ಶಾಲೆ ತೆರೆವ ವಿಚಾರದಲ್ಲಿ ಅವಸರ ಸಲ್ಲ, ಜುಲೈವರೆಗೂ ಕಾದು ನೋಡಿ
ಮೈಸೂರು

ಶಾಲೆ ತೆರೆವ ವಿಚಾರದಲ್ಲಿ ಅವಸರ ಸಲ್ಲ, ಜುಲೈವರೆಗೂ ಕಾದು ನೋಡಿ

May 18, 2020

ಮೈಸೂರು, ಮೇ 17(ಪಿಎಂ)- ಕೊರೊನಾ ಪೂರ್ಣ ನಿವಾರಣೆಯಾಗದಿರುವುದರಿಂದ ಶಾಲೆ ಪುನಾರಂಭ ವಿಚಾರದಲ್ಲಿ ಸರ್ಕಾರ ಅವಸರ ಮಾಡಬಾರದು. ಜುಲೈವರೆಗೂ ಕಾದು ನೋಡುವುದು ಸೂಕ್ತ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಎ.ಹೆಚ್.ವಿಶ್ವನಾಥ್ ಸಲಹೆ ನೀಡಿದರು.

ಮೈಸೂರಿನ ಜಲದರ್ಶಿನಿ ಅತಿಥಿಗೃಹ ದಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ನಂತರದಲ್ಲಿ ಶಿಕ್ಷಣದ ವಿಚಾರ ಪರಿಗಣಿಸ ಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ. ಹೀಗಾಗಿ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಸದ್ಯ ಶಾಲೆಗಳ ಪುನಾರಂಭ ಸೂಕ್ತವಲ್ಲ ಎಂದರು.

ಶಾಲೆ ಆರಂಭಿಸಿದರೆ ಪ್ರತಿ ಮಗುವಿಗೂ ಕೋವಿಡ್-19 ಪರೀಕ್ಷೆ ನಡೆಸಬೇಕಾದ ಸ್ಥಿತಿ ಎದುರಾಗಬಹುದು. ಮಕ್ಕಳು ಒಂದೇ ಕಡೆ ನಿಲ್ಲುವ ಸ್ವಭಾವದವರಲ್ಲ. ಅವರಿಗೆ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗು ವುದಿಲ್ಲ. ಒಂದು ಮಗುವಿಗೆ ಸೋಂಕು ತಗು ಲಿದರೆ ಇಡೀ ಶಾಲೆಯನ್ನು ಕ್ವಾರಂಟೈನ್ ಮಾಡಬೇಕಾಗುತ್ತದೆ. ಹೀಗಾಗಿ ಜುಲೈ ವರೆಗೂ ಕಾದು ನೋಡುವುದು ಸೂಕ್ತ ಎಂದು ಗಮನ ಸೆಳೆದರು.

ವರ್ಷದ 365 ದಿನಗಳಲ್ಲಿ 222 ದಿನ ಶಾಲೆ ನಡೆಯುತ್ತವೆ. 200 ದಿನ ನಡೆದರೂ ತೊಂದರೆ ಇಲ್ಲ. ಈ ಬಾರಿ ದಸರಾ, ಕ್ರಿಸ್ ಮಸ್ ರಜೆ ಮೊಟಕು, ವಿವಿಧ ಜಯಂತಿ ಗಳ ರಜೆ ರದ್ದು ಕ್ರಮ ಕೈಗೊಂಡರೆ ಶೈಕ್ಷ ಣಿಕ ವರ್ಷ ತಡವಾಗಿ ಆರಂಭವಾದರೂ ನಿಗದಿತ ಪಠ್ಯ ಪೂರ್ಣಗೊಳಿಸಲು ತೊಂದರೆ ಯಾಗದು ಎಂದು ಸಲಹೆ ನೀಡಿದರು. ಇದು ಮಕ್ಕಳ, ದೇಶದ ಭವಿಷ್ಯದ ವಿಚಾರ. ಏಕಾಏಕಿ ತೀರ್ಮಾನ ಸಲ್ಲ. ತಜ್ಞರ ಜತೆ ಚರ್ಚಿಸಿ ಸೂಕ್ತ ಹೆಜ್ಜೆ ಇಡಬೇಕು ಎಂದು ವಿಶ್ವನಾಥ್ ಸಲಹೆ ನೀಡಿದರು.

ಪತ್ರ ಬರೆಯುವೆ: ನಾನು ಶಿಕ್ಷಣ ಸಚಿವ ನಾಗಿ ಅನುಭವ ಹೊಂದಿದ್ದೇನೆ. ಶಿಕ್ಷಣ ಇಲಾಖೆ ಮಾನವ ಸಂಪನ್ಮೂಲ ನಿರ್ಣಯಿ ಸುತ್ತದೆ. ಪ್ರಸ್ತುತ ಕೊರೊನಾ ಜೊತೆಗೆ ಶಿಕ್ಷಣ ಹೇಗೆ ಎಂಬುದು ಮುಖ್ಯ. ಮಾಧ್ಯಮಗಳು ಕೂಡ ಮಕ್ಕಳ ಸಲುವಾಗಿ ಕಾರ್ಯಕ್ರಮ ರೂಪಿಸಬೇಕಿದೆ. ಸರ್ಕಾರ, ಪೋಷಕರು, ಶಿಕ್ಷಣ ತಜ್ಞರ ನಡುವೆ ಚೆರ್ಚೆ ಆಗಬೇಕು. `ಕೊರೊನಾ ಮತ್ತು ಶಾಲಾ ಶಿಕ್ಷಣ ಹೇಗಿರಬೇಕು’ ಎಂಬ ಬಗ್ಗೆ ಪ್ರಧಾನಿಗಳು ಮತ್ತು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತಿದ್ದೇನೆ ಎಂದು ವಿಶ್ವನಾಥ್ ತಿಳಿಸಿದರು.

ಶಿಕ್ಷಕರ ಕೊರತೆ ಹಿನ್ನೆಲೆಯಲ್ಲಿ ಶಾಲೆ ಗಳನ್ನು ಪಾಳಿಯಲ್ಲಿ ನಡೆಸುವುದು ಕಷ್ಟ. ಖಾಸಗಿ ಶಾಲೆಯಲ್ಲಿ ನಾಲ್ಕೈದು ಸಾವಿರ ರೂ. ವೇತನಕ್ಕೆ ಶಿಕ್ಷಕರು ಪಾಳಿ ಪದ್ಧತಿ ಯಡಿ 12 ಗಂಟೆ ಕಾಲ ಪಾಠ ಮಾಡು ವುದು ನ್ಯಾಯವೇ? ಎಂದು ಪ್ರಶ್ನಿಸಿದರು. ಕಾಲೇಜು ಪ್ರಾರಂಭಿಸಬಹುದು. ಆದರೆ ಶಾಲಾ ಶಿಕ್ಷಣ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆ ಇಡಬೇಕು ಎಂದು ಪ್ರಶ್ನೆಗಳಿಗೆ ವಿಶ್ವನಾಥ್ ಉತ್ತರಿಸಿದರು. ಬಿಜೆಪಿ ಮೈಸೂರು ನಗರಾ ಧ್ಯಕ್ಷ ಶ್ರೀವತ್ಸ, ಗ್ರಾಮಾಂತರÀ ಅಧ್ಯಕ್ಷ ಮಹೇಂದ್ರ, ಮಾಜಿ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ ಮತ್ತಿತರರು ಪತ್ರಿಕಾಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.

Translate »