ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆಯಾಗಿ ಉಮಾಭಾರತಿ ನೇಮಕ
ಮೈಸೂರು

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆಯಾಗಿ ಉಮಾಭಾರತಿ ನೇಮಕ

March 25, 2019

ನವದೆಹಲಿ: ಕೇಂದ್ರ ಸಚಿವೆ ಉಮಾಭಾರತಿ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಉಪಾ ಧ್ಯಕ್ಷೆಯಾಗಿ ನೇಮಕಗೊಂಡಿ ದ್ದಾರೆ ಎಂದು ಕೇಂದ್ರ ಸಚಿವ ಜಗತ್ ಪ್ರಕಾಶ್ ನಡ್ಡಾ ತಿಳಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಸ್ಪರ್ಧಿ ಸುವುದಿಲ್ಲ ಎಂದು ಉಮಾಭಾರತಿ ಯವರು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ತಮ್ಮ ನಿರ್ಧಾರವನ್ನು ತಿಳಿಸಿದ್ದರಿಂದ ಪಕ್ಷ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷೆಯಾಗಿ ನೇಮಿ ಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ನಡ್ಡಾ ತಿಳಿಸಿದರು. ತಾವು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸು ವುದಿಲ್ಲ, ಬದಲಾಗಿ ಪಕ್ಷದಲ್ಲಿ ಬೇರೆ ಜವಾ ಬ್ದಾರಿಗಳನ್ನು ನೀಡಿದರೆ ಸಂತೋಷ ದಿಂದ ಒಪ್ಪಿಕೊಳ್ಳುತ್ತೇನೆ ಎಂದು ಕುಡಿ ಯುವ ನೀರು ಮತ್ತು ಶುಚಿತ್ವ ಇಲಾಖೆಯ ಕೇಂದ್ರ ಸಚಿವೆಯಾಗಿದ್ದ ಉಮಾ ಭಾರತಿ ರಾಷ್ಟ್ರೀಯ ನಾಯಕರಿಗೆ ತಮ್ಮ ಸ್ಪಷ್ಟ ನಿರ್ಧಾರವನ್ನು ತಿಳಿಸಿದ್ದರು.

Translate »