ಎಂ, ಆಶಾ ಕಿರಣ, ಮಿಷನ್ ಆಸ್ಪತ್ರೆ, ನ್ಯೂ ಪ್ರಿಯ ದರ್ಶಿನಿ, ಸುಯೋಗ್, ಕಾಮಾಕ್ಷಿ, ವಾತ್ಸಲ್ಯ, ಕೊಲಂಬಿಯಾ ಏಷಿಯಾ, ವಿವೇಕಾ ನಂದ, ಟಿಬೆಟನ್ ಪೆಂಡೆ, ಗೋಪಾಲ ಗೌಡ ಸೇರಿ ಇನ್ನಿತರೆ ಆಸ್ಪತ್ರೆಗಳಲ್ಲಿ ಇಂದಿ ನಿಂದ 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಅದೇ ರೀತಿ ಗ್ರಾಮೀಣ ಭಾಗದ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲದೆ, ಜಿಲ್ಲೆಯಾದ್ಯಂತ 200 ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಕೋವಿಡ್ ಲಸಿಕೆ ಅಭಿಯಾನ ಆರಂಭ ವಾಗಿದ್ದು, ಇದೀಗ ಜನರಿಗೆ ತಾವು ವಾಸಿಸುವ ಸ್ಥಳಗಳಲ್ಲೇ ಲಸಿಕೆ ಲಭ್ಯವಾಗು ತ್ತಿದೆ. ಪ್ರತೀ ಕೇಂದ್ರಗಳಲ್ಲಿ ವೈದ್ಯರು, ನರ್ಸಿಂಗ್ ಅಧಿಕಾರಿಗಳು, ನರ್ಸಿಂಗ್ ಸಿಬ್ಬಂದಿ ಹಾಗೂ ‘ಡಿ’ ಗ್ರೂಪ್ ನೌಕರರಿಗೆ ಲಸಿಕೆ ನೀಡುವ ಬಗ್ಗೆ ಸೂಕ್ತ ತರಬೇತಿ ನೀಡಿರುವುದರಿಂದ ಮೊದಲ ದಿನವಾದ ಸೋಮವಾರ ಅಭಿಯಾನ ಪರಿಣಾಮ ಕಾರಿಯಾಗಿ ನಡೆಯಿತು.

ಸರ್ವರ್ ಡೌನ್: ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರಗಳನ್ನು ತೆರೆದಿರುವುದರಿಂದ ಹಾಗೂ ಆನ್‍ಲೈನ್ ಪೋರ್ಟಲ್ ಅನ್ನು ಬದಲಾಯಿಸಿರುವ ಕಾರಣ, ಮೊದಲ ದಿನವಾದ ಇಂದು ಸರ್ವರ್ ಡೌನ್ ಆಗಿ ಓಟಿಪಿ ಬರದ ಕಾರಣ ಬೆಳಗ್ಗೆ 10 ರಿಂದ 11.45 ಗಂಟೆವರೆಗೆ ಕೆಲ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ನೀಡಲು ಸಾಧ್ಯವಾಗ ಲಿಲ್ಲ. ಹೊಸ ಕೋವಿಡ್ 2.ಓ (2.ಔ) ಮಾದರಿಯ ಪೋರ್ಟಲ್ ಓಪನ್ ಆಗದೇ ಆನ್‍ಲೈನ್ ನೋಂದಣಿ ವಿಳಂಬ ವಾಯಿತು. ಇದು ಕೇವಲ ಮೈಸೂರಿಗಷ್ಟೇ ಅಲ್ಲದೆ, ಇಡೀ ದೇಶದಲ್ಲೇ ಆನ್‍ಲೈನ್ ಸರ್ವರ್ ಸಮಸ್ಯೆ ಉಂಟಾಗಿತ್ತು. ಮಧ್ಯಾಹ್ನದ ನಂತರ ಪೋರ್ಟಲ್ ಓಪನ್ ಆದ ಕಾರಣ ಕೊರೊನಾ ಲಸಿಕೆ ಹಾಕುವ ಪ್ರಕ್ರಿಯೆ ಆರಂಭವಾಯಿತು ಎಂದು ಅಧಿಕಾರಿಗಳು ತಿಳಿಸಿದರು.

ಲಸಿಕೆ ಪಡೆಯಲು ನಾಗರಿಕರಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ಹೆಚ್ಚು ಆಸ್ಪತ್ರೆಗಳಲ್ಲಿ ಅಭಿಯಾನ ನಡೆಯುತ್ತಿರು ವುದರಿಂದ 3ನೇ ಹಂತದ ಲಸಿಕೆ ಹಾಗೂ ಮೊದಲನೇ ಹಂತದಲ್ಲಿ ಲಸಿಕೆ ಪಡೆ ದವರೂ ಸಹ 2ನೇ ಡೋಸ್ ಪಡೆಯಲು ಉತ್ಸುಕತೆಯಿಂದ ಮುಂದೆ ಬರುತ್ತಿರು ವುದು ಕಂಡು ಬಂದಿತು.

Translate »