ತಮಿಳುನಾಡಿನ ಶಿವಗಂಗಾ ಕ್ಷೇತ್ರದಿಂದ  ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಸ್ಪರ್ಧೆ
ಮೈಸೂರು

ತಮಿಳುನಾಡಿನ ಶಿವಗಂಗಾ ಕ್ಷೇತ್ರದಿಂದ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಸ್ಪರ್ಧೆ

March 25, 2019

ನವದೆಹಲಿ: ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರನ್ನು ತಮಿಳುನಾಡಿನ ಶಿವಗಂಗಾ ಕ್ಷೇತ್ರ ದಿಂದ ಕಾಂಗ್ರೆಸ್ ಕಣಕ್ಕಿಳಿಸಲಿದೆ. ಎಐ ಸಿಸಿ ಇಂದು ಪ್ರಕಟಿಸಿದ 9ನೇ ಪಟ್ಟಿ ಯಲ್ಲಿ ಕಾರ್ತಿ ಚಿದಂಬರಂ ಅವರ ಹೆಸರನ್ನು ಶಿವಗಂಗಾ ಕ್ಷೇತ್ರಕ್ಕೆ ಘೋಷಿ ಸಲಾಗಿದೆ. ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರು ಈ ಕ್ಷೇತ್ರ ದಿಂದ ಆಯ್ಕೆ ಆಗುತ್ತಾ ಬಂದಿದ್ದರು. ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಕಾಂಗ್ರೆಸ್ ತನ್ನ ಪಾಲಿಗೆ ಬಂದಿರುವ ಕ್ಷೇತ್ರಗಳಲ್ಲೊಂದಾದ ಶಿವಗಂಗಾ ಕ್ಷೇತ್ರದಲ್ಲಿ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರನ್ನು ಕಣಕ್ಕಿಳಿಸಲಿದೆ.

Translate »