ಕನ್ನಡ ನಾಡಿನಲ್ಲಿ ಹೆಚ್ಚುತ್ತಿರುವ ಇಂಗ್ಲಿಷ್ ವ್ಯಾಮೋಹ
ಮೈಸೂರು

ಕನ್ನಡ ನಾಡಿನಲ್ಲಿ ಹೆಚ್ಚುತ್ತಿರುವ ಇಂಗ್ಲಿಷ್ ವ್ಯಾಮೋಹ

March 25, 2019

ಮೈಸೂರು: ಕನ್ನಡ ನಾಡಿನಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚುತ್ತಿದ್ದು, ಇದು ದೊಡ್ಡ ದುರಂತ ಎಂದು ಸಾಹಿತಿ ಡಾ.ಲತಾ ರಾಜಶೇಖರ್ ವಿಷಾದ ವ್ಯಕ್ತಪಡಿಸಿದರು.

ಮೈಸೂರಿನ ಜೆಎಲ್‍ಬಿ ರಸ್ತೆಯ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣ ದಲ್ಲಿ ಹೊಯ್ಸಳ ಕನ್ನಡ ಸಂಘ ಹಾಗೂ ಸವಿಗನ್ನಡ ಪತ್ರಿಕಾ ಬಳಗದ ಜಂಟಿ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಂಗಳಾ ಮುದ್ದುಮಾದಪ್ಪ ಅವರ `ಹತ್ತು ನಾಟಕಗಳು’ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಭಾಷೆ, ಸಾಹಿತ್ಯ, ಸಂಸ್ಕøತಿ ಹಾಗೂ ಪರಂಪರೆ ಸಂರಕ್ಷಣೆ ಅತ್ಯಗತ್ಯ. ನಮ್ಮ ದೇಶದಲ್ಲಿ ವೈವಿಧ್ಯಮಯವಾದ ಭಾಷೆಗಳಿದ್ದು, ದೇವರ ಭಾಷೆಯೆಂದೇ ಪೂಜ್ಯ ಭಾವನೆ ಹೊಂದಿರುವ ಸಂಸ್ಕøತ ಇಂದು ನಮ್ಮಲ್ಲಿ ಕಡೆಗಣಿಸಲ್ಪಟ್ಟಿದೆ. ಆದರೆ ವಿದೇಶಗಳಲ್ಲಿ ಸಂಸ್ಕøತ ಕಲಿಕೆ ಹೆಚ್ಚುತ್ತಿದೆ. ಕನ್ನಡಿಗರಲ್ಲಿ ಇಂಗ್ಲಿಷ್ ಮೇಲೆ ವ್ಯಾಮೋಹ ಹೆಚ್ಚಾಗುತ್ತಿದ್ದು, ನೆಲದ ಭಾಷೆಯಾದ ಕನ್ನಡವನ್ನೇ ಮರೆಯುವಂತಾಗಿದ್ದಾರೆ ಎಂದು ವಿಷಾದಿಸಿದರು.
ಕೃತಿ ಬಿಡುಗಡೆಗೊಳಿಸಿದ ಹಿರಿಯ ರಂಗಕರ್ಮಿ ಡಾ.ಹೆಚ್.ಕೆ.ರಾಮನಾಥ್ ಮಾತ ನಾಡಿ, ಸಾಮಾಜಿಕ ಸಂದೇಶ ಸಾರುವ ಕೃತಿ ಇದಾಗಿದ್ದು, ಮಕ್ಕಳನ್ನು ಕೇಂದ್ರೀಕರಿಸಿ ಚಿಕ್ಕ ಹಾಗೂ ಚೊಕ್ಕವಾಗಿ ನಾಟಕಗಳನ್ನು ಕೃತಿಯಲ್ಲಿ ರಚಿಸಲಾಗಿದೆ. ಮಕ್ಕಳ ಅಭಿನಯಕ್ಕೆ ವೇದಿಕೆ ಕಲ್ಪಿಸುವ ಅದ್ಭುತ ನಾಟಕ ಕೃತಿ ಇದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಂಗಕರ್ಮಿ ರಾಜಶೇಖರ ಕದಂಬ ಕೃತಿ ಕುರಿತು ಮಾತನಾಡಿದರು. ಹೊಯ್ಸಳ ಕನ್ನಡ ಸಂಘದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕೃಷಿ ವಿe್ಞÁನಿ ಡಾ.ವಸಂತಕುಮಾರ್ ತಿಮಕಾಪುರ, ಸಂಶೋಧಕ ಡಾ.ಮಹೇಶ್ ಬಿಲ್ವ, ಸಾಹಿತಿ ಪೆÇ್ರ.ಕೆ.ಭೈರವಮೂರ್ತಿ, ಕೃತಿ ಕರ್ತೃ ಮಂಗಳಾ ಮುದ್ದುಮಾದಪ್ಪ, ಪತ್ರಕರ್ತ ರಂಗನಾಥ ಮೈಸೂರು ಮತ್ತಿತರರು ಹಾಜರಿದ್ದರು.

Translate »