ನಾಳಿನ ಭಾರತ್ ಬಂದ್ ಬೆಂಬಲಿಸಲು ಚಡ್ಡಿ ಧರಿಸಿ  ಕಬ್ಬಿನ ಜಲ್ಲೆ ಹಿಡಿದು ಮೆರವಣಿಗೆ ಮೂಲಕ ಮನವಿ
ಮೈಸೂರು

ನಾಳಿನ ಭಾರತ್ ಬಂದ್ ಬೆಂಬಲಿಸಲು ಚಡ್ಡಿ ಧರಿಸಿ ಕಬ್ಬಿನ ಜಲ್ಲೆ ಹಿಡಿದು ಮೆರವಣಿಗೆ ಮೂಲಕ ಮನವಿ

September 26, 2021

ಮೈಸೂರು,ಸೆ.25(ವೈಡಿಎಸ್)- ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು, ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಯಾಗಬೇಕು, ವಿದ್ಯುತ್ ಖಾಸಗೀಕರಣ ನಿಲ್ಲಬೇಕು, ಕಬ್ಬಿನ ಎಫ್‍ಆರ್‍ಪಿ ದರ ಪುನರ್ ಪರಿಶೀಲನೆಯಾಗಬೇಕು, ಅಡುಗೆ ಅನಿಲ, ಡೀಸೆಲ್-ಪೆಟ್ರೋಲ್ ದರ ಕಡಿಮೆ ಮಾಡಬೇಕೆಂದು ಒತ್ತಾಯಿಸಿ ಸಂಯುಕ್ತ ಕಿಸಾನ್ ಮೊರ್ಚಾ ಸೆ.27ರಂದು ಕರೆ ನೀಡಿ ರುವ ಭಾರತ್ ಬಂದ್‍ಗೆ ಬೆಂಬಲ ನೀಡ ಬೇಕೆಂದು ಮನವಿ ಮಾಡಲು ಕರ್ನಾಟಕ ಸಂಯುಕ್ತ ಕಿಸಾನ್ ಮೋರ್ಚಾ, ರಾಜ್ಯ ರೈತಸಂಘ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಚಡ್ಡಿ ಧರಿಸಿ ಕಬ್ಬಿನ ಜಲ್ಲೆ ಹಿಡಿದು ಮೆರವಣಿಗೆ ನಡೆಸಿದರು.

ಗನ್‍ಹೌಸ್ ಬಳಿಯಿರುವ ಕುವೆಂಪು ಉದ್ಯಾನದಿಂದ ಹೊರಟ ಮೆರವಣಿಗೆಯು ಬಸವೇಶ್ವರ ವೃತ್ತ, ಪಾಲಿಕೆ ಮುಂಭಾಗ ತೆರಳಿ ಹಳೆ ಸಂತೆಪೇಟೆ, ದೇವರಾಜ ಅರಸು ರಸ್ತೆ ವ್ಯಾಪಾರಸ್ಥರು, ಹೋಟೆಲ್ ಮಾಲೀ ಕರು, ರಸ್ತೆ ಬದಿ ವ್ಯಾಪಾರಿಗಳು, ಆಟೋ ಚಾಲಕರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಕರಪತ್ರ ನೀಡಿ ಬಂದ್‍ಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ರೈತರಿಗೆ ಮಾರಕವಾಗುವ 3 ಕೃಷಿ ಕಾಯ್ದೆ ಗಳನ್ನು ಜಾರಿಗೆ ತಂದು ಕೃಷಿ ಕ್ಷೇತ್ರವನ್ನು ಬಂಡವಾಳಶಾಹಿಗಳ ತೆಕ್ಕೆಗೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ವಿದ್ಯುತ್ ಖಾಸಗೀಕರಣ ಮಾಡುವ ಮೂಲಕ ಪಂಪ್ ಸೆಟ್‍ಗಳಿಗೆ ಉಚಿತ ವಿದ್ಯುತ್ ನಿಲ್ಲಿಸಲು ಮೀಟರ್ ಅಳವಡಿಸಲು ಯತ್ನಿಸುತ್ತಿದೆ. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಮಾಡುವಾಗ ಕನಿಷ್ಠ ಬೆಲೆಯನ್ನು ಶಾಸನ ಬದ್ಧ ಖಾತ್ರಿ ಕಾಯ್ದೆ ಜಾರಿಗೆ ತರಬೇಕೆಂದು ಒತ್ತಾಯಿಸುತ್ತಿದ್ದರೂ ಕೇಂದ್ರ ಸರ್ಕಾರ ನಿರ್ಲಕ್ಷ್ಯಧೋರಣೆ ತಾಳುತ್ತಿದೆ. ಈ ವಿಷಯ ಕುರಿತು ಕಳೆದ 10 ತಿಂಗಳಿಂದ 500ಕ್ಕೂ ಹೆಚ್ಚು ರೈತ ಸಂಘಟನೆಗಳು ಹೋರಾಟ ಮಾಡುತ್ತಿದ್ದರೂ ಗಂಭೀರವಾಗಿ ಪರಿಗಣಿ ಸಿಲ್ಲ. ಹಾಗಾಗಿ ಸೆ.27ರಂದು ಭಾರತ್ ಬಂದ್‍ಗೆ ಕರೆ ನೀಡಿದ್ದು, ಎಲ್ಲರೂ ಬೆಂಬ ಲಿಸಬೇಕು ಎಂದು ಮನವಿ ಮಾಡಿದರು.

ಬಳಿಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಪ್ರಜಾ ಸರ್ಕಾರದ ಪ್ರಧಾನ ಮಂತ್ರಿಯಾಗಿ ವರ್ತಿಸದೆ ಕಂಪನಿಗಳ ಮಾಲೀ ಕರು, ಬಂಡವಾಳಶಾಹಿಗಳ ಮರ್ಜಿಯಲ್ಲಿ ದೇಶದ ರೈತರ ಮರಣ ಶಾಸನ ಬರೆಯು ತ್ತಿದ್ದಾರೆ. ಜನರಿಗೆ ತೊಂದರೆ ಕೊಡ ಬೇಕೆಂದು ಬಂದ್ ಆಚರಿಸುತ್ತಿಲ್ಲ. ಪ್ರಜಾ ಸರ್ಕಾರ ಪ್ರಜೆಗಳ ಹಿತವನ್ನು ಮರೆತು ಆಡಳಿತ ನಡೆಸುತ್ತಿರುವ ಕಾರಣ ಪ್ರಧಾನಿಗೆ ಎಚ್ಚರಿಕೆ ನೀಡಲು ದೇಶದ ಜನತೆಯ ಪರವಾಗಿ ಸ್ವಯಂ ಪ್ರೇರಿತ ಬಂದ್ ಆಚರಿಸಲಾಗುತ್ತಿದೆ ಎಂದರು.

ಮೆರವಣಿಗೆಯಲ್ಲಿ ಕನ್ನಡ ಕಾವಲು ಪಡೆಯ ಮೋಹನ್‍ಕುಮಾರ್‍ಗೌಡ, ದಲಿತ ಸಂಘರ್ಷ ಸಮಿತಿಯ ಸೋಮಣ್ಣ, ದೇವ ರಾಜ್, ಪುಟ್ಟಲಕ್ಷ್ಮಮ್ಮ, ಶಂಕರ, ಡಿಪಿಕೆ ಪರ ಮೇಶ್, ನಾಗರಾಜ್, ರಾಜಣ್ಣ, ದೇವೇಂದ್ರ ಕುಮಾರ್, ವೆಂಕಟೇಶ್, ಮಹದೇವಸ್ವಾಮಿ, ಬಿ.ಪಿ.ರಾಜೇಂದ್ರ, ಪರಶಿವಮೂರ್ತಿ, ರಂಗ ರಾಜ್ ಮತ್ತಿತರರು ಪಾಲ್ಗೊಂಡಿದ್ದರು.

ಬೈಕ್ ರ್ಯಾಲಿ: ಭಾರತ್ ಬಂದ್ ಬೆಂಬ ಲಿಸಿ ಸಂಯುಕ್ತ ಕಿಸಾನ್ ಮೋರ್ಚಾ, ರೈತ, ಕಾರ್ಮಿಕ, ದಲಿತ ಹಾಗೂ ಮಹಿಳಾ ಸಂಯುಕ್ತ ಹೋರಾಟ ಸಮಿತಿ ಸದಸ್ಯರು ಶನಿವಾರ ಸಂಜೆ ಜೆ.ಕೆ.ಮೈದಾನದಿಂದ ಬೃಹತ್ ಬೈಕ್ ರ್ಯಾಲಿ ನಡೆಸಿದರು. ಈ ವೇಳೆ ಮಾರ್ಗದುದ್ದಕ್ಕೂ ಬಂದ್ ಬೆಂಬಲಿಸು ವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

Translate »