ಕೃಷಿ, ಅರಣ್ಯ ಸೇರಿ ವಿವಿಧ ಇಲಾಖೆಯ 2000 ಹುದ್ದೆರದ್ದು
News

ಕೃಷಿ, ಅರಣ್ಯ ಸೇರಿ ವಿವಿಧ ಇಲಾಖೆಯ 2000 ಹುದ್ದೆರದ್ದು

October 12, 2022

ಬೆಂಗಳೂರು, ಅ.11(ಕೆಎಂಶಿ)- ಕೃಷಿ ಹಾಗೂ ಅದರ ಉಪ ಇಲಾಖೆಗಳಲ್ಲಿನ 2000 ಹುದ್ದೆಗಳನ್ನು ರದ್ದು ಮಾಡುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಅಷ್ಟೇ ಅಲ್ಲದೆ ಈ ಇಲಾಖೆಯಡಿ ಬರುವ ತಂಬಾಕು ಮಂಡಳಿ ಸೇರಿದಂತೆ ಮೂರು ನಿಗಮ ಗಳನ್ನು ರದ್ದು ಮಾಡಲು ಸಹ ನಿರ್ಧರಿಸಿದೆ.

ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟದ ಉಪ ಸಮಿತಿ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಂಡಿ ರುವುದಲ್ಲದೆ, ಅರಣ್ಯ ಇಲಾಖೆಯಲ್ಲಿ ಹಿರಿಯ ಹುದ್ದೆಗಳನ್ನು ರದ್ದುಗೊಳಿಸಿ ಕೆಳಹಂತದಲ್ಲಿ ಹೆಚ್ಚು ನೇಮಕಾತಿ ಮಾಡಿ ಕೊಳ್ಳಲು ಸಭೆ ತೀರ್ಮಾನಿಸಿದೆ.
ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯಲ್ಲಿ ಅನಗತ್ಯವಾಗಿರುವ 2000 ಹುದ್ದೆಗಳನ್ನು ರದ್ದುಗೊಳಿಸುವುದು sಸೇರಿ ದಂತೆ ಸರ್ಕಾರದ ಬೊಕ್ಕಸಕ್ಕೆ ಹೊರೆ ಯಾಗಿರುವ ಇದೇ ಇಲಾಖೆಯಡಿ ಬರುವ ಮೂರು ನಿಗಮ ಗಳನ್ನು ರದ್ದುಮಾಡುವ ತೀರ್ಮಾ ನಕ್ಕೂ ಬಂದಿದೆ. ಅಷ್ಟೇ ಅಲ್ಲದೆ, ಜಿಲ್ಲೆಗೊಂದು ಪ್ರಾಧಿಕಾರ, ಇಲಾಖೆಗೊಂದು ನಿಗಮ ಸೀಮಿತಗೊಳಿಸಿ ಇನ್ನುಳಿದ ಎಲ್ಲಾ ನಿಗಮ ಹಾಗೂ ಮಂಡಳಿಗಳನ್ನು ರದ್ದು ಮಾಡಲು ನಿರ್ಧರಿಸಿದೆ. ರಾಜ್ಯದ ಬೊಕ್ಕಸಕ್ಕೆ ಅನಗತ್ಯ ನಿಗಮ ಮಂಡಳಿಗಳಿಂದ ಹೊರೆ ಹೆಚ್ಚಾ ಗಿದ್ದು, ಇಂತಹವುಗಳನ್ನು ರದ್ದು ಮಾಡು ವುದಲ್ಲದೆ, ವಿವಿಧ ಇಲಾಖೆಗಳಲ್ಲಿ ಅನಗತ್ಯ ವಾಗಿರುವ ಸಿಬ್ಬಂದಿಗಳನ್ನು ಕಡಿತಗೊಳಿ ಸಲು ನಿರ್ಧರಿಸಿದೆ. ಇನ್ನು ಮುಂದೆ ಪ್ರತಿ ಇಲಾಖೆಯ ಬಗ್ಗೆ ವರದಿ ತರಿಸಿಕೊಂಡು ಹುದ್ದೆಗಳನ್ನು ಕಡಿತ ಮಾಡುವ ತೀರ್ಮಾ ನಕ್ಕೂ ಉಪ ಸಮಿತಿ ಬಂದಿದೆ.

ಅರಣ್ಯ ಇಲಾಖೆಯಲ್ಲಿ ಕೆಳ ಹಂತದ ಹುದ್ದೆಗಳಿಗಿಂತ ಮೇಲಿನ ಹಂತದ ಹುದ್ದೆ ಗಳು ಹೆಚ್ಚಿದ್ದು, ಇವು ಇಲಾಖೆಗೆ ಭಾರ ವಾಗಿವೆ. ಕೆಲವು ಹಿರಿಯ ಅಧಿಕಾರಿಗಳಿಗೆ ಕಾರ್ಯನಿರ್ವಹಿಸಲು ಸ್ಥಳಾವಕಾಶವಿಲ್ಲದೆ ಅನ್ಯ ಇಲಾಖೆಗಳಲ್ಲಿ ಪರಭಾರೆ ಮೇಲೆ ಕೆಲಸ ಮಾಡುತ್ತಿದ್ದಾರೆ. ಇಂತಹ ಅನಗತ್ಯ ಹುದ್ದೆಗಳನ್ನು ತಕ್ಷಣದಿಂದ ರದ್ದುಗೊಳಿಸಿ, ಅರಣ್ಯ ಉಳಿಸಲು ಹಾಗೂ ಬೆಳೆಸಲು ಅಗತ್ಯವಾದ ಸಿಬ್ಬಂದಿಗಳನ್ನು ಮಾತ್ರ ನೇಮಕ ಮಾಡಲು ತೀರ್ಮಾನಿಸಿದೆ. ರಾಜ್ಯದಲ್ಲಿ ಒಟ್ಟಾರೆ ಶೇ.60ಕ್ಕೂ ಹೆಚ್ಚು ನಿಗಮ-ಮಂಡಳಿ ಗಳನ್ನು ರದ್ದು ಮಾಡುವುದು, ವಿವಿಧ ಇಲಾಖೆ ಗಳಲ್ಲಿ ಅನಗತ್ಯವಾಗಿರುವ ಸಾವಿರಾರು ಹುದ್ದೆಗಳನ್ನು ಶಾಶ್ವತವಾಗಿ ರದ್ದು ಮಾಡಲು ಉಪ ಸಮಿತಿ ತೀರ್ಮಾನಿಸಿದೆ. ಮಲೆನಾಡು ಭಾಗದ ಪ್ರದೇಶದಲ್ಲಿ ಅರಣ್ಯದಲ್ಲಿ ಒತ್ತು ವರಿ ಮಾಡಿಕೊಂಡು ಉಳುಮೆ ಮಾಡು ತ್ತಿರುವ ಸಣ್ಣ ರೈತರಿಗೆ ಹಕ್ಕುಪತ್ರಗಳನ್ನು ನೀಡಲು ಸಭೆ ತೀರ್ಮಾನಿಸಿದೆ.

Translate »