ರೈತರಿಗೆ ನೆರವಾಗದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಬ್ಬು ಬೆಳೆಗಾರರಿಂದ ರೈತ ಜಾಗೃತಿ
ಮೈಸೂರು

ರೈತರಿಗೆ ನೆರವಾಗದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಬ್ಬು ಬೆಳೆಗಾರರಿಂದ ರೈತ ಜಾಗೃತಿ

May 4, 2018

ಮೈಸೂರು:  ರೈತ ವಿರೋಧಿ ನಿಲುವು ತಳೆದು, ನೂರಾರು ರೈತರ ಆತ್ಮಹತ್ಯೆಗೆ ಕಾರಣವಾದ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಕಬ್ಬು ಬೆಳೆಗಾ ರರ ಸಂಘವು ಮುಖ್ಯಮಂತ್ರಿ ಸಿದ್ದ ರಾಮಯ್ಯ ಸ್ಪರ್ಧಿಸಿರುವ ಚಾಮುಂಡೇ ಶ್ವರಿ ಹಾಗೂ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಸ್ಪರ್ಧಿಸಿರುವ ತಿ.ನರಸೀ ಪುರ ಕ್ಷೇತ್ರದಲ್ಲಿ ಅವರ ವಿರುದ್ಧ ರೈತ ಜಾಗೃತಿ ಅಭಿಯಾನ ನಡೆಸುತ್ತಿದೆ.

ಮೈಸೂರಿನ ಗನ್‍ಹೌಸ್ ಬಳಿ ಬಸವೇ ಶ್ವರ ಪ್ರತಿಮೆ ಬಳಿಯಿಂದ ಆರಂಭವಾದ ರೈತ ಜಾಗೃತಿ ಅಭಿಯಾನಕ್ಕೆ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತ ಕುಮಾರ್ ಚಾಲನೆ ನೀಡಿದರು.

ಸಿದ್ದರಾಮಯ್ಯ ಸರ್ಕಾರ ರೈತರಿಗೆ ಬೆಂಬಲ ಬೆಲೆ ನೀಡಲಿಲ್ಲ. ಸಕ್ಕರೆ ಕಾರ್ಖಾನೆ ಮಾಲೀಕರನ್ನು ರಕ್ಷಿಸುವ ಮೂಲಕ ರೈತ ರನ್ನು ಸಂಕಷ್ಟಕ್ಕೆ ಸಿಲುಕಿಸಿದ ಕಾಂಗ್ರೆಸ್ ಸರ್ಕಾ ರದ ವಿರುದ್ಧ ಜಾಗೃತಿ ಮೂಡಿಸಲಿದ್ದೇವೆ. ರೈತರ ರಕ್ಷಣೆಗೆ ಯಾವುದೇ ರೀತಿಯಲ್ಲೂ ನೆರವಾಗದ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಡಾ.ಹೆಚ್.ಸಿ.ಮಹದೇವಪ್ಪರನ್ನು ಸೋಲಿಸುವ ಗುರಿ ಹೊಂದಿದ್ದೇವೆ. ಇಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ, ನಾಳೆ (ಮೇ 4) ತಿ.ನರಸೀಪುರದಲ್ಲಿ ಜಾಗೃತಿ ಅಭಿ ಯಾನ ನಡೆಸುತ್ತಿರುವುದಾಗಿ ತಿಳಿಸಿದರು.

ಬಳಿಕ ಬೈಕ್‍ಗಳಲ್ಲಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ತೆರಳಿದ ರೈತ ಮುಖಂಡರು ಕರಪತ್ರ ಗಳ ಮೂಲಕ ಸಿದ್ದರಾಮಯ್ಯ ವಿರುದ್ಧ ಜಾಗೃತಿ ನಡೆಸಿದರು.

ರೈತ ಜಾಗೃತಿ ಅಭಿಯಾನದಲ್ಲಿ ರಾಜ್ಯ ಉಪಾಧ್ಯಕ್ಷ ಕೂಡನಹಳ್ಳಿ ರಾಜಣ್ಣ, ಸಂಘ ಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವ ರಾಜ್, ಜಿಲ್ಲಾ ಕಾರ್ಯಾ ಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್, ಪ್ರಧಾನ ಕಾರ್ಯ ದರ್ಶಿ ಕಿರಗಸೂರು ಶಂಕರ್, ಇನ್ನಿತರ ಪದಾಧಿಕಾರಿಗಳಾದ ಕೆರೆ ಹುಂಡಿ ರಾಜಣ್ಣ, ಕುರುಬೂರ್ ಸಿದ್ದೇಶ್, ಬಿದರ ಹಳ್ಳಿ ಮಾದಪ್ಪ, ಹಾಡ್ಯ ರವಿ, ವರಕೊಡು ಕೃಷ್ಣೇ ಗೌಡ, ಬರಡನಪುರ ನಾಗರಾಜ್, ಗಳಿಗರ ಹುಂಡಿ ವೆಂಕಟೇಶ್, ಬಿ.ಪಿ. ಪರಶಿವ ಮೂರ್ತಿ ಇನ್ನಿತರರು ಪಾಲ್ಗೊಂಡಿದ್ದರು.

Translate »