ಆರೋಗ್ಯದಲ್ಲಿ ವ್ಯತ್ಯಯ: ತಪಾಸಣೆ ನಂತರ ಶಾಸಕ ರಾಮದಾಸ್ ಆಸ್ಪತ್ರೆಯಿಂದ ಬಿಡುಗಡೆ
ಮೈಸೂರು

ಆರೋಗ್ಯದಲ್ಲಿ ವ್ಯತ್ಯಯ: ತಪಾಸಣೆ ನಂತರ ಶಾಸಕ ರಾಮದಾಸ್ ಆಸ್ಪತ್ರೆಯಿಂದ ಬಿಡುಗಡೆ

October 20, 2020

ಮೈಸೂರು, ಅ.19- ಆರೋಗ್ಯದಲ್ಲಿ ವ್ಯತ್ಯಯವಾದ್ದರಿಂದ ಸೋಮವಾರ ಬೆಳಗ್ಗೆ   ಆಸ್ಪತ್ರೆಗೆ ದಾಖಲಾಗಿದ್ದ ಶಾಸಕ ಎಸ್.ಎ.ರಾಮದಾಸ್, ತಪಾಸಣೆ ನಂತರ ಡಿಸ್ಚಾರ್ಜ್ ಆಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ವತಃ ಅವರೇ ಮಾಹಿತಿ ನೀಡಿದ್ದು, `ಇಂದು ಬೆಳಗಿನ ಜಾವದಲ್ಲಿ ನನಗೆ ಸ್ವಲ್ಪ ಸುಸ್ತು ಹಾಗೂ ಎದೆ ನೋವು ಕಾಣಿಸಿಕೊಂಡಿತು. ತಕ್ಷಣವೇ ನಾನು ಸಮೀಪವಿರುವ ಜಯದೇವ ಹೃದ್ರೋಗ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಪಟ್ಟೆ. ಬೇರೆಲ್ಲಾ ಪರೀಕ್ಷೆಗಳ ಜೊತೆಗೆ ಕೋವಿಡ್ ಟೆಸ್ಟ್ ಕೂಡಾ ಮಾಡಿದ್ದು, ವರದಿಯಲ್ಲಿ ನೆಗೆಟಿವ್ ಎಂದು ಬಂದಿರುತ್ತದೆ. ನಾನು ತಾಯಿ ಚಾಮುಂಡೇಶ್ವರಿ ದಯೆಯಿಂದ ಆರೋಗ್ಯವಾಗಿದ್ದೇನೆ. ವೈದ್ಯರ ಸಲಹೆ ಮೇರೆಗೆ ಮೂರು ದಿನಗಳ ಕಾಲ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.

 

 

Translate »