ಶನಿವಾರಸಂತೆಯಲ್ಲಿ ವಾರಾಂತ್ಯ ಕಫ್ರ್ಯೂ ಉಲ್ಲಂಘನೆ
ಕೊಡಗು

ಶನಿವಾರಸಂತೆಯಲ್ಲಿ ವಾರಾಂತ್ಯ ಕಫ್ರ್ಯೂ ಉಲ್ಲಂಘನೆ

August 15, 2021

ಮಡಿಕೇರಿ, ಆ.14- ಕೊಡಗಿನಲ್ಲಿ ಕೋವಿಡ್ ಮುಂಜಾಗೃತಾ ಕ್ರಮವಾಗಿ ವಾರಾಂತ್ಯ ಕಫ್ರ್ಯೂ ಜಾರಿ ಮಾಡಿದ್ದರೂ ಶನಿವಾರ ಸಂತೆ ಜನ ಹಾಗೂ ಸಂತೆ ವ್ಯಾಪಾರಿಗಳು ಮಾತ್ರ ಜಿಲ್ಲಾಡಳಿತದ ಆದೇಶವನ್ನು ಉಲ್ಲಂಘಿಸಿದರು. ಕಫ್ರ್ಯೂ ಕಾರಣದಿಂದ ಶನಿವಾರ ನಡೆಯಬೇಕಾಗಿದ್ದ ವಾರದ ಸಂತೆಯನ್ನು ರದ್ದುಗೊಳಿಸಲಾಗಿತ್ತು. ಈ ಬಗ್ಗೆ ಮೊದಲೇ ಆದೇಶ ಹೊರಡಿಸಿದ್ದರೂ ಮೈಸೂರು, ಅರಕಲಗೋಡು ಮತ್ತು ಹಾಸನ ಭಾಗದ ವ್ಯಾಪಾರಿಗಳು ಮಾಮೂಲಿನಂತೆ ಸಂತೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿ ದ್ದರು. ಇದೇ ಕಾರಣಕ್ಕೆ ಜನರು ಕೂಡ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದರು.
ಮಾಸ್ಕ್ ಧರಿಸದ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನರನ್ನು ಚದುರಿ ಸಲು ಗ್ರಾ.ಪಂ ಪ್ರತಿನಿಧಿಗಳು ಪ್ರಯತ್ನಿಸಿ ದರು. ಈ ಸಂದರ್ಭ ಮಾತನಾಡಿದ ಶನಿವಾರಸಂತೆ ಗ್ರಾಪಂ ಅಧ್ಯಕ್ಷೆ ಸರೋಜ ಶೇಖರ್ ಸಂತೆಗೆ ಅವಕಾಶವಿಲ್ಲವೆಂದು ನಿನ್ನೆಯೆ ಸೂಚಿಸಲಾಗಿದೆ. ಆದರೂ ಇಂದು ವ್ಯಾಪಾರಿಗಳು ಬಂದು ಮಾರಾಟದಲ್ಲಿ ತೊಡಗಿದ್ದರು, ಇವರುಗಳನ್ನು ಕಳುಹಿಸ ಲಾಗಿದೆ ಎಂದರು. ಅಕ್ಕಪಕ್ಕದ ಜಿಲ್ಲೆ ಗಳಿಂದ ವ್ಯಾಪಾರಕ್ಕೆಂದು ಇಲ್ಲಿಗೆ ಸಂತೆ ವ್ಯಾಪಾರಿಗಳು ಬರುತ್ತಿದ್ದು, ಗಡಿಯಲ್ಲಿ ಬಿಗಿ ಕ್ರಮ ಕೈಗೊಂಡರೆ ನಿಯಂತ್ರಿಸ ಬಹುದು ಎಂದು ಅಭಿಪ್ರಾಯಪಟ್ಟರು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮೇದಪ್ಪ ಮಾತನಾಡಿ, ಗಡಿ ಭಾಗದಲ್ಲಿ ಬಿಗಿ ಕ್ರಮ ಕೈಗೊಳ್ಳಲು ಸಂಬಂಧಿಸಿದವರಲ್ಲಿ ಮನವಿ ಮಾಡಿಕೊಳ್ಳಲಾಗುವುದು ಎಂದರು.

ಕಫ್ರ್ಯೂ ಬೇಡ: ವಾರಾಂತ್ಯದ ಕಫ್ರ್ಯೂ ನಿಂದ ಯಾವುದೇ ಪ್ರಯೋಜನವಿಲ್ಲ, ಇದರಿಂದ ಕೋವಿಡ್ ಸೋಂಕು ವ್ಯಾಪಿಸು ವುದನ್ನು ತಡೆಗಟ್ಟಬಹುದು ಎನ್ನುವುದು ದೂರದ ಮಾತು. ಇದರ ಬದಲಿಗೆ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಿ ಕೋವಿಡ್ ನಿಯಮ ಕಡ್ಡಾಯ ಪಾಲನೆಗೆ ಕ್ರಮ ಕೈಗೊಳ್ಳುವುದು ಸೂಕ್ತವೆಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

Translate »