ಕಲೆಯಿಂದ ಸೃಜನಶೀಲತೆ ಸಾಧ್ಯ: ಆರ್.ಸಿ.ರಾಜಲಕ್ಷ್ಮಿ
ಮೈಸೂರು

ಕಲೆಯಿಂದ ಸೃಜನಶೀಲತೆ ಸಾಧ್ಯ: ಆರ್.ಸಿ.ರಾಜಲಕ್ಷ್ಮಿ

March 25, 2019

ಮೈಸೂರು: ಜೀವನದ ಒಂದು ಅವಿಭಾಜ್ಯ ಅಂಗವಾ ಗಿರುವ ಕಲೆ ಮಾನವನ ಸೃಜನಶೀಲ ಚಟುವಟಿಕೆಗೆ ನಾಂದಿ ಹಾಡುತ್ತಿದೆ ಎಂದು ವಿಜಯ ಪ್ರತಿಷ್ಠಾನದ ಅಧ್ಯಕ್ಷೆ, ಗಾಯಕಿ ಆರ್.ಸಿ.ರಾಜಲಕ್ಷ್ಮಿ ಅಭಿಪ್ರಾಯಪಟ್ಟಿದ್ದಾರೆ.

ಮಧುರ ಜ್ಯೋತಿ ಕಲಾ ಸಂಘದ 8ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉದ್ಯೋಗ ಸೇರಿದಂತೆ ವಿವಿಧ ಚಟುವಟಿಕೆ ಯಿಂದ ಸದಾ ಒತ್ತಡದಲ್ಲಿ ಸಿಲುಕಿರುವ ಮನುಷ್ಯರು ಮನೋರಂಜನೆಗಾಗಿ ಸಂಗೀತ ಸೇರಿದಂತೆ ವಿವಿಧ ಸಾಂಸ್ಕøತಿಕ ಚಟು ವಟಿಕೆಗಳಲ್ಲಿ ಭಾಗಿಯಾಗುವ ಅವಶ್ಯಕತೆ ಇದೆ. ಸಂಗೀತ ಆಲಿಸುವುದರಿಂದ ಮನಸ್ಸಿಗೆ ಮುದ ನೀಡುವುದರೊಂದಿಗೆ ಚೈತನ್ಯ ತುಂಬಲು ಸಹಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪ್ರಕಾರಗಳ ಕಲೆಯನ್ನು ಆರಾಧಿಸುವುದರೊಂದಿಗೆ ಅವುಗಳ ಅಭಿವೃದ್ಧಿಗೆ ಕೈಜೋಡಿಸುವಂತೆ ಅವರು ಮನವಿ ಮಾಡಿದರು.

ಕಲಾತ್ಮಕ ಜೀವನ ನಡೆಸುವುದು ಒಂದು ವರವಾಗಿದೆ. ಅದು ಇಂದು ಕಣ್ಮರೆ ಯಾಗುತ್ತಿರುವುದು ದುಃಖದ ಸಂಗತಿ. ಪ್ರಸ್ತುತ ಮಕ್ಕಳಲ್ಲಿ ಕಲೆಯನ್ನು ಬೆಳೆಸಲು ಪೋಷಕರು ಶ್ರಮಿಸಬೇಕು. ಮಕ್ಕಳಲ್ಲಿ ಪಾಶ್ಚಾತ್ಯ ಸಂಸ್ಕøತಿ ಮನೆ ಮಾಡುತ್ತಿದ್ದು, ಅದು ಎಳೆಯ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರಿಂದ ಯುವ ಪೀಳಿಗೆ ಯಲ್ಲಿ ಅಭಿರುಚಿ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಲೆಗಳ ಆರಾಧನೆಗೆ ಆದ್ಯತೆ ನೀಡುವಂತೆ ಅವರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಗಾಯಕರಾದ ಸಿ.ವಿಶ್ವ ನಾಥ್, ಮಳವಳ್ಳಿ ಮಹದೇವಸ್ವಾಮಿ, ತಬಲ ವಾದಕ ರಘುನಾಥ್, ಡಾ. ಸ್ನೇಹಶ್ರೀ ಅವರನ್ನು ಸನ್ಮಾನಿಸಲಾಯಿತು. ವಂಗೀಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ, ಸಮಾಜ ಸೇವಕ ಕೆ.ರಘುರಾಂ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇ ಶಕ ಹೆಚ್.ಚನ್ನಪ್ಪ, ಗಾಯಕರಾದ ಶುಭಾ ರಾಘವೇಂದ್ರ, ದಾಕ್ಷಾಯಣಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »