ಮೋದಿ.. ಮೋದಿ… ಅನ್ನೋರಿಗೆ ಹೊಡೆಯಿರಿ… ಶಾಸಕ ಶಿವಲಿಂಗೇಗೌಡ ಪ್ರಚೋದನಾತ್ಮಕ ಹೇಳಿಕೆ
ಮೈಸೂರು

ಮೋದಿ.. ಮೋದಿ… ಅನ್ನೋರಿಗೆ ಹೊಡೆಯಿರಿ… ಶಾಸಕ ಶಿವಲಿಂಗೇಗೌಡ ಪ್ರಚೋದನಾತ್ಮಕ ಹೇಳಿಕೆ

March 25, 2019

ಹಾಸನ: ಮೋದಿ… ಮೋದಿ… ಅನ್ನೋರಿಗೆ ಹೊಡೆಯಿರಿ… ಹೀಗೆಂದು ವಿವಾ ದಾತ್ಮಕ ಹೇಳಿಕೆ ನೀಡಿದವರು ಅರಸೀಕೆರೆ ಜೆಡಿಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ. ಅರಸೀಕೆರೆ ಪಟ್ಟಣ ದಲ್ಲಿ ನಡೆದ ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ನೀಡಿದ ಈ ವಿವಾದಾತ್ಮಕ ಹೇಳಿಕೆ ವೈರಲ್ ಆಗಿದೆ.

ಅಲ್ಲದೇ ಅವರು `ಬಿಜೆಪಿಯವರು ಪ್ರಚಾರಕ್ಕೆ ಬಂದಾಗ ಏಯ್… ಎಲ್ಲಯ್ಯಾ ಮೋದಿ ಹೇಳಿದ ದುಡ್ಡು… ನಿಮ್ಮ ಮೋದಿ ಯಾರ ಖಾತೆಗೆ ಹಾಕಿದ್ದಾರೆ…’ ಎಂದು ಪ್ರಶ್ನಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಶಿವಲಿಂಗೇಗೌಡರ ಈ ಪ್ರಚೋದನಾತ್ಮಕ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು ಬಿಜೆಪಿ ಮುಖಂಡರೂ ಸೇರಿದಂತೆ ಹಲವರು ಆಗ್ರಹಿಸಿದ್ದಾರೆ.

Translate »