ಸದಭಿರುಚಿ ಸಿನಿಮಾ ಸಿಕ್ಕರೆ ಮಾತ್ರ ರಿಮೇಕ್‍ನಲ್ಲಿ ನಟನೆ: ಶಿವರಾಜ್ ಕುಮಾರ್
ಮೈಸೂರು

ಸದಭಿರುಚಿ ಸಿನಿಮಾ ಸಿಕ್ಕರೆ ಮಾತ್ರ ರಿಮೇಕ್‍ನಲ್ಲಿ ನಟನೆ: ಶಿವರಾಜ್ ಕುಮಾರ್

March 25, 2019

ಮೈಸೂರು: ಒಳ್ಳೆಯ ಸಿನಿಮಾ ಸಿಕ್ಕರೆ ರಿಮೇಕ್‍ನಲ್ಲಿ ನಟಿಸುತ್ತೇನೆ. ಆದರೆ, ಅದನ್ನೇ ಉದ್ಯೋಗ ಮಾಡಿಕೊಳ್ಳುವುದಿಲ್ಲ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹೇಳಿದರು.

ಖಾಸಗಿ ಹೋಟೆಲ್‍ನಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸಿನಿಮಾದಲ್ಲಿನ ಭಾವ ನಾತ್ಮಕ ಸನ್ನಿವೇಶಗಳು ಕವಚ ಸಿನಿಮಾಕ್ಕೆ ಒಪ್ಪುವಂತೆ ಮಾಡಿದವು. ಹಾಗಾಗಿಯೇ ರಿಮೇಕ್ ಸಿನಿಮಾಗಳಲ್ಲಿ ಮಾಡುವುದಿಲ್ಲ ವೆಂಬ ನನ್ನ ನಿಯಮ ಬ್ರೇಕ್ ಮಾಡಿದೆ ಎಂದರು.

ಕವಚ ಚಿತ್ರದಲ್ಲಿ ನನ್ನದು ಕುರುಡನ ಪಾತ್ರ. ಶಿಕ್ಷಕರೊಬ್ಬರು ಸ್ಟಿಕ್ ಹೇಗೆ ಹಿಡಿದು ಕೊಳ್ಳಬೇಕು, ಕಣ್ಣನ್ನು ಹೇಗೆ ಆಡಿಸಬೇಕು ಎಂಬುದರ ಬಗ್ಗೆ ಹೇಳಿಕೊಟ್ಟಿದ್ದರು. ಕುರು ಡನ ಹಾಗೆ ಅಭಿನಯಿಸುವಾಗ ತಲೆ ನೋವು ಬಂತು ಎಂದು ಅನುಭÀವ ಹಂಚಿ ಕೊಂಡ ಅವರು, ನಾವು ಹಲವು ವರ್ಷ ಗಳಿಂದ ಸಿನಿಮಾದಲ್ಲಿದ್ದು ಬಹಳಷ್ಟು ಬೆಳೆದಿದ್ದೇವೆಂದು ತಿಳಿದುಕೊಂಡಿರುತ್ತೇವೆ. ಆದರೆ, ಕಲಿಯಬೇಕಾದ್ದು ಸಾಕಷ್ಟಿದೆ. ನಾನು ಇಂದಿಗೂ ಬೇರೆಯವರಿಂದ ಕಲಿ ಯುತ್ತಿದ್ದೇನೆ. ಕವಚ ಚಿತ್ರದಲ್ಲಿ ಬಾಲ ನಟಿಯಾಗಿ ಅಭಿನಯಿಸಿರುವ ಮೀನಾಕ್ಷಿ ಎಂಬ ಬಾಲಕಿಯ ಸಹಜ ಅಭಿನಯ ನೋಡಿ ಸಾಕಷ್ಟು ಕಲಿತಿz್ದÉೀನೆ. ಸಿನಿಮಾದಲ್ಲಿ ಎಲ್ಲರೂ ಡಾ.ರಾಜಕುಮಾರ್, ಅಮಿತಾಬ್ ಬಚ್ಚನ್, ರಜನಿಕಾಂತ್ ಆಗಲು ಸಾಧ್ಯ ವಿಲ್ಲ ಎಂದರು. ಕವಚ ಸಿನಿಮಾ 2018ರ ಡಿಸೆಂಬರ್‍ನಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದ ಜನವರಿ, ಫೆಬ್ರವರಿ, ಮಾರ್ಚ್ ಎಂದೆಲ್ಲ ಆಗಿ, ಏ.5ರಂದು ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ನಟಿ ಕೃತಿಕಾ ಜಯರಾಂ, ಇಶಾ ಕೋಪಿಕರ್, ರವಿಕಾಳೆ, ವಶಿಷ್ಠ, ತಬಲ ನಾಣಿ, ಬಾಲ ನಟಿಯಾಗಿ ಮೀನಾಕ್ಷಿ ಸೇರಿ ದಂತೆ ಮತ್ತಿತರರು ಅಭಿನಯಿಸಿದ್ದು, ಎಲ್ಲಾ ಪಾತ್ರಗಳು ಚಿಕ್ಕದಾಗಿದ್ದರೂ ಅಗತ್ಯವೆನಿ ಸಿದೆ ಎಂದರು. ಮೈಸೂರು ಎಂದಾಕ್ಷಣ ಜನುಮದಜೋಡಿ, ಸಿಂಹದಮರಿ ಸೇರಿ ದಂತೆ ಸಾಕಷ್ಟು ಸಿನಿಮಾಗಳು ನೆನಪಿಗೆ ಬರುತ್ತವೆ.

ಇಂದು ತಾಯಿ ಚಾಮುಂಡೇ ಶ್ವರಿ ಆಶೀರ್ವಾದ ಪಡೆದು ಇಲ್ಲಿಂದಲೇ ಚಿತ್ರದ ಪ್ರಚಾರ ಆರಂಭಿಸಿದ್ದೇವೆ. ಈ ಚಿತ್ರದಲ್ಲಿ ನಾನು ಮೊದಲ ಬಾರಿಗೆ ಅಂಧನ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಅಂಧರÀ ಬದುಕು ಎಷ್ಟು ಕಷ್ಟ ಎಂಬು ದನ್ನು ಸಿನಿಮಾದಲ್ಲಿ ಅರಿತಿz್ದÉೀನೆ. ಈ ನಟನೆ ಬಹಳ ಖುಷಿ ತಂದಿದೆ. ಎಲ್ಲಾ ಕಲಾವಿದರೂ ಅದ್ಭುತವಾಗಿ ನಟಿಸಿದ್ದಾರೆ. ಟೆಕ್ನಿಕಲ್ ಸಮಸ್ಯೆಯಿಂದ ಚಿತ್ರ ಸ್ವಲ್ಪ ನಿಧಾನವಾಗಿ ತೆರೆಕಂಡರೂ ಒಳ್ಳೆಯ ಸಿನಿಮಾ ಇದಾಗಿದೆ ಎಂದರು.

ನಮ್ಮ ತಾಯಿ ನೋಡಿಕೊಳ್ಳುತ್ತಿದ್ದ ಮೈಸೂರು ಶಕ್ತಿಧಾಮದ ಕೆಲಸವನ್ನು ನನ್ನ ಪತ್ನಿ ವಹಿಸಿಕೊಂಡಿದ್ದಾರೆ. ಹಾಗಾಗಿ ನಾನು ಅವರೊಂದಿಗೆ ಬರುತ್ತೇನೆ. ಇಲ್ಲಿನ ಹನುಮಂತು ಪಲಾವ್, ದೋಸೆಯನ್ನು ಮರೆಯಲು ಸಾಧ್ಯವಿಲ್ಲ ಎಂದರು.

ತಮ್ಮ ಕಷ್ಟಕ್ಕೆ ನಟ ಶಿವಣ್ಣ ಸೋದರರು ಸ್ಪಂದಿಸುತ್ತಿಲ್ಲ ಎಂಬ ನಟಿ ವಿಜಯಲಕ್ಷ್ಮಿ ಹೇಳಿಕೆಗೆ ಶಿವರಾಜ್ ಕುಮಾರ್ ಪ್ರತಿಕ್ರಿ ಯಿಸಿ, ನಾನು ವಿಜಯಲಕ್ಷ್ಮಿ ಒಬ್ಬರಿಗೇ ಸಹಾಯ ಮಾಡುತ್ತಾ ಕೂರಲು ಸಾಧ್ಯ ವಿಲ್ಲ. ಎಲ್ಲರಿಗೂ ಸಹಾಯ ಮಾಡುತ್ತಿ ರುತ್ತೇನೆ. ಒಂದು ಕೈಯಲ್ಲಿ ಮಾಡಿದ ಸಹಾಯ ಮತ್ತೊಂದು ಕೈಗೆ ಗೊತ್ತಾಗದ ರೀತಿ ಇರಬೇಕು. ಎಲ್ಲರಿಗೂ ಕಷ್ಟ ಬರುತ್ತೆ. ಎಲ್ಲಾ ಇದ್ದು ಬೇಡೋದು ಸರಿಯಲ್ಲ. ಮೊದಲು ಅವರೇ ಸಮಸ್ಯೆಯಿಂದ ಹೊರ ಬರಲು ಪ್ರಯತ್ನಿಸಬೇಕು, ಅನಿವಾರ್ಯ ವಾಗಿ ಬೇಡಿದಾಗ ಕೆಲವರಿಗೆ ಕೊಡಬೇಕಾ ಗುತ್ತೆ. ಚಾಮುಂಡಿ ಬೆಟ್ಟದಲ್ಲಿ ಕುಂಟನಿಗೂ 2 ಸಾವಿರ ಸಹಾಯ ಮಾಡಿದೆ. ಎಷ್ಟೋ ಹೆಣ್ಣುಮಕ್ಕಳು ಗಾರ್ಮೆಂಟ್ಸ್‍ನಲ್ಲಿ ದುಡಿದು ಜೀವನ ಸಾಗಿಸುತ್ತಿದ್ದಾರೆ. ಅವರನ್ನು ನೋಡಿದಾಗ ಹೆಮ್ಮೆ ಅನ್ನಿಸುತ್ತೆ. ಕೈ ಮುಗಿಯಬೇಕು ಅನ್ನಿಸುತ್ತೆ ಎಂದರು.ಖಳನಟ ವಸಿಷ್ಠ ಸಿಂಹ, ನಟಿ ಕೃತಿಕ, ಸಿನಿಮಾ ನಿರ್ದೇಶಕ ಜಿವಿಆರ್ ವಾಸು ಉಪಸ್ಥಿತರಿದ್ದರು.

Translate »