ಅಸಮರ್ಪಕ ಬಳಕೆ, ಪೂರೈಕೆಯಿಂದ  ನೀರಿನ ಕೊರತೆ ಬಾಧಿಸುತ್ತಿದೆ
ಮೈಸೂರು

ಅಸಮರ್ಪಕ ಬಳಕೆ, ಪೂರೈಕೆಯಿಂದ ನೀರಿನ ಕೊರತೆ ಬಾಧಿಸುತ್ತಿದೆ

March 25, 2019

ಮೈಸೂರು: ನೀರಿನ ಅಸಮ ರ್ಪಕ ಬಳಕೆ ಮತ್ತು ಪೂರೈಕೆಯ ಸಮಸ್ಯೆ ಗಳಿಂದ ಅದರ ಕೊರತೆ ಕಾಡುತ್ತಿದೆಯೇ ಹೊರತು ನೀರಿನ ಸಂಪನ್ಮೂಲದಲ್ಲಿ ಕೊರತೆ ಇಲ್ಲ ಎಂದು ಆಹಾರ ರಕ್ಷಣಾ ಸಂಶೋಧನಾ ಪ್ರಯೋಗಾಲ ಯದ (ಡಿಎಫ್‍ಆರ್‍ಎಲ್) ನಿವೃತ್ತ ನಿರ್ದೇಶಕ ಡಾ.ಕೆ.ಎಸ್.ಮಂಜ ಪ್ರತಿಪಾದಿಸಿದರು.

ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಔಷಧ ಮಹಾವಿದ್ಯಾ ಲಯದ ವತಿಯಿಂದ ವಿದ್ಯಾಲಯದ ಪೆÇ್ರ.ಚಿನ್ನ ಸ್ವಾಮಿಶೆಟ್ಟಿ ಸಭಾಂಗಣದಲ್ಲಿ `ವಿಶ್ವ ಜಲ ದಿನ’ದ ಅಂಗವಾಗಿ ಸೋಮವಾರ ಹಮ್ಮಿ ಕೊಂಡಿದ್ದ `ಆರೋಗ್ಯ ಮತ್ತು ಪರಿಸರ ವ್ಯವಸ್ಥೆಯ ಮೇಲೆ ನೀರಿನ ಮಾಲಿನ್ಯದ ಪರಿ ಣಾಮ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾವ ಕಾಲಘಟ್ಟದಲ್ಲಿಯೂ ಭೂಮಿಯಲ್ಲಿ ನೀರಿನ ಕೊರತೆ ಕಂಡುಬರಲಿಲ್ಲ. ಆದರೆ ಸಮ ರ್ಪಕ ಬಳಕೆಗೆ ಆದ್ಯತೆ ನೀಡದಿದ್ದಲ್ಲಿ ಹಾಗೂ ಪೂರೈಕೆಯ ತೊಡಕುಗಳಿಂದ ಕೊರತೆ ಕಾಣಿಸಿಕೊಳ್ಳುತ್ತದೆ. ಇಂದು ತಂತ್ರಜ್ಞಾನ ವ್ಯವಸ್ಥೆ ಮೂಲಕ ನೀರನ್ನು ಶುದ್ಧೀಕರಿಸಿ ಸೇವನೆ ಮಾಡುವುದು ಸಾಮಾನ್ಯ ಸಂಗತಿ. ಆದರೆ ನೀರನ್ನು ಶುದ್ಧೀಕರಿಸಿ ಕುಡಿಯಲು ನೂರು ವರ್ಷಗಳಿಗೂ ಹಿಂದೆಯೇ ಅನೇಕ ತಂತ್ರಜ್ಞಾನ ಬಳಕೆಯಲ್ಲಿತ್ತು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾರದಾ ವಿಲಾಸ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಹೆಚ್.ಎಲ್.ಶ್ರೀನಾಥ್ ಮಾತನಾಡಿ, ಮೈಸೂರು ವ್ಯವಸ್ಥಿತವಾದ ನೀರು ಸರಬರಾಜು ಮಾರ್ಗ ಹೊಂದಿದ್ದ ದೇಶದ ಮೊಟ್ಟ ಮೊದಲ ನಗರ. ಆರೋಗ್ಯಯುಕ್ತ ಬದುಕಿಗೆ ಶುದ್ಧ ನೀರು ಮಹತ್ವದ ಪಾತ್ರ ವಹಿಸಲಿದ್ದು, ಇದೇ ಕಾರ ಣಕ್ಕೆ ಇಂದು ಸರ್ಕಾರಗಳು ಗ್ರಾಮೀಣ ಪ್ರದೇಶ ಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಗಳನ್ನು ಸ್ಥಾಪನೆ ಮಾಡುತ್ತಿವೆ. ಕಲುಷಿತ ನೀರು ಕೇವಲ ಮಾನವನ ಆರೋಗ್ಯಕ್ಕೆ ಮಾತ್ರವಲ್ಲದೆ, ಪರಿಸರದ ಮೇಲೂ ದುಷ್ಪರಿಣಾಮ ಉಂಟು ಮಾಡುತ್ತದೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಹನುಮಂತಾ ಚಾರ್ ಜೋಶಿ, ಕ್ರಿಸ್ಟಲ್ ಸ್ಪ್ರಿಂಗ್ ವಾಟರ್ ಟೆಕ್ನಾಲಜಿಯ ವ್ಯವಸ್ಥಾಪಕ ನಿರ್ದೇಶಕ ಕೆ.ಜಿ.ಗುರುರಾಜ್ ಮತ್ತಿತರರು ಹಾಜರಿದ್ದರು.

Translate »