ಕ್ಷಯ ನಿವಾರಣೆಗೆ ಸೂಕ್ತ ಚಿಕಿತ್ಸೆ ಪಡೆಯಿರಿ
ಹಾಸನ

ಕ್ಷಯ ನಿವಾರಣೆಗೆ ಸೂಕ್ತ ಚಿಕಿತ್ಸೆ ಪಡೆಯಿರಿ

March 25, 2019

ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್ ಸಲಹೆ
ಹಾಸನ: ಕ್ಷಯ ರೋಗದ ಬಗ್ಗೆ ಯಾರೂ ಹೆದರಿಕೆ, ಹಿಂಜರಿಕೆ ಪಡುವ ಅಗತ್ಯವಿಲ್ಲ. ಇದೊಂದು ಗುಣಮುಖ ವಾಗಬಲ್ಲ ಖಾಯಿಲೆಯಾಗಿದ್ದು, ಸಕಾಲ ದಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕಿದೆ ಎಂದು ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾ ಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ, ಜಿಲ್ಲಾ ಕ್ಷಯ ವೇದಿಕೆ, ರೋಟರಿ ಕ್ಲಬ್ ಆಫ್ ಮಿಡ್‍ಟೌನ್, ಜಯ ಪ್ರಕಾಶ್ ನಾರಾಯಣ್ ಗ್ರಾಮೀಣಾಭಿ ವೃದ್ಧಿ ಸೇವಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಕ್ಷಯ ರೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

14ರಿಂದ 45 ವರ್ಷ ವಯೋಮಾನ ದವರಲ್ಲಿ ಈ ಖಾಯಿಲೆ ಕಾಣಿಸಿಕೊಳ್ಳು ತ್ತಿದ್ದು, ಈ ಬಗ್ಗೆ ಯಾವುದೇ ಮೂಢ ನಂಬಿಕೆ, ಹಿಂಜರಿಕೆಯಿಲ್ಲದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಪೂರ್ಣವಾಗಿ ದೊರೆ ಯುವ ಉಚಿತ ಚಿಕಿತ್ಸೆ ಪಡೆಯಬೇಕು. ಕ್ಷಯ ರೋಗದ ಬಗ್ಗೆ ವಿಶೇಷ ಕಾಳಜಿ ವಹಿಸುವುದರಿಂದ ರೋಗಮುಕ್ತವಾಗಿರ ಬಹುದು. ಇದರ ಬಗ್ಗೆ ಸುತ್ತ್ತಲಿನ ಜನ ರಿಗೂ ಜಾಗೃತಿ ಮೂಡಿಸುವ ಮೂಲಕ ಕ್ಷಯರೋಗ ಮುಕ್ತ ರಾಷ್ಟ್ರಕ್ಕೆ ಶ್ರಮಿಸಬೇಕಿದೆ ಎಂದು ತಿಳಿಸಿದರು.

ಜಿಲ್ಲಾ ಏಡ್ಸ್ ಮತ್ತು ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಪಿ.ನಾಗೇಶ್ ಆರಾಧ್ಯ ಮಾತನಾಡಿ, ಕ್ಷಯರೋಗದ ಪರೀಕ್ಷೆ ಮತ್ತು ಚಿಕಿತ್ಸೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತವಾಗಿದೆ. ಜಿಲ್ಲೆಯಲ್ಲಿ ಈ ರೋಗ ಲಕ್ಷಣವುಳ್ಳ 24, 995 ಜನರನ್ನು ಪರೀಕ್ಷಿಸಲಾಗಿದ್ದು, 1,635 ಕ್ಷಯರೋಗಿಗಳು ಚಿಕಿತ್ಸೆಯಲ್ಲಿದ್ದು ಅವರಲ್ಲಿ 14 ವರ್ಷ ಒಳಪಟ್ಟ 45 ಮಕ್ಕಳು, 93 ಹೆಚ್.ಐ.ವಿ. ಪೀಡಿತರು ಹಾಗೂ 45 ಔಷಧ ನಿರೋಧಕ ಕ್ಷಯರೋಗಿ ಗಳಿದ್ದಾರೆ ಎಂದು ತಿಳಿಸಿದರು.

ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರತಿ ರೋಗಿಯು ಯಾವುದೇ ಸಾಮಾಜಿಕ ಆರ್ಥಿಕ ಸ್ಥಾನ ಮಾನದಲ್ಲಿದ್ದರೂ ಅವರ ಚಿಕಿತ್ಸಾ ಅವಧಿ ಯಲ್ಲಿ ನಿಕ್ಷಯ್ ಪೊಷಣ್ ಯೋಜನೆ ಯಡಿ ಪೌಷ್ಠಿಕ ಆಹಾರಕ್ಕೆ ಅನುಕೂಲ ವಾಗಲೆಂದು ತಿಂಗಳಿಗೆ 500 ರೂ.ಗಳ ಧನಸಹಾಯ ರೂಪದಲ್ಲಿ ನೇರವಾಗಿ ರೋಗಿಗಳ ಖಾತೆಗೆ ಜಮಾ ಮಾಡಲಾ ಗುವುದು ಎಂದು ಹೇಳಿದರು.

ರೋಟರಿ ಕ್ಲಬ್ ಆಫ್ ಹಾಸನ ಮಿಡ್ ಟೌನ್ ಅಧ್ಯಕ್ಷ ಡಾ.ಸೌಮ್ಯಮಣಿ ಮಾತ ನಾಡಿ, ಯಾವುದೇ ಆಚರಣೆಗಳು ಆ ದಿನಕ್ಕಷ್ಟೇ ಸೀಮಿತವಾಗದೇ ಇಂತಹ ರೋಗಗಳ ನಿಯಂತ್ರಣದಲ್ಲಿ ನಮ್ಮ ಜವಾ ಬ್ದಾರಿ ಏನೆಂಬುದನ್ನು ಅರಿತು ಕೆಲಸ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ.ಕೆ.ಎಂ.ಸತೀಶ್‍ಕುಮಾರ್ ವಹಿಸಿದ್ದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕೆ. ಶಂಕರ್, ಶ್ವಾಸಕೋಶ ವಿಭಾಗದ ಮುಖ್ಯಸ್ಥ ಡಾ.ಪಿ.ಕೆ.ಚನ್ನವೀರಪ್ಪ, ವೈದ್ಯಾ ಧಿಕಾರಿಗಳಾದ ಡಾ.ನಾಗೇಶ್, ಡಾ.ದೀಪ್ತಿ ಇತರರು ಹಾಜರಿದ್ದರು.

ಜಾಥಾಗೆ ಚಾಲನೆ: ವಿಶ್ವ ಕ್ಷಯ ರೋಗ ದಿನಾಚರಣೆ ಅಂಗವಾಗಿ ಹಾಸನ ವೈದ್ಯ ಕೀಯ ಕಾಲೇಜು ಆವರಣದಲ್ಲಿ ಏರ್ಪಡಿಸ ಲಾಗಿದ್ದ ವಿಶ್ವ ಕ್ಷಯ ರೋಗ ಜಾಥಾಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯ್ ಪ್ರಕಾಶ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಜಾಥವು ಜಿಲ್ಲಾಧಿಕಾರಿಯವರ ಕಚೇರಿ ಮುಂಭಾಗದಿಂದ ಹಾದು ಎನ್.ಆರ್. ವೃತ್ತದ ಮೂಲಕ ಹೇಮಾವತಿ ಪ್ರತಿಮೆ ಆವರಣದಿಂದ ಅಂಬೇಡ್ಕರ್ ಭವನ ದವರೆಗೆ ಸಾಗಿತು. ಮೆರವಣಿಗೆಯಲ್ಲಿ ಕ್ಷಯರೋಗದ ನಿಯಂತ್ರಣಾ ಕುರಿತು ಘೋಷಣೆಗಳನ್ನು ಕೂಗುವುದರೊಂದಿಗೆ ಮತ್ತು ಸಾರ್ವಜನಿಕರಿಗೆ ಭಿತ್ತಿಪತ್ರಗಳನ್ನು ವಿತರಿಸುವ ಮೂಲಕ ಅರಿವು ಮೂಡಿಸಲಾಯಿತು.

ಮೆರವಣಿಗೆಯಲ್ಲಿ ವೈದ್ಯಕೀಯ ವಿಜ್ಞಾನ ಗಳ ಸಂಸ್ಥೆ ನಿರ್ದೇಶಕ ಡಾ.ರವಿಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕೆ. ಶಂಕರ್, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಜಿಲ್ಲಾ ಏಡ್ಸ್ ಮತ್ತು ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಪಿ. ನಾಗೇಶ್ ಆರಾಧ್ಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮತ್ತಿತರರು ಭಾಗವಹಿಸಿದ್ದರು.

ತೊಗಲುಗೊಂಬೆ ಪ್ರದರ್ಶನ: ನಗರದ ಅಂಬೇಡ್ಕರ್ ಭವನದಲ್ಲಿ ಜರುಗಿದ ವಿಶ್ವ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮ ದಲ್ಲಿ ತೊಗಲುಗೊಂಬೆ ನಾಟಕ ಪ್ರದ ರ್ಶನದ ಮೂಲಕ ಕ್ಷಯ ರೋಗದ ಲಕ್ಷಣ, ಅನಾನುಕೂಲಗಳು ಹಾಗೂ ರೋಗದ ಬಗ್ಗೆ ಎಚ್ಚರ ವಹಿಸಬೇಕಾದ ಕ್ರಮಗಳ ಕುರಿತು ಜಾಗೃತಿ ಮೂಡಿಸಲಾಯಿತು.

Translate »