ಮೇ 6ರಂದು ವೈಶಾಖ ಬುದ್ಧ ಪೂರ್ಣಿಮ
ಮೈಸೂರು

ಮೇ 6ರಂದು ವೈಶಾಖ ಬುದ್ಧ ಪೂರ್ಣಿಮ

May 4, 2018

ಮೈಸೂರು: ನಗರದ ಮೆಲ್ಲಹಳ್ಳಿಯ ಅರಿವು ಬುದ್ಧ ಧ್ಯಾನ ಕೇಂದ್ರದಲ್ಲಿ ಮೇ 6ರಂದು ಬೆಳಿಗ್ಗೆ 11ಗಂಟೆಗೆ ವೈಶಾಖ ಬುದ್ಧ ಪೂರ್ಣಿಮ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಂಗಳೂರಿನ ಮಹಾಬೋಧಿ ಸೊಸೈಟಿಯ ಪೂಜ್ಯ ಬಿಕ್ಕು ಆನಂದ ಬಂತೇಜಿ ಸೇರಿದಂತೆ ಇತರೆ ಬಿಕ್ಕುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಿಕ್ಕುಗಳಿಂದ ಪ್ರವಚನ, ಧ್ಯಾನ ಮತ್ತು ದೀಕ್ಷೆ ನಡೆಯಲಿದೆ. ಮಧ್ಯಾಹ್ನದ ಉಪಹಾರ ಏರ್ಪಡಿಸಲಾಗಿದ್ದು, ಕಾರ್ಯಕ್ರಮಕ್ಕೆ ಹೆಚ್ಚಿನ ಬೌದ್ಧ ಬಾಂಧವರು ಆಗಮಿಸಬೇಕು ಎಂದು ಅರಿವು ಬುದ್ಧ ಧ್ಯಾನ ಕೇಂದ್ರದ ಧಮ್ಮ ಪಾಲ ಎನ್.ಚಂದ್ರಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »