ಹರ್ಷವರ್ಧನ್ ಪರ ಅಖಾಡಕ್ಕಿಳಿದ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಮತಯಾಚನೆ
ಮೈಸೂರು

ಹರ್ಷವರ್ಧನ್ ಪರ ಅಖಾಡಕ್ಕಿಳಿದ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಮತಯಾಚನೆ

May 4, 2018

ನಂಜನಗೂಡು: ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದ್ದು, ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂದು ಮಾಜಿ ಸಚಿವ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ.ಶ್ರೀನಿವಾಸ್ ಪ್ರಸಾದ್ ಭವಿಷ್ಯ ನುಡಿದರು.

ಅವರು ನಗರದ ಪ್ರಮುಖ ಬಡಾವಣೆ ಗಳಾದ ಶಂಕರ್‍ಪುರ, ಶ್ರೀರಾಂಪುರ, ಆನಂದಪುರ ಬೀದಿಗಳಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಬಿಜೆಪಿ ಅಭ್ಯರ್ಥಿ ಯಾದ ಹರ್ಷವರ್ಧನ್ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು.

ಸ್ವಾಭಿಮಾನ ಪಣಕ್ಕಿಟ್ಟು ನಡೆದ ಉಪ ಚುನಾವಣೆಯಲ್ಲಿ ಹಣದ ಮುಂದೆ ಸ್ವಾಭಿ ಮಾನ ಕೊಚ್ಚಿ ಹೋಯಿತು. ಆದರೆ ಈ ಬಾರಿ ಮತದಾರರು ದರ್ಪ, ದುರಹಂಕಾರ, ಸೊಕ್ಕನ್ನು ಮಟ್ಟ ಹಾಕುವ ಕಾಲ ಬಂದಿದೆ. ಯಾವುದೇ ಆಮಿಷಕ್ಕೆ ಒಳಗಾಗಬೇಡಿ, ಸಿದ್ದರಾಮಯ್ಯ ದಲಿತ ನಾಯಕತ್ವವನ್ನು ಹೊಸಕಿ ಹಾಕಿದ್ದಾರೆ. ಈ ಚುನಾವಣೆ ಯಲ್ಲಿ ಕೆಪಿಸಿಸಿ ಅಧ್ಯಕ್ಷರನ್ನು ಮೂಲೆ ಗುಂಪು ಮಾಡಲಾಗಿದೆ. ವಿ.ಶ್ರೀನಿವಾಸ್ ಪ್ರಸಾದ್ ಅಳಿಯನೆಂದು ನೋಡದೆ ವ್ಯಕ್ತಿತ್ವಕ್ಕೆ ಬೆಲೆಕೊಟ್ಟು ಮತ ಹಾಕಿ. ಅಳಿಯನಿಗೆ ಟಿಕೇಟ್ ನೀಡಿ ಎಂದು ನಾನು ಲಾಬಿ ಮಾಡಿಲ್ಲ. ಹೈಕಮಾಂಡ್ ತೀರ್ಮಾನದ ಪ್ರಕಾರ ಈ ಕ್ಷೇತ್ರದ ಟಿಕೆಟ್ ಹಂಚಿಕೆಯಾಗಿದೆ ಎಂದು ತಿಳಿಸಿದರು.

ಸಿಎಂ ಸಿದ್ದರಾಮಯ್ಯನವರು ಸೋಲಿನ ಭಯದಿಂದ ಚಾಮುಂಡೇಶ್ವರಿ ಕ್ಷೇತ್ರದ ಜೊತೆಗೆ ಬಾದಾಮಿಯಲ್ಲಿ ಸ್ಪರ್ಧಿಸುತ್ತಿದ್ದಾರೆ. 2 ಕ್ಷೇತ್ರದಲ್ಲಿ ಅವರು ಸೋಲನ್ನಪ್ಪಲಿದ್ದು, ಈ ಬಾರಿ ಕಾಂಗ್ರೆಸ್‍ಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು.

ಅದ್ಧೂರಿ ಸ್ವಾಗತ: ಶ್ರೀನಿವಾಸಪ್ರಸಾದ್ ಬಡಾವಣೆಗಳಿಗೆ ಭೇಟಿ ಕೊಟ್ಟಾಗ ಬಡಾ ವಣೆಯ ಮಹಿಳೆಯರು ಆರತಿ ಎತ್ತಿ, ಯುವಕರು ಪಟಾಕಿ ಸಿಡಿಸಿ ಸಂಭ್ರಮ ದಿಂದ ಬರಮಾಡಿಕೊಂಡು ಮೈಸೂರು ಪೇಟ ತೊಡಿಸಿ ಗೌರವಿಸಿದರು.

ತರಗನಹಳ್ಳಿ ಹಾಗೂ ಶಿರಮಳ್ಳಿ ಗ್ರಾಮದ ಮುಖಂಡರಾದ ಗ್ರಾ.ಪಂ.ಮಾಜಿ ಅಧ್ಯಕ್ಷ ಪುಟ್ಟಮಾದಪ್ಪ, ಮುಖಂಡರಾದ ನಾಗೇಂದ್ರ, ಸುರೇಶ್, ಪ್ರಪುಲ್ಲಾ, ಬಸವರಾಜು, ಚಿನ್ನಸ್ವಾಮಿ, ಶಿರಮಳ್ಳಿ ಶಿವಣ್ಣ ಸೇರಿದಂತೆ ಅನೇಕರು ಬಿಜೆಪಿ ಸೇರ್ಪಡೆಯಾದರು.

ಇದೇ ಸಂದರ್ಭದಲ್ಲಿ ಎಸ್.ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ, ಮಾಜಿ ಮುಡ ಅಧ್ಯಕ್ಷ ಬಸವೇಗೌಡ, ಮಾಜಿ ಜಿ.ಪಂ.ಉಪಾಧ್ಯಕ್ಷ ಕೆ.ಶಿವರಾಂ, ರಾಜ್ಯ ಕಾರ್ಯಕಾರಿಣ ಸದಸ್ಯ ಕೆ.ಕೆ.ಜಯದೇವ್, ಯು.ಎನ್. ಪದ್ಮನಾಭ ರಾವ್, ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷ ಎನ್.ವಿ.ವಿನಯ್‍ಕುಮಾರ್, ನಗರಾಧ್ಯಕ್ಷ ಬಾಲಚಂದ್ರು, ನಗರಸಭಾ ಸದಸ್ಯರಾದ ದೊರೆಸ್ವಾಮಿ, ಮಹದೇವಸ್ವಾಮಿ, ಗಿರೀಶ್, ಮಂಗಳ, ಅನುಸೂಯಾ, ಶಿರಮಳ್ಳಿ ಮಹದೇವಸ್ವಾಮಿ, ಮುಖಂಡರಾದ ಎನ್.ಸಿ. ಬಸವಣ್ಣ, ಕಸುವಿನಹಳ್ಳಿ ಗಿರೀಶ್, ಬದನ ವಾಳು ಗ್ರಾ.ಪಂ, ಅಧ್ಯಕ್ಷ ಮಹೇಶ್, ಡಿ.ಪಿ ಲೋಕೇಶ್, ತಾಲೂಕು ಉಪಾಧ್ಯಕ್ಷ ಶಾಮ್ ಪಟೇಲ್, ಎಪಿಎಂಸಿ ಸದಸ್ಯ ಗುರು ಸ್ವಾಮಿ, ಜಿ.ಬಸವರಾಜು, ಸಣ್ಣಯ್ಯ, ಮಹೇಶ್ ಅತ್ತಿಖಾನೆ, ನಾರಾಯಣರೆಡ್ಡಿ, ಗ್ರಾಮದ ಮುಖಂಡರಾದ ದೇವಪುತ್ರ, ಪುಟ್ಟರಾಜು, ಶಂಕರಪುರ ರಂಗಸ್ವಾಮಿ, ಮುಳ್ಳೂರು ಶೇಖರ್, ಶಿವನಾಗಪ್ಪ, ಇಟ್ಟಿಗೆ ಕೃಷ್ಣಪ್ಪ ಇದ್ದರು.

Translate »