ಖಾರೀಫ್ ಬೆಳೆಗೆ ಕಬಿನಿಯಿಂದ ಎಡ-ಬಲದಂಡೆ ನಾಲೆಗೆ ನೀರು ಬಿಡುಗಡೆ
ಮೈಸೂರು

ಖಾರೀಫ್ ಬೆಳೆಗೆ ಕಬಿನಿಯಿಂದ ಎಡ-ಬಲದಂಡೆ ನಾಲೆಗೆ ನೀರು ಬಿಡುಗಡೆ

September 15, 2020

ಮೈಸೂರು,ಸೆ.14-ಕಬಿನಿ ಜಲಾಶಯದಿಂದ 2020ನೇ ಸಾಲಿನ ಖಾರೀಫ್ ಬೆಳೆಗೆ ನೀರು ಹರಿ ಸುವ ಉದ್ದೇಶದಿಂದ ಕಬಿನಿ ಎಡ ಮತ್ತು ಬಲದಂಡೆ ನಾಲೆಗೆ ನೀರು ಹರಿಸಲಾಗುತ್ತಿದೆ ಎಂದು ಕಬಿನಿ ನೀರಾ ವರಿ ಸಲಹಾ ಸಮಿತಿ ಹಾಗೂ ಸದಸ್ಯ ಕಾರ್ಯದರ್ಶಿಗಳು, ಕಬಿನಿ ಮತ್ತು ವರುಣಾ ನಾಲಾ ವೃತ್ತದ ಅಧೀಕ್ಷಕ ಇಂಜಿನಿಯರ್ ತಿಳಿಸಿದ್ದಾರೆ. ಜಲಾಶಯದ ಅಚ್ಚುಕಟ್ಟು ಪ್ರದೇಶ ದಲ್ಲಿರುವ ಕೆರೆಗಳಿಗೆ ನೀರು ತುಂಬಿಸಲು ಈಗಾಗಲೇ ಕಬಿನಿ ಬಲದಂಡೆ ನಾಲೆಗೆ ಜು.28ರ ಸಂಜೆ 6ರಿಂದ ಆ.8ರ ಸಂಜೆ 6ವರೆಗೆ, ಆ8ರ ಸಂಜೆ 6ರಿಂದ ಡಿ.6ರ ಸಂಜೆ 6 ಗಂಟೆವರೆಗೆ ನೀರು ಹರಿಸಲಾಗುವುದು.

2020ರ ಖಾರೀಫ್ ಬೆಳೆಗಳಿಗಾಗಿ ಕಟ್ಟು ನೀರಿನ ವ್ಯವಸ್ಥೆಯಂತೆ ಕಬಿನಿ ಎಡದಂಡೆ ನಾಲೆ ಯಲ್ಲಿ ಆ.8ರಿಂದ ಡಿ.6ರವರೆಗೆ ಅಲ್ಪಾ ವಧಿ ಭತ್ತದ ಬೆಳೆಗಳಿಗೆ ನೀರು ಹರಿಸ ಲಾಗುವುದು. ಅಚ್ಚುಕಟ್ಟುದಾರರು ಸಂಬಂ ಧಿಸಿದ ಕಾರ್ಯಪಾಲಕ ಅಭಿಯಂತರ ರಿಂದ ಹೆಚ್ಚಿನ ವಿವರ ಪಡೆದು ತಮ್ಮ ಕೃಷಿ ಚಟುವಟಿಕೆಗಳನ್ನು ಕೃಷಿ ಇಲಾಖೆಯವರ ಸಲಹೆ ಯಂತೆ ರೂಪಿಸಿಕೊಂಡು ನೀರಿನ ಮಿತವ್ಯಯತೆ ಯನ್ನು ಸಾಧಿಸಲು ಮತ್ತು ಹೆಚ್ಚು ಇಳುವರಿ ಪಡೆಯಲು ಸಹಕರಿಸುವಂತೆ ಕಬಿನಿ ನೀರಾವರಿ ಸಲಹಾ ಸಮಿತಿ ಹಾಗೂ ಕಬಿನಿ ಮತ್ತು ವರುಣಾ ನಾಲಾ ವೃತ್ತದ ಅಧೀಕ್ಷಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

Translate »